ಭವತಾರಿಣಿ ಸಂಸ್ಥೆಯಿಂದ  ಸಾವಿರ ಗಿಡನೆಡುವ ಕಾರ್ಯಕ್ರಮ

ದಾವಣಗೆರೆ.ಜು.೧೬; ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಭವತಾರಿಣಿ ಸಂಸ್ಥೆಯು ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ “ದೇವವನ” – 1000 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನಗರದ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ ಅವರು ಉದ್ಘಾಟಿಸಿದರು.  ಈ ಕಾರ್ಯಕ್ರಮದಲ್ಲಿ ಮಾವು, ಹಲಸು, ಮತ್ತಿ, ನೆಲ್ಲಿ  ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ನೆಡಲಾಗಿದೆ ಎಂದು ಭವತಾರಿಣಿ ಟ್ರಸ್ಟ್ ‘ನ ಮುಖ್ಯಸ್ಥರಾದ ಶಾರದಾ ಡಿ.ಆರ್ ಮತ್ತು ಚಂದ್ರಮೋಹನ್ ತಿಳಿಸಿದರು.ದಾವಣಗೆರೆಯ ಹೃದಯ ಭಾಗದಲ್ಲಿ ಈ ಗಿಡಗಳನ್ನು ನೆಡಲಾಗಿದ್ದು ನಗರದ ವಾಯುಮಾಲಿನ್ಯ ತಡೆದು ಪಕ್ಷಿಗಳಿಗೆ ಆಸರೆಯಾಗುವ ತಾಣ ಇದಾಗಲಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ  ಏಕನಾಥ್ ,‌ ಧರೆ ಸಂಸ್ಥೆಯ ಮುಖ್ಯಸ್ಥರಾದ ವೃಷಾಂಕ ಭಟ್ , ಸ್ಥಳೀಯರು, ಕಾಲೇಜಿನ ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಎ‌.ಆರ್. ಜಾನಕೀರಾಮ್, ಮೇಘರಾಜ್, ಮಾಜೀ ಮೇಯರ್ ವೀರೇಶ್, ಮಹೇಂದ್ರಪ್ಪ, ಶೇಷಾಚಲ, ಕೃಷ್ಣಮೂರ್ತಿ, ರವಿ, ಸಾಯಿನಾಥ್ ಹಾಗೂ ಪವನ್ ಅವರು ಉಪಸ್ಥಿತರಿದ್ದರು.