ಭವ್ಯ ಭಾರತ ನಿರ್ಮಾಣಕ್ಕೆ ಶ್ರೀ ಗುರು ಕೃಪಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹೊರಹೊಮ್ಮಲಿ:ಅಭಿಷೇಕ

ವಿಜಯಪುರ,ಫೆ.1:ಇಸ್ರೋ ಸಂಸ್ಥೆಯಲ್ಲಿ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಬರಬೇಕು. ಭವ್ಯ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಹಕಾರಿಯಾಗಬೇಕೆಂದು ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಅವರು ಕರೆ ನೀಡಿದರು.

ಜಿಲ್ಲೆಯ ಸಿಂದಗಿಯ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಈ ಸಂಸ್ಥೆಯಲ್ಲಿ ದೇಶದ ಅತ್ಯುನ್ನತ ಸಂಸ್ಥೆ ಇಸ್ರೊಕ್ಕೆ ಸೇರಿಸುವ ಮಟ್ಟದಲ್ಲಿ ಈ ಗುರುಕೃಪಾ ಶಾಲೆಯಲ್ಲಿ ಬೋಧನೆ ಆಗುತ್ತಿದೆ, ಇಲ್ಲಿಯ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಲ್ಲಿಯ ಶಿಕ್ಷಕರು ಉತ್ತಮ ಜ್ಞಾನಾರ್ಜನೆ ಮಾಡುತ್ತಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದÀು ಸಲಹೆ ನೀಡಿದರು.

ಗುರುವಿನ ಸ್ಮರಣೆ ಸದಾ ನಮ್ಮಲ್ಲಿರಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳು ತಮ್ಮಲ್ಲಿ ಜಾಣ್ಮೆ ಇದ್ದು, ಸಂಕುಚಿತ ಮನೋಭಾವನೆ ಇಟ್ಟುಕೊಳ್ಳದೇ ಧೈರ್ಯದಲ್ಲಿ ಮುನ್ನುಗ್ಗಿ ಸಾಧನೆ ಮಾಡಿದಾಗಲೇ ಗುರಿ ಮುಟ್ಟಲು ಸಾಧ್ಯ. ಅದಕ್ಕೆ ನಾನೆ ಒಂದು ಉದಾಹರಣೆ ಎಂದು ತಮ್ಮ ಜೀವನದ ಇತಿಹಾಸವನ್ನೆ ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು. ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಲಿತ ಶಾಲೆಗೆ ಕೀರ್ತಿ ತರುವಂತವರಾಗಬೇಕೆಂದರು.

ಬಸವ ಸಮಿತಿ ಅಧ್ಯಕ್ಷ ಎನ್. ಎಸ್. ಪಾಟೀಲ ಮಾತನಾಡಿ, ಎಲ್ಲ ಮಕ್ಕಳ ಪ್ರತಿಭೆ ನೋಡಿ ಪುರಷ್ಕರಿಸುವ ಕಾರ್ಯವಾಗಲು ಕಾರ್ಯಕ್ರಮದ ಅಂತ್ಯದವರಗೆ ಕುಳಿತು ಪಾಲಕರು ವಿದ್ಯಾರ್ಥಿಗಳಿಗೆ ಹುರಿದುಂಬಿಸಬೇಕೆಂದು ಪಾಲಕರಿಗೆ ಕಿವಿಮಾತು ಹೇಳಿದರು.

ನಿಡಗುಂದಿಯ ಜಿ.ವಿ.ವಿ.ಎಸ್ ಬಿಎಡ್ ಕಾಲೇಜ್ ಪ್ರಿನ್ಸಿಪಾಲೆ ಡಾ. ಸವಿತಾ ದೇಸಾಯಿ, ಅಥರ್ಗಾದ ಜ್ಞಾನ ಭಾರತಿ ಶಾಲೆಯ ಆಡಳಿತಾಧಿಕಾರಿ ಆರ್. ಬಿ. ಪುರೋಹಿತ, ಸಿಂದಗಿಯ ಎಚ್.ಡಿ.ಎಫ್.ಸಿ. ಬ್ಯಾಂಕ್ ವ್ಯವಸ್ಥಾಪಕ ವಿನಾಯಕ ಮಹೀಂದ್ರಕರ ಅವರು ಮಾತನಾಡಿದರು,

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಎಚ್.ಟಿ. ಕುಲಕರ್ಣಿ ಅವರು ಮಾತನಾಡಿದರು.

ಇದೇ ವೇಳೆ ಇಸ್ರೋ ವಿಜಾÐನಿ ಆಭಿಷೇಕ ಹಾಗೂ ವಿದ್ಯಾರ್ಥಿಗಳ ಮಧ್ಯೆ ಸಂವಾದ ನಡೆಯಿತು.

ಸಂಸ್ಥೆಯ ವಾರ್ಷಿಕ ವರದಿಯನ್ನು ಮುಖ್ಯ ಗುರುಮಾತೆ ಹೇಮಾ ಪೊದ್ದಾರ ಮಂಡಿಸಿದರು. ವೇದಿಕೆಯ ಮೇಲೆ ಶ್ರೀ ಗುರು ಕೃಪಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಚ್. ಜಿ. ಪೊದ್ದಾರ ಉಪಸ್ಥಿತರಿದ್ದರು.

ಸುಮಾರು ರಾತ್ರಿ 10 ಗಂಟೆಯವರೆಗೆ ಕಲಿಕೆ ನಿರಂತರ ವಿಷಯದ ಮೇಲೆ ಮನರಂಜನಾ ಕಾರ್ಯಕ್ರಮಗಳು ನಡೆದವು