ತಾಳಿಕೋಟೆ:ಜೂ.28: ಪಟ್ಟಣದಲ್ಲಿ 5 ದಿನಗಳ ಕಾಲ ಸಂಭ್ರಮದಿಂದ ನಡೆದ ಆರಾಧ್ಯ ದೇವಿ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರೆಯು ರಾಜವಾಡೆಯ ಪಾದಗಟ್ಟೆಯಿಂದ ಶ್ರೀ ದೇವಿ ಮಂದಿರದ ವರೆಗೆ ಶ್ರೀ ಗ್ರಾಮದೇವಿಯನ್ನು ಭವ್ಯ ರಥದಲ್ಲಿ ಕೂಡಿಸಿ ಮೇರವಣಿಗೆಯೊಂದಿಗೆ ಗವಿ ಪ್ರವೆಶ ಕಾರ್ಯಕ್ರಮವು ಮಂಗಳವಾರರಂದು ಸಾಯಂಕಾಲ ನಡೆಯಿತು.
ಮೇರವಣಿಗೆಯ ಯುದ್ದಕ್ಕೂ ಡೋಳ್ಳಿ ವಾಧ್ಯ, ಯುವಕರಿಂದ ಕೋಲಾಟ, ವಿವಿಧ ವಾಧ್ಯಮೇಳಗಳೊಂದಿಗೆ ನಡೆಯಿತ್ತಲ್ಲದೇ ದಾರಿಯುದ್ದಕ್ಕೂ ಭಕ್ತಾಧಿಗಳು ತಮ್ಮ ತಮ್ಮ ಮನೆಯ ಮುಂದೆ ರಸ್ತೆಯನ್ನು ನೀರಿನಿಂದ ತೊಳೆದು ರಂಗೋಲಿ ಬಿಡಿಸಿ ಎಲ್ಲ ಕೋಮಿನ ಜನರು ಪಾಲ್ಗೊಂಡು ಶ್ರೀ ಗ್ರಾಮದೇವಿ ಗವಿ ಪ್ರವೇಶ ಕಾರ್ಯಕ್ರಮದಲ್ಲಿ ಭಾವೈಕ್ಯತೆಗೆ ಸಾಕ್ಷೀಯಾದರು.
ಜೂನ 23ರಿಂದ ಪ್ರಾರಂಭಗೊಂಡಿದ್ದ ಶ್ರೀ ಗ್ರಾಮದೇವತೆಯ ಜಾತ್ರೋತ್ಸವವು ರಾಜವಾಡೆಯ ಮೈಧಾನದಲ್ಲಿ ಶ್ರೀ ದೇವಿಯ ಪಾದಗಟ್ಟೆಯ ಮುಂದೆ ದಿನನಿತ್ಯ ಗೀಗಿಪದ, ಭಾರ ಎತ್ತುವ ಸ್ಪರ್ದೆ, ವಿವಿಧ ಮನರಂಜನೆ ಕಾರ್ಯಕ್ರಮಗಳು ಅಲ್ಲದೇ ಸಾಮಾಜಿ ನಾಟಕ, ಬೈಲಾಟ ಪ್ರದರ್ಶನಗಳು ನಡೆದವಲ್ಲದೇ ಈ ಜಾತ್ರೋತ್ಸವದಲ್ಲಿ ಮುಂಬೈ, ಪುಣೆ, ಗೋವಾ, ಬೆಂಗಳೂರ, ಹುಬ್ಬಳ್ಳಿ, ಗುಲಬರ್ಗಾ, ಅಲ್ಲದೇ ಹೊರರಾಜ್ಯದಿಂದಲೂ ಅನೇಕ ಭಕ್ತಾಧಿಗಳು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.
ಇಂದು ಸಾಯಂಕಾಲ ನಡೆದ ಶ್ರೀ ಗ್ರಾಮದೇವತೆಯ ಗವಿ ಪ್ರವೇಶ ಕಾರ್ಯಕ್ರಮದೊಂದಿಗೆ 5 ದಿನಗಳ ಕಾಲ ನಡೆದ ಜಾತ್ರಾ ಉತ್ಸವವು ಸಂಪನ್ನಗೊಂಡಿತು.
ಈ ಶ್ರೀ ಗ್ರಾಮದೇವತೆ ಗವಿ ಪ್ರವೇಶ ಭವ್ಯ ಮೆರವಣಿಗೆಯಲ್ಲಿ ವಿವಿಧ ರಾಜ್ಯ, ಮತ್ತು ಜಿಲ್ಲೆಗಳಿಂದ ಆಗಮಿಸಿದ ಮತ್ತು ಪಟ್ಟಣದ ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವಿ ಕೃಪೆಗೆ ಪಾತ್ರರಾದರು.