ಭಾಗ್ಯಪುರ ಮರುನಾಮಕರಣಕ್ಕೆ ಸಂಘಟನೆಗಳ ಒತ್ತಾಯ

ಬಾಗೇಪಲ್ಲಿ:ನ,೧೨:ತಾಲ್ಲೂಕನ್ನು ’ಭಾಗ್ಯಪುರ’ ಎಂದು ಕನ್ನಡಿಕರಸಿ ನಾಮಕರಣ ಮಾಡಬೇಕು. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಹಾಗೂ ತಾಲ್ಲೂಕು ಕನ್ನಡ ಸೇನೆ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ವಿ.ಬಾಬಾಜಾನ್ ನೇತೃತ್ವದಲ್ಲಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಕೆಲ ಕಾಲ ಪ್ರತಿಭಟನೆ ಮಾಡಿ ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರ್ ಎಂ ನಾಗರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ವಿಶ್ವ ನಿರ್ಮಾಣ ಸೇನೆ ತಾಲ್ಲೂಕು ಘಟಕ ಅದ್ಯಕ್ಷ ಮಂಜುನಾಥ ಮಾತನಾಡಿ, ’ಬಾಗೇಪಲ್ಲಿ ಆಂಧ್ರಪ್ರದೇಶದ ಗಡಿಯಲ್ಲಿದ್ದು, ಇಲ್ಲಿ ಆಡುಭಾಷೆ ತೆಲುಗು ಆದರೂ ವ್ಯವಹಾರಿಕವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಈ ಹಿಂದೆ ಹೈದರಾಬಾದ್-ಕರ್ನಾಟಕದ ಪ್ರಾಂತ್ಯ ಆಗಿರುವ ಸಂದರ್ಭದಲ್ಲಿ ಬಾಗೇಪಲ್ಲಿ ಸೇರಿದಂತೆ ಆಂಧ್ರಪ್ರದೇಶದ ಗಡಿಯಲ್ಲಿನ ಬಹುತೇಕ ಗ್ರಾಮಗಳಿಗೆ ಪಲ್ಲಿ ಎಂದು ಸೇರಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಬಾಗೇಪಲ್ಲಿ ತಾಲ್ಲೂಕು ಇರುವುದರಿಂದ, ಬಾಗೇಪಲ್ಲಿ ತಾಲ್ಲೂಕು ಅನ್ನು ಭಾಗ್ಯಪುರ ತಾಲ್ಲೂಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಣೆ ಮಾಡಬೇಕು’ ಎಂದು ಹೇಳಿದರು.
ಬಾಗೇಪಲ್ಲಿ ತಾಲ್ಲೂಕು ಕನ್ನಡ ಸೇನೆ ಘಟಕ ಅದ್ಯಕ್ಷ ರವೀಂದ್ರ ಮಾತನಾಡಿ
’ಅನೇಕ ವರ್ಷಗಳಿಂದ ಕನ್ನಡ ಪರ ಹೋರಾಟಗಾರರು, ಬುದ್ಧಿಜೀವಿಗಳು, ಯುವಜನ ವಿದ್ಯಾರ್ಥಿಗಳು ಬಾಗೇಪಲ್ಲಿ ಯನ್ನು ಕನ್ನಡಿಕರಿಸಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಡಿಸೆಂಬರ್ ತಿಂಗಳ ಒಳಗೆ ಭಾಗ್ಯಪುರ ತಾಲ್ಲೂಕು ಎಂದು ಘೋಷಣೆ ಮಾಡದಿದ್ದಲ್ಲಿ, ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ನಾಗರಾಜುರವರಿಗೆ ಮನವಿ ಪತ್ರ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಬಾಬಾಜಾನ್, ರವೀಂದ್ರ, ಮುನಿರಾಜು, ಕರಾಟೆ ರಿಯಾಜ್,ಹಿದಾಯಿತ್ತುಲ್ ಮಂಜುನಾಥ, ಸುಧಾಕರ, ಶಾಂತಿ ಆಸ್ಪಿಯಾ,ಪಾತಪಾಳ್ಯ ರಂಗನಾಥ್,ಇನ್ನೂ ಮುಂತಾದವರು ಇದ್ದರು.