ಭವನಗಳ ನಿರ್ವಹಣೆಗೆ ನಿರ್ಲಕ್ಷ್ಯ; ಅಸಮಾಧಾನ

ಜಗಳೂರು.ನ.೯; ಪಟ್ಟಣದಲ್ಲಿ 6 ವರ್ಷಗಳಿಂದ ನಿರ್ಮಿಸಲಾಗಿದ್ದ ಎರಡು ಕೋಟಿ ರೂಗಳ  ವೆಚ್ಚದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಡಾ.ಬಾಬು ಜಗಜೀವನರಾಮ್ ಭವನಗಳನ್ನು ಆಗಿನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಎ ನಾರಾಯಣಸ್ವಾಮಿ ತಲಾ 1ಕೋಟಿಯಂತೆ ಒಟ್ಟು ಎರಡು ಕೋಟಿ ರೂಪಾಯಿ ಭವನಗಳಿಗೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು 
2013ರಲ್ಲಿ ಶಾಸಕರಾಗಿದ್ದ ಎಸ್ ವಿ ರಾಮಚಂದ್ರಪ್ಪ ಅವರು ಭವನಗಳ ಶಂಕುಸ್ಥಾಪನೆ ಮಾಡಿ ಎರಡು ಭವನಗಳನ್ನು ಸುಸಜ್ಜಿತವಾಗಿ  ನಿರ್ಮಾಣ ಮಾಡಲಾಗಿತ್ತು.


ಅಲ್ಲಿಂದ ಇಲ್ಲಿಯವರೆಗೂ ಭವನಗಳು ಅನಾಥ ಸ್ಥಿತಿಯಲ್ಲಿದ್ದವು ಈ ಭವನಗಳ ನಿರ್ಮಾಣ ಮಾಡಲಾಗಿತು ಕಾಮಗಾರಿಯನ್ನು ಲ್ಯಾಂಡ್
ಅರ್ಮಿ(ಕೆ.ಆರ್.ಡಿ.ಎಲ್) ಇಲಾಖೆಯಿಂದ  ನಿರ್ಮಿಸಲಾಗಿದ್ದ ಭವನಗಳನ್ನು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಗೆ ನಿಗದಿತ ಸಮಯದಲ್ಲಿ ಹಸ್ತಾಂತರ ಮಾಡಬೇಕಾಗಿತ್ತು 
ಕಾರಣಾಂತರಗಳಿಂದ ಗುತ್ತಿಗೆದಾರನ ನಿರ್ಲಕ್ಷವೂ ಅಥವಾ ಅಧಿಕಾರಿಗಳ ಬೇಜವಾಬ್ದಾರಿತನವು ಎಂಬಂತೆ   ಭವನಗಳನ್ನು ನಿರ್ಮಿಸಿದ್ದ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದರು
ಈ ಭವನಗಳನ್ನು ನಿರ್ಮಿಸಿ 6 ವರ್ಷಗಳಾದರೂ ಭವನಗಳ ಉದ್ಘಾಟನೆ ಯಾಗಿರಲಿಲ್ಲ  ಈ ಭವನಗಳ ನಿರ್ವಹಣೆ ಕೊರತೆ ಎದ್ದು ಕಾಣುತ್ತಿತ್ತು ರಾತ್ರಿ ಸಮಯದಲ್ಲಿ ಮದ್ಯಪ್ರಿಯರು ಮದ್ಯಪಾನ ಮಾಡಿದ ಬಾಟಲ್ ಗಳನ್ನು ಮತ್ತು ಪಾಕೆಟ್ ಧೂಮಪಾನ ಮಾಡಿದ ಸಿಗರೇಟುಗಳನ್ನು ಭವನಗಳ ಮುಂದೆ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು ಮತ್ತು ಈ ಎರಡು ಭವನದ ಕಿಟಕಿಯ ಗ್ಲಾಸ್ ಗಳು  ಶೌಚಾಲಯದ ಸಾಮಗ್ರಿಗಳನ್ನು ಮತ್ತು ಪೈಪುಗಳನ್ನು  ಕಿಡಿಗೇಡಿಗಳು ಒಡೆದು ಹಾಕಿ ಅಲ್ಲಿಯೇ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದುದ್ದನ್ನು ಕಂಡ ಆದಿಜಾಂಬವ ಹರಿಜನ ವಿದ್ಯಾರ್ಥಿನಿಲಯದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ನಿರ್ದೇಶಕರುಗಳು ಸಮಾಜದಮುಖಂಡರುಗಳು ಸಂಬಂಧಪಟ್ಟ  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಭವನಗಳನ್ನು ತಕ್ಷಣವೇ ದುರಸ್ತಿ ಮಾಡಿಸಿಮದುವೆ.

ಸಭೆ-ಸಮಾರಂಭಗಳನ್ನು  ಇನ್ನಿತರೆ  ಕಾರ್ಯಕ್ರಮಗಳನ್ನು ನಡೆಸಲು ಈ ಎರಡು ಭವನಗಳನ್ನು ನಿರ್ವಹಣೆ ಮಾಡಲು ಸಮಿತಿ ರಚನೆ ಮಾಡಲು ಮನವಿ ಪತ್ರ ಸಲ್ಲಿಸಿದರು
ತಕ್ಷಣವೇ ಆ ಮನವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಅವರು ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಡಾ.ಬಾಬು ಜಗಜೀವನರಾವ್ ಭವನದ ಒಡೆದು ಹಾಕಿದ್ದ  ಕಿಟಕಿಯ ಗ್ಲಾಸ್ ಮತ್ತು ಪೈಪ್ ಗಳು  ಮತ್ತು   ಶೌಚಾಲಯದ ಸಾಮಗ್ರಿಗಳನ್ನು ಸರಿಪಡಿಸಿ ನಮಗೆ ಹಸ್ತಾಂತರಿಸಬೇಕು ಭವನಗಳನ್ನು ನಿರ್ಮಿಸಿದ್ದ ಲ್ಯಾಂಡ್ ಅರ್ಮಿ (ಕೆ.ಆರ್.ಡಿ.ಎಲ್)ಇಲಾಖೆಯವರಿಗೆ ಬೇಗನೆ ಸರಿಪಡಿಸಿ ಕೊಡಬೇಕೆಂದು ತಿಳಿಸಿದ್ದರು
ಅದರಂತೆ ಲ್ಯಾಂಡ್ ಅರ್ಮಿ ಇಂಜಿನಿಯರ್ ಗಳು ಪರಿಶೀಲನೆ ನಡೆಸಿ ಒಡೆದು ಹಾಕಲಾಗಿದ್ದ ಕಿಟಕಿಯ ಗ್ಲಾಸ್ ಗಳನ್ನು ಮತ್ತು ಪೈಪ್ ಮತ್ತು ಶೌಚಾಲಯದ ಶೌಚಾಲಯದ ಸಾಮಗ್ರಿಗಳನ್ನು ಸರಿಪಡಿಸಿ ಬುದುವಾರ  ಮತ್ತೊಮ್ಮೆ ಭವನಗಳನ್ನು ಪರಿಶೀಲಿಸಿ ಲ್ಯಾಂಡ್ ಅರ್ಮಿ (ಕೆ.ಆರ್.ಡಿ.ಎಲ್) ಇಲಾಖೆಯ ಇಂಜಿನಿಯರ್ ಚಂದ್ರಶೇಖರ್ ಮತ್ತು ಸುನಿಲ್ ಈಗ ಈ ಎರಡು ಭವನಗಳನ್ನು ಸಮಾಜ ಕಲ್ಯಾಣ ಇಲಾಖೆ  ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಅವರಿಗೆ ಹಸ್ತಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ 
ಈಗಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಎರಡು ಭವನಗಳನ್ನು ಉದ್ಘಾಟನೆ ಮಾಡುತ್ತಾರೋ ಇಲ್ಲವೋ ಸಾರ್ವಜನಿಕರ ಕೆಲಸಕಾರ್ಯಗಳ ಉಪಯೋಗಕ್ಕೆ ಅವಕಾಶ ಮಾಡಿಕೊಡುತ್ತಾರೆ ಇಲ್ಲವೋ ಎಂದು ಕಾದು ನೋಡುವ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ  


” ಈ ಎರಡು ಭವನಗಳ ದುರಸ್ತಿ ಕಾಮಗಾರಿಯನ್ನು ಪೂರೈಕೆ ಮಾಡಿ ಈಗಾಗಲೇ ನಮ್ಮ ಸಮಾಜ ಕಲ್ಯಾಣ ಇಲಾಖೆಗೆ ನಿರ್ಮಾಣ ಮಾಡಿದ್ದ  ಇಂಜಿನಿಯರ್ ಗಳು ಈಗ ಹಸ್ತಾಂತರ ಮಾಡಿದ್ದಾರೆ  ತಾಲೂಕಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಮತ್ತು ತಾಲೂಕು ದಂಡಾಧಿಕಾರಿಗಳ ಮುಖಾಂತರ ಸಂಬಂಧಿಸಿ ಆದಿಜಾಂಬವ ಹರಿಜನ ವಿದ್ಯಾರ್ಥಿನಿಲಯದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ಭವನಗಳ ನಿರ್ವಹಣೆ ಮಾಡಿಕೊಳ್ಳಲು ಶೀಘ್ರದಲ್ಲಿಯೇಕೊಡಲಾಗುವುದು   “
ಬಿ ಮಹೇಶ್ವರಪ್ಪಸಹಾಯಕ ನಿರ್ದೇಶಕರುಸಮಾಜ ಕಲ್ಯಾಣ ಇಲಾಖೆಜಗಳೂರು


” ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಎರಡು ಭವನಗಳನ್ನು ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಕಾಮಗಾರಿ  ಮುಗಿಸಿ ಕೊಟ್ಟಿದ್ದಾರೆ ಎಲ್ಲಾ  ಸಾರ್ವಜನಿಕರಿಗೆ ಮದುವೆಸಭೆ-ಸಮಾರಂಭಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ “
 ಹಟ್ಟಿ ತಿಪ್ಪೇಸ್ವಾಮಿ ಆದಿಜಾಂಬವ ಹರಿಜನ ವಿದ್ಯಾರ್ಥಿನಿಲಯದ  ನಿರ್ದೇಶಕರು ಜಗಳೂರು