ಭವಿಷ್ಯ ನಿಧಿ ಕಛೇರಿಯ ನೌಕರರಿಗೆ ‌ಕೋವಿಡ್ ಲಸಿಕೆ

ಕಲಬುರಗಿ:ಎ.29: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ‌ನಿಧಿ‌‌ ಕಛೇರಿಯ ಎಲ್ಲಾ ನೌಕರರಿಗೂ ಮತ್ತು ಸಿಬ್ಬಂದಿ ವರ್ಗದವರಿಗೆ ಕರೋನಾ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೋವಿಶಿಲ್ಡ್ ಮೋದಲನೇ ಡೋಸ್ ಲಸಿಕೆಯನ್ನು ಮಾಣಿಕೇಶ್ವರಿ ನಗರ ಆರೋಗ್ಯ ಕೆಂದ್ರದ ವತಿಯಿಂದ ನೀಡಲಾಯಿತು.

ಭವಿಷ್ಯ ನಿಧಿ ಇಲಾಖೆ ಅಗತ್ಯ ಸೇವಾ ಕ್ಷೇತ್ರವಾಗಿದ್ದು ಯಾವುದೇ ಕಾರಣಕ್ಕೂ ರೋಗದ ಬಗ್ಗೆ ನಿರ್ಲಕ್ಷ್ಯ ತೋರದೆ ಪ್ರತಿಯೊಬ್ಬ ನೌಕರರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಛೇರಿಯ‌ ಕೆಲಸಗಳನ್ನು ನಿರ್ವಹಿಸಬೇಕು. ಕಡ್ಡಾಯವಾಗಿ ಸೆನಿಟೈಸರ್ ಉಪಯೋಗಿಸುವುದು ಮತ್ತು ಪ್ರತಿಯೊಬ್ಬರೂ ಮಾಸ್ಕ ಧರಿಸುವುದರ ಮೂಲಕ ಸೊಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕ್ಷೇತ್ರಿಯ ಭವಿಷ್ಯ ನಿಧಿ ಆಯುಕ್ತರು ತಿಳಿಸಿದರು.