ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣವೇ ನಿರ್ಣಾಯಕ : ಎಸ್. ಆರ್. ನಿರಂಜನ್

ಬೀದರ್: ಜ.10:ನಗರದ ಪ್ರತಿಷ್ಠಿತ ಗುರು ನಾನಕ ದೇವ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣದಲ್ಲಿ ಶ್ರೇಷ್ಠತೆಯ ಕುರಿತು ತಜ್ಞರ ಸಂವಾದವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಸಹಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಪೆÇ್ರ. ಎಸ್.ಆರ್.ನಿರಂಜನ್ ಅವರು ಮಾತನಾಡುತ್ತ ಭವಿಷ್ಯನ್ನು ರೂಪಿಸುವಲ್ಲಿ ಶಿಕ್ಷಣವೇ ನಿರ್ಣಾಯಕ ಪಾತ್ರವಹಿಸುತ್ತದೆ. ವೇಗವಾಗಿ ವಿಕಾಸಗೊಳ್ಳುತ್ತಿರುವ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಬಹುಮುಖಿ ವಿಧಾನದ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು. ಶೈಕ್ಷಣಿಕ ಕಠಿಣತೆ, ಕೌಶಲ್ಯ ಅಭಿವೃದ್ಧಿ, ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಒಳಗೊಂಡಿರುವ ಶ್ರೇಷ್ಠತೆಯ ಸಮಗ್ರ ವ್ಯಾಖ್ಯಾನಕ್ಕಾಗಿ ಪ್ರತಿಪಾದಿಸಿದರು.
ಕಲಿಕೆಯು ಹೆಚ್ಚು ಪರಿಣಾಮಕಾರಿಯಾಗಿರಲು ಮತ್ತು ಹೆಚ್ಚು ವಿಶಾಲವಾಗಿರಲು, ವಿದ್ಯಾರ್ಥಿಗಳು ಸ್ವಂತವಾಗಿ ಶ್ರಮಿಸಬೇಕು ಮತ್ತು ಪರಿಣಾಮಕಾರಿ ಪರಿಹಾರಗಳೊಂದಿಗೆ ಮುಂದೆ ಸಾಗಬೇಕು, ನವೀನ ಬೋಧನಾ ವಿಧಾನಗಳನ್ನು ಅಳವಿಡಿಸಕೊಳ್ಳಬೇಕು, ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಮುಂದೆ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಅವರು ಮುಂದುವರೆದು ಮಾತನಾಡುತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತಕ ಬದಲಾವಣೆಯನ್ನು ಸಾಧಿಸಲು ಸರ್ಕಾರಿ ಸಂಸ್ಥೆಗಳು ಹಾಗೂ ಸಾವಿರಾರು ವಿಶ್ವವಿದ್ಯಾಲಯಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮಾತ್ರ ಕೇವಲ ಕೆಲವು ವಿಶ್ವವಿದ್ಯಾಲಯಗಳು ಉನ್ನತ ದರ್ಜೆಯಲ್ಲಿ ಗುರುತಿಸಿಕೊಂಡಿವೆ, ಇದನ್ನು ಸುಧಾರಣೆ ಮತ್ತು ಗುರುತಿಸುವಿಕೆಯ ಅವಕಾಶವೆಂದು ಪರಿಗಣಿಸಿ ನಾವು ಸ್ಪರ್ಧಿಸಬೇಕು, ಗುರು ನಾನಕ ದೇವ್ ಇಂಜನೀಯರಿಂಗ್ ಕಾಲೇಜಿನ ಅತ್ಯಾಧುನಿಕ ಮೂಲಸೌಕರ್ಯಗಳು ಹಾಗೂ ಕಲಿಕಾ ಸೌಲಭ್ಯಗಳು ಒದಗಿಸುತ್ತಿರುವುದನ್ನು ಕಂಡರೆ ಈ ಸಂಸ್ಥೆಯು ಉನ್ನತ ದರ್ಜೆಯ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರವಿತ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರಿನ ಉಪಕುಲಪತಿಗಳಾದ ಡಾ|| ಕೆ.ಸಿ. ವೀರಣ್ಣಾ, ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಬಿ.ಎಸ್.ಬಿರಾದಾರ, ಕಲಬುರಗಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪೆÇ್ರ. ಬಿ.ಜಿ. ಮೂಲಿಮನಿ, ಬೀದರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ|| ಪರಮೇಶ್ವರನಾಯಕ ಟಿ., ಕರ್ನಾಟಕ ಸಾಹಿತ್ಯ ಸಂಘ ಬೀದರಿನ ಅಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ, ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ|| ಎಸ್. ಬಲಬೀರ್ ಸಿಂಗ್, ಗುರು ನಾನಕ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ, ಐಎಸ್ ಬಿಆರನ ನಿರ್ದೇಶಕರಾದ ಡಾ|| ಸಿ. ಮನೋಹರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.