ಭವಿಷ್ಯದ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಆಗತ್ಯೆ : ಪೆÇ್ರ. ಹೆಗಡ್ಯಾಳ

ಇಂಡಿ : ಆ.3:ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವೆರ್ಥ್ ಮಾಡದೆ ಸರಿಯಾದ ತರಬೇತಿಯೊಂದಿಗೆ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ನಿಲ್ಲಬೇಕು ಹಾಗೂ ಸರಿಯಾದ ತರಬೇತಿಯೊಂದಿಗೆ ಅಧ್ಯಯನ ಮಾಡಿದರೆ ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬಹುದು ಎಂದು ಸರ್ವಜ್ಞ ಕರಿಯರ ಅಕಾಡಮಿ ನಿರ್ದೇಶಕ ನಾಗೇಶ ಹೆಗಡ್ಯಾಳ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಉದ್ಯೋಗ ಭರವಸಾ ಕೋಶ ಹಾಗೂ ಆಯ್ ಕ್ಯ್ ಎ ಸಿ ಸಹಯೋಗದೊಂದಿಗೆ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ರವಿ ಕಂಠೀಕರ್ ನಿರ್ದೇಶಕರು ಸ್ಪರದಾ ವಿವೇಕ್ ಕರಿಯರ ಅಕಾಡಮಿ ಗೋಕಾಕ, ಹಾಗೂ ಶ್ರೀ ವಿಜಯಕುಮಾರ ಇಮ್ಮನದ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರುವ ಇತಿಹಾಸ ಹಾಗೂ ಮೆಂಟಲೆಬಿಲಿಟಿ ವಿಷಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯರು ಶ್ರೀ ಆರ್ ಎಚ್ ರಮೇಶ ವಹಿಸಿದರು ಆಯ್ ಕ್ಯ್ ಎ ಸಿ ಸಂಚಾಲಕರಾದ ಡಾ, ಸಿರಿಸುಲ್ತಾನ್ ಇನಾಮದರ್, ಉದ್ಯೋಗ ಭರವಶ ಕೋಶದ ಸಂಚಾಲಕರು ಶ್ರೀ ತಿಪ್ಪಣ್ಣ ಎಸ್ ವಾಗ್ದಾಳ, ಸೇರಿದಂತೆ ಕಾಲೇಜಿನ ಭೋದಕ, ಭೋದಕೇತರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ದಲ್ಲಿ ಕುಮಾರ ಬಸವರಾಜ ಪೂಜಾರಿ ಪ್ರಾರ್ಥನಿಸಿದರು ಶ್ರೀ ಪಿ ಎಸ್ ದೇವರ ವಂದಿಸಿದರು, ಶ್ರೀ ಬಿ ಎಚ್ ಬಗಲಿ ನಿರೂಪಿಸಿದರು.