ಭಾಗವತ ಕಥಾ ಸಪ್ತಾಹಕ್ಕೆ ಚಾಲನೆ

ಶಹಾಬಾದ:ಜೂ.21:ನಗರದ ಶ್ರೀ ಜಗದಂಬಾ ದೇವಿ ಮೂರ್ತಿ ಪ್ರತಿಷ್ಠಾಪನೆ 38ನೇ ವಾರ್ಷಿಕೋತ್ಸವ ನಿಮಿತ್ತ ಜೂನ್ 20 ರಿಂದ ಜೂನ್ 26 ವರೆಗೆ ಆಯೋಜಿಸಿರುವ ಶ್ರೀಮದ್ ಭಾಗವತ ಕಥಾ ಸಪ್ತಾಹ ಮಂಗಳವಾರ ಸಂಜೆ ಭವ್ಯ ಮೆರಣಿಗೆಯೊಂದಗೆ ಕಥಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ಸಂಜೆ ಶ್ರೀ ಜಗದಂಬಾ ದೇವಿ ದೇವಸ್ಥಾನದಿಂದ 108 ಜನ ಮುತೈದೆಯರು ತಲೆಯ ಮೇಲೆ ಪೂರ್ಣಕುಂಭ ಕಳಸ ಹೊತ್ತು ಶ್ರೀಮದ್ ಭಾಗವತ ಕಥಾ ಗ್ರಂಥವನ್ನ ಪಲ್ಲಕ್ಕಿಯಲ್ಲಿ ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಭಾರತ ಚೌಕ ಮೂಲಕ ವಿಠಲ ಮಂದಿರ, ಹನುಮಾನ ಮಂದಿರ ಮೂಲಕ ದೇವಸ್ಥಾನ ತಲುಪಿತು.

ಸಂಜೆ ದೇವಸ್ಥಾನದ ಸಭಾಗೃಹದಲ್ಲಿ ಉದ್ಯಮಿ ಬಂಕಟ್ ಸಾರಡಾ ಅವರು ಭಾಗವತ ಸಪ್ತಾಹಕ್ಕೆ ಚಾಲನೆ ನೀಡಿದರು.ಪೂಣೆಯ ಶ್ರೀ ಚಂದ್ರಕಾಂತ ಮಹೇಂದ್ರಕರ್ ಮಹಾರಾಜ ಅವರು ಶ್ರೀಭಾಗವತ ಕಥಾ ಶ್ರವಣ ಮಾಡಿದರು.

ನಗರದ ಶ್ರೀಜಗದಂಬಾ ದೇವಸ್ಥಾನದಲ್ಲಿ ಜೂನ್ 20 ರಿಂದ ದೇವಿಯ 38 ನೇ ಮೂರ್ತಿ ಸ್ಥಾಪನೆ ಉತ್ಸವ ನಿಮಿತ್ತ ವಿಶೇಷ ಪೂಜೆ, ಶ್ರೀಮದ ಭಾಗವತ ಕಥಾ ಸಪ್ತಾಹವನ್ನು ಪುಣೆಯ ಪ್ರಸಿದ್ಧ ಕಥಾಕಾರರು ಚಂದ್ರಕಾಂತ ಮಹೇಂದ್ರಕರ್ ಚಾಲನೆ ಮಾಡಿದರು.

ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತ್ತು. ಮಧ್ಯಾಹ್ನ ಮಹಿಳೆಯರು ದೇವಸ್ಥಾನದಲ್ಲಿ ವಿಠ್ಠಲ್ ರುಕ್ಮಾಯಿ ದೇವಸ್ಥಾನದ ವರೆಗೆ ಭÀಜನೆಯ ಮೂಲಕ ಪಲ್ಲಕ್ಕಿ, ಕುಂಭ, ಅದ್ದೂರಿಯಾಗಿ ನಡೆಯಿತು.

ಜೂ.23 ಕ್ಕೆ ಕೃಷ್ಣ ಜನ್ಮಚರಣೆ, 24 ಕ್ಕೆ ಗೋವರ್ಧನ ಪೂಜೆ ಹಾಗೂ ಕೃಷ್ಣ ರಾಸಲೀಲಾ, 25ಕ್ಕೆ ಕೃಷ್ಣ ರುಕ್ಮೀಣಿ ಸ್ವಯಂವರ ರಾತ್ರಿ ವಿಠ್ಠಲ್ ಮಂದಿರ ಹಾಗೂ ಹನುಮಾನ ಮಂದಿರ ಭಜನಾ ಮಂಡಳಿ ಇವರಿಂದ ಭಜನೆ ನಡೆಯುತ್ತದೆ. 26ಕ್ಕೆ ಬೆಳಗ್ಗೆ ಜಗದಂಬಾ ದೇವಿಗೆ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಮೆರವಣಿಗೆ, ದೇವಿಯ ಮಹಾಮಂಗಳಾರತಿ 26ರಂದು ಗೋಪಾಲ ಕಾಲಾ ಧೈ ಹಂಡಿ ಹಾಗೂ ನಗರ ಪ್ರದಕ್ಷಣೆ ಇರುತ್ತದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ದತ್ತಾ ಜಿಂಗಾಡೆ ಅವರು ತಿಳಿಸಿದರು.

ದೇವಸ್ಥಾನ ಸಮಿತಿಯ ಡಾ.ಅಶೋಕ ಜಿಂಗಾಡೆ, ರಮೇಶ ಅಷ್ಟೇಕರ, ಅನಿಲ ಹಿಬಾರೆ, ಸಂತೋಷ ಪುಲಸೆ, ನಾಗನಾಥ ಮಹೇಂದ್ರಕರ, ಸಚಿನ ಹಂಚಾಟೆ, ರಾಹುಕ ಕಮಿತಕರ್, ಅಂಬ್ರೇಷ ಪುಲಸೆ, ಬಂಕಟಸೇಠ ಸಾರಾಡ. ಜಗದಂಬಾ ದೇವಸ್ಥಾನ ಮಹಿಳಾ ಸಂಘದ ಪದಾಕಾರಿಗಳೂ, ವಿವಿಧ ಸಮಾಜದ ಮಹಿಳೆಯರು ಪಾಲ್ಗೊಂಡಿದರು. ದೇವಸ್ಥಾನ ಸಮಿತಿ ಸದಸ್ಯರು, ನಗರದ ಗಣ್ಯರು, ವಿವಿಧ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.