ಭವಾನಿ ಮಾತೆ ಸರ್ವರಿಗೂ ಒಳಿತು ಮಾಡಲಿ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ:ಎ.16: ಈ ವರ್ಷ ಸರ್ವರಿಗೂ ಒಳಿತು ಉಂಟುಮಾಡಲಿ. ಜನರ ಸಂಕಷ್ಟಗಳನ್ನು ತಾಯಿ ಭವಾನಿ ಮಾತೆ ದೂರ ಮಾಡಲಿ. ಕೊರೊನಾ ಹೆಮ್ಮಾರಿಯಿಂದ ನಾಡನ್ನು ರಕ್ಷಿಸಲಿ. ನಾಡಿನ ರೈತರಿಗೆ ಒಳ್ಳೆಯ ಮಳೆ, ಬೆಳೆ, ಬೆಲೆ ಸಿಗುವಂತಾಗಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಪ್ರಾರ್ಥಿಸಿದರು.
ನಗರದ ಮಂಗಲಪೇಟೆಯ ಭವಾನಿ ಮಂದಿರಕ್ಕೆ ಭೇಟಿ ನೀಡಿ ಯುಗಾದಿ ನಿಮಿತ್ಯ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭವಾನಿ ಮಾತೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಯುಗಾದಿ ಹಬ್ಬವು ಹಿಂದುಗಳ ಪಾಲಿನ ಹೊಸ ವರ್ಷವಾಗಿದೆ. ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇವು, ಬೆಲ್ಲ ಈ ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ವರ್ಷದಿಂದ ಕೊರೊನಾ ಹೆಮ್ಮಾರಿ ಆವರಿಸಿದ ಪರಿಣಾಮವಾಗಿ ಅನೇಕ ಹಬ್ಬಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ.
ತಾಯಿ ಭವಾನಿ ಮಾತೆ ಕೊರೊನಾದಂತ ವೈರಸ್ ಗಳಿಂದ ನಾಡನ್ನು ರಕ್ಷಿಸಲಿ, ನಾಡಿನ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ. ಉತ್ತಮ ಮಳೆ, ಬೆಳೆಗಳು ರೈತರಿಗೆ ಸಿಗುವಂತಾಗಲಿ. ರೈತ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ ಎಂದು ತಾಯಿ ಭವಾನಿ ಮಾತೆಗೆ ಪ್ರಾರ್ಥನೆ ಸಲ್ಲಿಸಿದ್ದೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.