ಭವಿಷ್ಯದ ಇಂಜಿನಿಯರ್‌ಗಳ ಪ್ರತಿಭೆ ಅನಾವರಣ

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೨೬: ದಾವಣಗೆರೆ ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ‘ನಿರ್ಮಾಣ 4.0’ ಪ್ರಾಜೆಕ್ಟ್ ಪ್ರದರ್ಶನವು ಭವಿಷ್ಯದ ಇಂಜಿನಿಯರ್‌ಗಳ ಪ್ರತಿಭೆ ಅನಾವರಣಗೊಳಿಸಿತು.ಹಣ್ಣಿನ ಸಿಪ್ಪೆಗಳಿಂದ ತಿನ್ನಬಹುದಾದ ಸ್ಫೂನ್ ತಯಾರಿಕೆ ಸೇರಿದಂತೆ ಕೃಷಿ, ಸಾರಿಗೆ, ಗೃಹ ನಿರ್ಮಾಣ, ವೈದ್ಯಕೀಯ, ನೈಸರ್ಗಿಕ ವಲಯಗಳಲ್ಲಿ ಸುಧಾರಣೆಗಳ ತರಬಹುದಾದ ಹೀಗೆ ಹತ್ತು ಹಲವು ಯೋಜನೆಗಳನ್ನು ಬಾಪೂಜಿ ಇಂಜಿನಿಯರಿAಗ್ ಮತ್ತು ತಾಂತ್ರಿಕ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರದರ್ಶಿಸಿ ಸಾಮಾಜಿಕ ಕಳಕಳಿಯನ್ನು ಮೆರೆದರು.ಕೊಮೊಫಿ ಮೆಡ್‌ಟೆಕ್‌ನ ಸಹ ಸಂಸ್ಥಾಪಕ ಗುರುರಾಜ್ ಕೆ.ಬಿ., ಬಯೋಕಾನ್ ಬಯಾಲಜಿಕ್ಸ್ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಗುಡ್ಡದ್ ಅವರುಗಳು ಪ್ರದರ್ಶನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಯೋಜನೆಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳೊಂದಿಗೆ ಈ ಯೋಜನೆಗಳನ್ನು ವೀಕ್ಷಿಸಿದ ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗಿನ ಸಂವಾನದ ಮೂಲಕ 60ಕ್ಕೂ ಯೋಜನೆಗಳನ್ನು ಪ್ರದರ್ಶಿಸಿದ್ದು, ಈ ಯೋಜನೆಗಳಲ್ಲಿನ ಕೆಲವು ಯೋಜನೆಗಳಿಗೆ ಪೇಟೆಂಟ್ ತೆಗೆದುಕೊಳ್ಳಲಾಗುವುದು ಎಂದರು. ಅಂಧ ವ್ಯಕ್ತಿಗಳಿಗೆ ಅವರ ಅರಿವಿನ ಸಾಮರ್ಥ್ಯದ ಆಧಾರದ ಮೇಲೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಬಗ್ಗೆ ಯೋಜನೆಯೊಂದನ್ನು ನೀಡಿರುವ ವಿಧ್ಯಾರ್ಥಿಗಳು ಖಾದ್ಯ ಸ್ಪೂನ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಮೋಸಂಬಿ ಸಿಪ್ಪೆಯಿಂದ ಅನ್ವೇಷಿಸಿದ್ದಾರೆ. ಉಡುಪಿನ ತ್ಯಾಜ್ಯದಿಂದ ಸಂಯೋಜನೆಗಳ ಅಭಿವೃದ್ಧಿ, ಚರಕ-ನೂಲುವ ಯಂತ್ರದ ಮಾರ್ಪಾಡು, ಸೌರ ಫಲಕಗಳಿಂದ ಹೈಬ್ರಿಡ್ ವಿದ್ಯುತ್ ಉತ್ಪಾದನಾ ವ್ಯವಸ್ಥೆ, ತ್ಯಾಜ್ಯದಿಂದ ಸಿಮೆಂಟ್ ಆಧಾರಿತ ಸಂಯೋಜನೆಯ ಉಷ್ಣ ನಡವಳಿಕೆಯನ್ನು ಮೌಲ್ಯಮಾಪನ ಮಾಡುವುದು, ಕೆಳಭಾಗದ ಬೂದಿ ಮತ್ತು ನ್ಯಾನೋ ಸೌಮ್ಯ ಉಕ್ಕಿನ ಪುಡಿಯೊಂದಿಗೆ ಬಲಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಸೂಕ್ತವಾದ ಕೀಟನಾಶಕ ಶಿಫಾರಸಿನೊಂದಿಗೆ ಬಾಳೆ ಗಿಡದ ಎಲೆಗಳ ಮೇಲೆ ರೋಗಗಳನ್ನು ಪತ್ತೆಹಚ್ಚಲು ಹೈಬ್ರಿಡ್ ವ್ಯವಸ್ಥೆ ಮಾಡಿದ್ದು, ಇಂಟರ್ನೆಟ್ ಆಫ್ ಥಿಂಗ್ಸ್ ಬಳಸಿ ವೈದ್ಯಕೀಯ ಸಹಾಯಕ ರೋಬೋಟ್, ನಿಯಂತ್ರಿತ ಬೀಚ್ ಕ್ಲೀನರ್ ರೋಬೋಟಿಕ್ ವಾಹನ, ಚರ್ಮದ ಗಾಯದ ಚಿತ್ರಗಳೊಂದಿಗೆ ಕ್ಲಿನಿಕಲ್ ಡೇಟಾವನ್ನು ಸಂಯೋಜಿಸುವ ಉಪಕರಣ ಅನ್ವೇಷಿಸಿ ದ್ದಾರೆ. ಸೌರಶಕ್ತಿಯನ್ನು ಬಳಸಿಕೊಂಡು ಇ-ವಾಹನಕ್ಕಾಗಿ ಚಾರ್ಜಿಂಗ್ ಸ್ಟೇಷನ್, ಕೃಷಿ ಉಪಯುಕ್ತ ವಾಹನ, ಎಲೆಕ್ಟ್ರಿಕಲ್ ಡೇಟಾ ಮಾನಿಟರಿಂಗ್, ಅಳಿವಿನಂಚಿನಲ್ಲಿರುವ ಮರಗಳ ಅಳಿಸುವಿಕೆಯನ್ನು ನಿಲ್ಲಿಸುವುದು, ಸ್ಮಾರ್ಟ್ ಗ್ರಿಡ್‌ಗಾಗಿ ವಿತರಣಾ ಪರಿವರ್ತಕ ಮಾನಿಟರಿಂಗ್, ಸ್ಪೀಡ್ ಬ್ರೇಕರ್‌ಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ, ಬುದ್ಧಿವಂತ ಸಂಚಾರ ನಿರ್ವಹಣಾ ವ್ಯವಸ್ಥೆ, ವಸ್ತುಗಳ ಇಂಟರ್ನೆಟ್ (ಟoಖಿ) ಮತ್ತು ಯಂತ್ರ ಕಲಿಕೆ (ಒಐ) ಆಧಾರಿತ ಬೆಳೆ ಶಿಫಾರಸು ವ್ಯವಸ್ಥೆ, ಬಯೋಮೆಟ್ರಿಕ್ ಆಧಾರಿತ ಪಾವತಿ ವ್ಯವಸ್ಥೆ ಮತ್ತು ಬೌದ್ಧಿಕ ಕಣ್ಗಾವಲು ಭದ್ರತಾ ವ್ಯವಸ್ಥೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವುದು, ಮೇಲ್ಮೈ ಮತ್ತು ಭೂಗರ್ಭದ ಮೇಲೆ ಕೃಷಿ ರಸಗೊಬ್ಬರಗಳ ಪರಿಣಾಮಗಳ ಕುರಿತು ಅಧ್ಯಯನ, ತೆಂಗಿನ ಚಿಪ್ಪಿನೊಂದಿಗೆ ಸಾಂಪ್ರದಾಯಿಕ ಕಾಂಕ್ರೀಟ್ ಶಕ್ತಿ ಗುಣಲಕ್ಷಣಗಳ ಮೇಲೆ ಅಧ್ಯಯನ, ತ್ಯಾಜ್ಯ ನೀರಿನ ಸಂಸ್ಕರಣೆಗಾಗಿ ಜೈವಿಕ ಆಡ್ಸರ್ಬೆಂಟ್ಸ್, ಮಣ್ಣಿನಿಂದ ಪ್ರತ್ಯೇಕಿಸಲ್ಪಟ್ಟ ಬ್ಯಾಕ್ಟೀರಿಯಾದಿಂದ ವರ್ಣದ್ರವ್ಯಗಳ ಹೊರತೆಗೆಯುವಿಕೆ, ಪರಿಸರ ಸ್ನೇಹಿ ಮೈಸಿಲಿಯಮ್ ಇಟ್ಟಿಗೆಗಳ ಸಾಮರ್ಥ್ಯ ಮತ್ತು ಬಾಳಿಕೆ ಗುಣಲಕ್ಷಣಗಳ ಮೇಲೆ ಪ್ರಾಯೋಗಿಕ ಅಧ್ಯಯನ ಹಾಗೂ ಕೃಷಿ ಜೀವರಾಶಿ ಮತ್ತು ಅವುಗಳ ಅನ್ವಯಗಳಿಂದ ನ್ಯಾನೊಸೆಲ್ಯುಲೋಸ್‌ನ ಅಭಿವೃದ್ಧಿಗೆ ಹೊಸ ಹಸಿರು ವಿಧಾನದ ಯೋಜನೆಗಳನ್ನು ತಯಾರಿಸಿದ್ದಾರೆ.ಈ ಸಂದರ್ಭದಲ್ಲಿ ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಹೆಚ್.ಬಿ. ಅರವಿಂದ್, ಸಂಚಾಲಕ ಡಾ.ಎ.ಜಿ. ಶಂಕರಮೂರ್ತಿ ಇತರರು ಉಪಸ್ಥಿತರಿದ್ದರು.