ಭವಿಷ್ಯನಿಧಿ 2ನೇ ಬಾರಿ ಮುಂಗಡ ಹಣ ಪಡೆಯಲು ಅವಕಾಶ

ದಾವಣಗೆರೆ,ಜೂ.3; ಪ್ರಸ್ತುತ ಕೋವಿಡ್ 2ನೇ ಅಲೆಯ ಪರಿಸ್ಥಿತಿಯಲ್ಲಿ ಭವಿಷ್ಯನಿಧಿ ಸದಸ್ಯರಿಗೆ 2ನೇ ಬಾರಿ ಮುಂಗಡ ಹಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯವಿರುವ ಭವಿಷ್ಯನಿಧಿ ಸದಸ್ಯರು ಇದರ ಪ್ರಯೋಜನ ಪಡೆಯಬಹುದಾಗಿದೆ.ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಭವಿಷ್ಯನಿಧಿ ಸದಸ್ಯರ ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು, ಭವಿಷ್ಯನಿಧಿ ಸಂಸ್ಥೆಯು ಚಂದಾದಾರರಿಗೆ ಕೋವಿಡ್-19ರ ಅಡಿಯಲ್ಲಿ ವಿಶೇಷ ಮುಂಗಡ ಸೌಲಭ್ಯವನ್ನು ಒದಗಿಸಿತ್ತು. ಸಾಮಾಜಿಕ ಭದ್ರತೆ 2020ರ ಸಂಹಿತೆಯ ಸೆಕ್ಷನ್-142ನ್ನು ಮೇ 30 ರಿಂದ ಅನ್ವಯಗೊಳಿಸಲಾಗಿದ್ದು, ಸಂಹಿತೆಯ ನಿಬಂಧನೆಗಳನುಸಾರ ಫಲಾನುಭವಿಯ ಗುರುತನ್ನು ಸ್ಥಾಪಿಸಲು ಆಧಾರ್ ಸಂಖ್ಯೆ ಅವಶ್ಯಕವಾಗಿರುತ್ತದೆ.ಭವಿಷ್ಯನಿಧಿ ಸಂಸ್ಥೆಯು ಜೂ.1 ರಿಂದ ಇಸಿಆರ್ ಸಲ್ಲಿಸಲು ಸದಸ್ಯರ ಆಧಾರ್ ಅನ್ನು ಕಡ್ಡಾಯವಾಗಿ ಯುಎಎನ್ ಸಂಖ್ಯೆಯೊAದಿಗೆ ಲಿಂಕ್ ಮಾಡಲು ಆದೇಶಿಸಲಾಗಿದ್ದು, ಎಲ್ಲಾ ಉದ್ಯೋಗದಾತರು ಜೂ.1 ರಿಂದ ಇಸಿಆರ್ ಫೈಲ್ ಮಾಡಲು ಭವಿಷ್ಯನಿಧಿ ಸದಸ್ಯರ ಆಧಾರ್ ಅನ್ನು ಯುಎಎನ್ ಸಂಖ್ಯೆಯೊAದಿಗೆ ಜೋಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಭಾರ ಸ್ವೀಕಾರದಾವಣಗೆರೆ, ಜೂ.3;  ದಾವಣಗೆರೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯಾಗಿದ್ದ ಜಿ.ಎಸ್.ಶಶಿಧರ ಅವರು ಮೇ.31 ರಂದು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಇಲಾಖೆಯ ಉನ್ನತ ಅಧಿಕಾರಿಗಳ ಸೂಚನೆಯಂತೆ ಹುದ್ದೆಯ ಪ್ರಭಾರವನ್ನು ಹಾವೇರಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ವಿ.ಮಠದ್ ಅವರು ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬೀಜೋಪಚಾರ ಹಾಗೂ ಬೀಜಾಮೃತ ಬಳಕೆ : ರೈತರಿಗೆ ಸಲಹೆದಾವಣಗೆರೆ ಜೂ.3; ಮುಂಗಾರು ಹಂಗಾಮು ಪ್ರಾರಂಭಗೊಂಡಿದ್ದು, ರೈತರು ಮುಂಗಾರು ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿತ್ತನೆ ಬೀಜದಲ್ಲಿ ಬೀಜೋಪಚಾರ ಕೈಗೊಳ್ಳಲು ಹಾಗೂ ಬೀಜಾಮೃತ ಬಳಕೆ ಮಾಡುವಂತೆ ಕೃಷಿ ಇಲಾಖೆಯು ರೈತರಿಗೆ ಸಲಹೆ ನೀಡಿದೆ. ಅಧಿಕ ಇಳುವರಿ ಪಡೆಯಲು ಉತ್ತಮ ಬೀಜದ ಕೊಡುಗೆ ಅಪಾರವಾಗಿದೆ. ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ ನಾಡ್ನುಡಿಯಂತೆ ಉತ್ತಮ ಇಳುವರಿ ಪಡೆಯುವಲ್ಲಿ ಆರೊಗ್ಯವಂತ ಸಸಿಗಳ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ ರೋಗಗಳನ್ನು ತಡೆಗಟ್ಟಲು, ಸಾರಜನಕ ಮತ್ತು ರಂಜಕ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸಲು ಬೀಜೋಪಚಾರ ಅವಶ್ಯಕ. ಮುಸುಕಿನಜೋಳ, ಶೇಂಗಾ, ತೊಗರಿ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿದ್ದು ಬಿತ್ತನೆ ಕೈಗೊಳ್ಳುವ ಮುನ್ನ ರೈತಬಾಂಧವರು ಕೆಲವು ತಾಂತ್ರಿಕತೆಗಳನ್ನು ಅನುಸರಿಸಬೇಕು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಗೆ ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.