ಭರ್ಜರಿ ಮೆರವಣಿಗೆ ಮೂಲಕಶ್ರೀರಾಮುಲು ನಾಮಪತ್ರ ಸಲ್ಲಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಎ,18- ತಾವು ಬಯಸಿದಂತೆ ಈ ಬಾರಿ ಮತ್ತೆ ಬಳ್ಳಾರಿ ಗ್ರಾಮಿಣ ಕ್ಷೇತ್ರದಿಂದ ಸಚಿವ ಬಿ.ಶ್ರೀರಾಮುಲು ಅವರು ಇಂದು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಸಹಾಯಕ ಆಯುಕ್ತ ಹೇಮಂತ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಅವರು ಅಲಂಕೃತ ವಾಹನದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತಾ ಮೊದಲಾದವರೊಂದಿಗೆ ಟಿ.ಬಿ.ಸ್ಯಾನಿಟೋರಿಯಂನಿಂದ ಕೌಲ್ ಬಜಾರ್ ಮೂಲಕ ಬೃಹತ್ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ಆಗಮಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಆರನೇ ಬಾರಿಗೆ ಶಾಸಕರಾಗಲು ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. 2004 ರಲ್ಲಿ ನ್ರ ಕ್ಷೇತ್ರದಿಂದ. 2008, 2011, 2013 ರಲ್ಲಿ ಗ್ರಾಮೀಣ ಕ್ಷೇತ್ರದಿಂದ ಮತ್ತು  2018 ರಲ್ಲಿ ಮೊಳಕಾಲ್ಮುರು ಕ್ಷೇತ್ರದ ಶಾಸಕರಾಗಿದ್ದರು.
ಈ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮದೇ ಆದ ರೀತಿಯಲ್ಲಿ ಗೆಳೆತನ ಹೊಂದಿದ್ದ ಬಿ.ನಾಗೇಂದ್ರ ವಿರುದ್ದ ಈಗ ಪ್ರಬಲ‌ ಸ್ಪರ್ಧೆಯನ್ನು ಎದುರಿಸಬೇಕಿದೆ. ಈ‌ ಹಿಂದೆ ನಗರದ ಕೌಲ್ ಬಜಾರ್ ಪ್ರದೇಶದ ತಮ್ಮ ಬೆಂಬಲಿಗರನ್ನು ಶ್ರೀರಾಮುಲು ತಮ್ಮ ಗೆಲುವಿಗೆ ನಂಬಿಕೊಂಡಂತಿದೆ. ಏನಾಗುತ್ತೆ ಎಂಬುದು ಫಲಿತಾಂಶದಿಂದ ಹೊರ ಬರ ಬೇಕಿದೆ.