ಭವ್ಯ ಭಾರತವನ್ನ ಸುಭದ್ರ ಭಾರತವನ್ನಾಗಿಸೋಣ

ಚಿತ್ರದುರ್ಗ. ಸೆ.೨೦;ಪ್ರಧಾನಿ ಮಂತ್ರಿಗಳು ತಮ್ಮ ಕನಸಿನ ಭವ್ಯ ಭಾರತÀವನ್ನ ಸುಭದ್ರ ಭಾರತÀನ್ನಾಗಿಸಲಿ, ತಾಂತ್ರಿಕ ಮಾಹಿತಿಯಿಂದ ಜಗತ್ತಿನ ಗಮನಸೆಳೆಯುತ್ತಿರುವ ಭಾರತ ಭ್ರಷ್ಟಾಚಾರ ಮುಕ್ತವಾಗಲಿ, ಅವರ ಸ್ವಚ್ಛ ಭಾರತದ ಕನಸು ನನಸಾಗಲಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಚ್. ಕೆ. ಎಸ್. ಸ್ವಾಮಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ನಗರದ ತಮಟಕಲ್ಲು ರಸ್ತೆಯಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರೋಟರಿ ಕ್ಲಬ್‌ನ ಸಹಯೋಗದಲ್ಲಿ ಆಯೋಜಿಸಿದ್ದ “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಡತನ ರೇಖೆ ಕೆಳಗಿರುವ ಜನರನ್ನು ಮೇಲೆತ್ತಬೇಕು ಹಾಗೂ ಪ್ರತಿಯೊಬ್ಬರಿಗೂ ಸಹ ಸಮತಾವಾದದ ಅನುಭವ ಆಗಬೇಕು, ಮೇಲುಕೀಳು ತೊಲಗಬೇಕು, ಅಸ್ಪöÈಶ್ಯತೆ ನಿವಾರಣೆಯಾಗಬೇಕು, ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಬೇಕು, ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು ಎಂಬ ಕನಸುಗಳನ್ನು ಕಾಣುತ್ತಿರುವ ಪ್ರಧಾನಮಂತ್ರಿಗಳಿಗೆ ಜನರು ಸಹ ಉತ್ತಮ ಸಹಕಾರ ನೀಡಿ ಸ್ವಚ್ಛ ಪರಿಸರವನ್ನು ನಿರ್ಮಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ನದಿ ಮೂಲಗಳ ಸ್ವಚ್ಚತೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಗಂಗಾ ನದಿಯ ಸ್ವಚ್ಛತೆ ಬಗ್ಗೆ ಶ್ರಮವಹಿಸಿದ ಪ್ರಧಾನಮಂತ್ರಿಯವರ ಯೋಜನೆಗಳನ್ನು ಜನ ಅರ್ಥ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಎಸೆಯದೆ ಎಲ್ಲ ಕಡೆ ಕಸ ನಿರ್ವಹಣೆ ಮಾಡಿ ಮಾಲಿನ್ಯ ತಡೆಯಲು ಸಹ ಪ್ರಯತ್ನಿಸಬೇಕು. ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಪರಿಸರದ ಮೇಲೆ ಹೆಚ್ಚು ಒತ್ತಡ ಬೀಳುತ್ತಿದ್ದು ಅವುಗಳ ನಿಗ್ರಹಕ್ಕೆ ಜನರು ಜಾಗೃತಿಗೆ ಪ್ರಯತ್ನಿಸಬೇಕು. ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸುವಂತೆ, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕು. ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿರುವುದನ್ನು ತಡೆಯಬೇಕಾಗಿದೆ ಹಾಗೂ ಕರೋನ ನಿಗ್ರಹಕ್ಕೆ ಲಸಿಕಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು. ಕರೋನÀ ಮಹಾಮಾರಿಯಿಂದ ಭಾರತದ ಆರ್ಥಿಕ ಸ್ಥಿತಿ ಮೇಲೆ ತುಂಬಾ ಹೊಡೆತ ಬಿದ್ದಿರುವುದರಿಂದ, ಆದಷ್ಟು ಬೇಗ ಕರೋನÀ ನಿಗ್ರಹಿಸುವ ಎಲ್ಲಾ ಮಾರ್ಗಗಳನ್ನು ಅನುಸರಿಸಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಇಟ್ಟುಕೊಂಡು, ಸ್ಯಾನಿಟೈಸರ್ ಬಳಸಿ, ಮಕ್ಕಳಿಗೆ ಕರೋನ ತಗಲದಂತೆ ಪ್ರಯತ್ನಿಸಬೇಕು. ಸ್ವದೇಶಿ ತತ್ವವನ್ನು, ಖಾದಿ ಪ್ರಚಾರವನ್ನ ಹೆಚ್ಚು ಮಾಡಿ, ಗ್ರಾಮೀಣ ಜನರಿಗೆ ಬದುಕಿಗೆ ಆಸರೆ ನೀಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ವತಿಯಿಂದ ಮಕ್ಕಳಿಗೆ ಟೀ ಶರ್ಟ್ಗಳನ್ನ ನೀಡಿ, ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಮಕ್ಕಳು ಘೋಷಣೆ ಕೂಗಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ಶ್ರೀಮತಿ ರಾಜೇಶ್ವರಿ ಸಿದ್ಧರಾಮ್, ರೆಡ್ ಕ್ರಾಸ್ ಗಾಯತ್ರಿ ಶಿವರಾಂ, ಶಿವರಾಂ, ರೋಟರಿ ಕ್ಬ್ ಕಾರ್ಯದರ್ಶಿ ಸವಿತಾ, ರೋ. ಮಧುಸೂದನ್, ಎಚ್. ಎಸ್. ರಚನ. ಪ್ರೇರಣಾ ಇನ್ನಿತರರು ಭಾಗವಹಿಸಿದ್ದರು.Attachments area