ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ (ISಖಔ) ಪ್ರಸ್ತುತ ಅಧ್ಯಕ್ಷರಾದ ಎಸ್ ಸೋಮನಾಥ್ ಅವರ ಪ್ರಕಾರ ಮುಂದಿನ ದಿನಗಳಲ್ಲಿ ಚಂದ್ರನAಗಳಕ್ಕೆ ರೋಬೋಟ್‌ಗಳನ್ನು ಕಳುಹಿಸಿ ಅವುಗಳ ವಿವಿಧ ಕಾರ್ಯಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಮಾನವನು ಭೂಮಿಯಿಂದಲೇ ರೋಬೋಟ್‌ನ ಚಟುವಟಿಕೆಗಳನ್ನು ನಿರ್ವಹಿಸಬಹುದು ಎಂದು ಹೇಳಿದ್ದಾರೆ. ಜಾಗತಿಕ ಕೌಶಲ್ಯ ಕಾರ್ಮಿಕರ ಕೊರತೆಗೆ ಪ್ರತಿಕ್ರಿಯೆಯಾಗಿ ರೋಬೋಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಉತ್ತಮಗೊಳಿಸಲು ರೋಬೋಟ್‌ಗಳು ಪೂರಕವಾಗಿವೆ. ಜಾಗತಿಕವಾಗಿ ಕೌಶಲ್ಯಕಾರ್ಮಿಕರ ಕೊರತೆಯು ದಿನೇ ದಿನೇ ಹೆಚ್ಚಾಗುತ್ತಿದ್ದು ಇದು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿವೆ. ಇದರ ಪರಿಣಾಮ ಜಾಗತಿಕವಾಗಿ ಹೆಚ್ಚುತ್ತಿರುವ ಶಕ್ತಿಯ ವೆಚ್ಚಗಳನ್ನು ನಿರ್ವಹಿಸಲು ಹಲವು ಕಂಪನಿಗಳು ತಮ್ಮ ಕಾರ್ಯಚರಣೆಗಳನ್ನು ಹೆಚ್ಚು ಸಮರ್ಥನೀಯವಾಗಿಸುವ ಸಲುವಾಗಿ ರೋಬೋಟಿಕ್ ಮತ್ತು ಆಟೋಮೇಷನ್‌ನ ಸೌಲಭ್ಯಗಳಿಗೆ ಅವಲಂಭಿತವಾಗಿವೆ. ತಾಂತ್ರಿಕ ಪ್ರಗತಿಗಳು ನಾವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನವನ್ನು ಮರುರೂಪಿಸುತ್ತಿರುವ ಯುಗದಲ್ಲಿ ರೋಬೋಟಿಕ್ಸ್ ಮತ್ತ ಆಟೋಮೇಷನ್ ಕ್ಷೇತ್ರವು ನಾವೀನ್ಯತೆಯನ್ನು ಪಡೆದು ಮುಂಚೂಣಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಹಾಗೂ ಕಂಪ್ಯೂಟರ್ ವಿಜ್ಞಾನ ಮತ್ತು ಸಂಬAಧಿತ ಸಂಶೋಧನಾ ತಂತ್ರಜ್ಞಾನಗಳ ಸಹಯೋಗದೊಂದಿಗೆ ಇದರ ಪ್ರಗತಿ ಭಾರತ ಮತ್ತು ವಿದೇಶಗಳಲ್ಲಿ ರೋಬೋಟಿಕ್ಸ್ ಉದ್ಯೋಗಗಳು ಹೆಚ್ಚು ಆಕರ್ಷಣೀಯಗೊಳಿಸಿವೆ.ಭವಿಷ್ಯದಲ್ಲಿ ರೋಬೋಟಿಕ್ಸ್ ಮತ್ತು ಆಟೋಮೇಷನ್‌ನ ವಿಪುಲ ಉದ್ಯೋಗಾವಕಾಶಗಳ ಪ್ರಮುಖಾಂಶಗಳು ಮತ್ತು ಅದರ ಮಾಹಿತಿ ಈ ಕೆಳಗಿನಂತಿದೆ.
1. 2030ರ ವೇಳೆಗೆ 85 ಮಿಲಿಯನ್‌ಗಿಂತಲೂ ಹೆಚ್ಚು ಹುದ್ದೆಗಳು ಜಗತ್ತಿನಾದ್ಯಂತ ಸೃಷ್ಠಿಯಾಗಲಿದೆ ಎಂದು ಊಹಿಸಲಾಗಿದೆ. ಇದು ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನಕಾರಿಯಾಗಿರುತ್ತದೆ.
2. ಪ್ರತಿ ಉದ್ಯೋಗಿಗಳಲ್ಲಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊಸ ಹೊಸ ಮಾರ್ಗಗಳನ್ನು ಹುಡುಕುವ ತವಕದಲ್ಲಿ ಮತ್ತು ಅದಕ್ಕೆ ಬೇಕಾಗಿರುವ ಮಾನವ ಸಂಪನ್ಮೂಲಗಳ ಕ್ರೊಡಿಕರಣಕ್ಕೆ ಪ್ರತಿಯೊಂದು ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ಯೋಚಿಸತೊಡಗಿವೆ.
3. ಜಾಗತಿಕ ಮಾರುಕಟ್ಟೆಯಲ್ಲಿನ ನಿರೋದ್ಯಗದ ಅಂತರವನ್ನು ತುಂಬಲು ರೋಬೋಟ್‌ಗಳ ಪಾತ್ರ ಬಹು ಮುಖ್ಯವಾಗಿರುತ್ತದೆ.
4. ಆರ್ಟಿಫಿಷಿಯಲ್ ಇಂಟಲಿಜಿನ್ಸ್ (ಂI)ನ ಬಳಕೆಯಿಂದ ರೋಬೋಟ್‌ಗಳನ್ನು ನಿಯಂತ್ರಿಸಲು ಮತ್ತು ಅದರ ಕಾರ್ಯಕ್ಷಮತೆಯನ್ನು ವೃದ್ದಿಸಲು ಸುಲಭವಾಗುತ್ತದೆ.
5. ರೋಬೋಟ್‌ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅದರ ಉಪಯೋಗಕ್ಕನುಸಾರವಾಗಿ ಬಳಸುತ್ತಾರೆ, ಇವುಗಳಲ್ಲಿ ಪ್ರಮುಖವಾಗಿ ಆರೋಗ್ಯ, ಆಹಾರ ಸೇವೆ, ಮಿಲಿಟರಿ, ನ್ಯಾನೋ ಶಸ್ತçಚಿಕಿತ್ಸೆ, ಕೃಷಿ ಕ್ಷೇತ್ರದಲ್ಲಿ, ವಿಷೇಶವಾಗಿ ಪ್ರಯೋಗಾಲಯಗಳು ಮತ್ತು ಔಷಧಾಲಯಗಳಂತAಹ ಕ್ಷೇತ್ರಗಳಲ್ಲಿ ರೋಬೋಟ್‌ಗಳ ಪಾತ್ರ ಬಹು ಮುಖ್ಯವಾದುದು.
6. ರೋಬೋಟ್‌ಗಳು ಕ್ಲಿಷ್ಠಕರವಾದ ಸನ್ನಿವೇಷಗಳು ಮತ್ತು ಅಪಾಯಕಾರಿ ಕ್ಷೇತ್ರದಲ್ಲಿ ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸಬಲ್ಲವು.
7. ಂಃBಯ ಉoಈಚಿ ಮತ್ತ SWIಈಖಿI ಕೋಬೋಟ್‌ಗಳಂತಹ (ಅಔಐಐಂಃಔಖAಖಿIಗಿಇ ಖಔಃಔಖಿ) ದೂಡ್ಡ ಪೇಲೋಡ್‌ಗಳ ಸಹಯೋಗದ ಆಯ್ಕೆಗಳು ಮಾನವರೊಂದಿಗೆ ಸುರಕ್ಷಿತವಾಗಿ ಕಾರ್ಯನಿರ್ವಹಿಸಬಲ್ಲವು ಮತ್ತು ಉದ್ಯೋಗಿಗಳ ಕೌಶಲ್ಯತೆಯನ್ನು ಉತ್ತಮವಾಗಿ ಪರಿವರ್ತಿಸುವಲ್ಲಿ ಕಂಪನಿಗಳು ಹೊಸ ಮಾರ್ಗಗಳನ್ನು ಅನುಸರಿಸುತ್ತಿವೆ.
8. ರೋಬೋಟ್‌ಗಳು ಈಗಾಗಲೇ ಜಗತ್ತಿನ ನಾನಾ ಹೋಟೆಲ್‌ಗಳಲ್ಲಿ, ವಿವಿಧ ಬಗೆಯ ಪ್ರಯೋಗಾಲಯದಲ್ಲಿ, ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾವೆ.
9. ಕೌಶಲ್ಯ ಕಾರ್ಮಿಕರ ಕೊರತೆಯು ವಿವಿಧ ಕ್ಷೇತ್ರಗಳ ಕಾರ್ಯಕ್ಷಮತೆಯ ವ್ಯವಹಾರಗಳ ಮೇಲೆ ಪರಿಣಾಮ ಬೀರಿದ್ದು ಇದು ಮುಂದಿನ ದಿನಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರೋಬೋಟ್‌ಗಳ ಮಹತ್ವ ಅವುಗಳ ಪಾತ್ರಗಳನ್ನು ಸಕ್ರಿಯೆಗೊಳಿಸುವುದು ಬಹುಮುಖ್ಯವಾದ ಅಂಶವಾಗಿದೆ.
10. ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ರೋಬೋಟಿಕ್ ಮತ್ತು ಆಟೋಮೇಷನ್ ಉದ್ಯಮಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಲ್ಲ ಬಹುಮುಖ್ಯವಾದ ಕಂಪನಿಗಳಾದ, ಂಃB, ಖಿಂಖಿA, ISಖಔ, ಆಖಆಔ, ಃಊಇಐ, ಈಂಓUಅ, ಏUಏಂ ಖಔಃಔಖಿIಅS, ಆIಈಈಂಅಖಿಔ ಖಔಃಔಖಿIಅS, ಇತ್ಯಾದಿ. ಕಂಪನಿಗಳು ಜಾಗತಿಕವಾಗಿ ಗುಣಮಟ್ಟದ ಇಂಜನಿಯರ್‌ಗಳಿಗೆ ವಿಪುಲ ಉದ್ಯೋಗಾವಕಾಶಗಳನ್ನು ಮುಂದಿನ ದಿನಗಳಲ್ಲಿ ಸೃಷ್ಠಿಸಲಿವೆ.
ಡಾ.ರಾಜಕುಮಾರ್ ಡಿ.ಜಿ.
ಪ್ರೊ. & ಹೆಚ್ ಒಡಿ
ರೊಬೊಟಿಕ್ಸ್ ಮತ್ತು ಆಟೋಮೇಷನ್ ವಿಭಾಗ,ಜಿಎಂಐಟಿ, ದಾವಣಗೆರೆ.