ಭವಿಷ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ : ಎಚ್‍ಕೆಪಿ

ಲಕ್ಷ್ಮೇಶ್ವರ, ಜ3- ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲ ಪಡಿಸಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕಿದ್ದು ಪ್ರತಿಯೊಬ್ಬರಿಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಚನ್ನಮನ ವನದಲ್ಲಿ ಗ್ರಾಪಂಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತಿಚೆಗೆ ಜರುಗಿದ ಗ್ರಾಪಂ ಚುನಾವಣೆಯಲ್ಲಿ ಗ್ರಾಮೀಣ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದು, ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ನಡುಕ ಹುಟ್ಟಿಸಿದೆ ಎಂದರು.
ಅವರು ಮುಖಂಡರ ಹಾಗೂ ಪಕ್ಷದ ಯಾವುದೇ ನೆರವು ಇಲ್ಲದೆ ಸ್ಥಳೀಯ ನಾಯಕರೇ ಮುಖಂಡತ್ವ ವಹಿಸಿ ಕಾರ್ಯಕರ್ತರನ್ನು ಒಗ್ಗೂಡಿಸಿ ಸದಸ್ಯರನ್ನು ಆಯ್ಕೆ ಮಾಡಿರುವುದು ಮುಂದಿನ ಚುನಾವಣೆಗೆ ದಿಕ್ಸೂಚಿ ಆಗಿದ್ದು, ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಡಿ.ಆರ್.ಪಾಟೀಲ ಮಾತಾಡಿ ಮಹಾತ್ಮಾ ಜೀ ಅವರ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಗ್ರಾಪಂ ಸದಸ್ಯರು ಸ್ವಚ್ಚ, ದಕ್ಷ್ಯ ಮತ್ತು ಪ್ರಾಮಾಣಿಕ ಆಡಳಿತ ನೀಡಬೇಕು. ಮತದಾರರ ವಿಶ್ವಾಸಕ್ಕೆ ಧಕ್ಕೆ ಆಗದಂತೆ ನೆಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಜಿ.ಎಸ್.ಪಾಟೀಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಸ್ ಗಡ್ಡದೇವರಮಠ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬಿ. ಆರ್. ಯಾವಗಲ್, ಶ್ರೀಶೈಲಪ್ಪ ಬಿದರೂರ, ಟಿ. ಈಶ್ವರ ಮಾತನಾಡಿದರು.
ವೇದಿಕೆಯಲ್ಲಿ ಉ.ಎನ್.ಹೊಳಲಾಪುರ, ಎಸ್.ಪಿ. ಬಳಿಗಾರ್, ವಿ.ಜಿ. ಪಡಿಗೇರ, ಸುಜಾತ ದೊಡ್ಡಮನಿ, ಜಿ. ಆರ್. ಕೊಪ್ಪದ, ಮುತಕ್ಕಾ ಬೆಟಗೇರಿ, ಜಯಕ್ಕ ಕಳ್ಳಿ, ಅಶೋಕ್ ಮಂದಾಲಿ, ರಾಮಣ್ಣ ಗಡದವರ, ರಾಮಣ್ಣ ಲಮಾಣಿ, ಚೆನ್ನಪ್ಪ ಜಗಲಿ, ರಾಜರತ್ನಾ ಹುಲಗೂರ, ಬ್ಲಾಕ್ ಉಸ್ತುವಾರಿ ವಿರೇಂದ್ರ ಪಾಟೀಲ್ ಇದ್ದರು.
ಇದೇ ಸಂದರ್ಭದಲ್ಲಿ ಶಿಗ್ಲಿ ಗ್ರಾಪಂ ಗೆ ಬಿಜೆಪಿ ಬೆಂಬಲಿತ ಗಿರೀಶ್ ಕುಬಸದ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಎಂ.ಸ್ ದೊಡ್ಡಗೌಡ್ರ, ಫಕ್ಕಿರೇಶ ಮ್ಯಾಟಣ್ಣವರ್, ಅಂಬರೀಷ್ ತೆಂಬದಮನಿ ನಿರ್ವಹಿಸಿದರು.