ಭರ್ಜರಿ ಪ್ರಚಾರ ಆರಂಭಿಸಿದ ಅರುಣಾ ಲಕ್ಷ್ಮೀ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.03:  ನಗರ ಕ್ಷೇತ್ರದಿಂದ  ಕಲ್ಯಾಣ ರಾಜ್ಯ ಪ್ರಗತಿ  ಪಕ್ಷದಿಂದ ಇದೇ ಮೊದಲ‌ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿರುವ ಗಾಲಿ ಅರುಣಾ ಲಕ್ಷ್ಮಿ ಅವರು  ಇಂದು ತಮಗೆ ಮತ ನೀಡುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ನಗರದ 35 ವಾರ್ಡಿನ ಕುರಿಹಟ್ಟಿ ಮೊದಲಾದ ಪ್ರದೇಶಗಳಿಗೆ ಬೆಳಗ್ಗಿನಿಂದ ಮನೆ ಮನೆಗೆ ತೆರಳಿ ಓರ್ವ ಮಹಿಳೆಯಾಗಿ ಚುನಾವಣೆ ಎದುರಿಸಿ ಬಳ್ಳಾರಿ ನಗರದ ಮೊದಲ‌ ಮಹಿಳಾ  ಶಾಸಕಿಯನ್ನಾಗಿ ಮಾಡಲು ನೀವು ಆಶಿರ್ವಾದ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ತಮ್ಮ ಪಕ್ಷದ ಕರಪತ್ರ ನೀಡಿ, ಬಳ್ಳಾರಿ ನಗರದ  ಸರ್ವತೋಮುಖ ಅಭಿವೃದ್ಧಿಗಾಗಿ ನನಗೆ ಮತ ನೀಡಿ ಎಂದರು. ಈ ಹಿಂದೆ ತಮ್ಮಪತಿ ಜನಾರ್ಧನರೆಡ್ಡಿ ಅವರು ಜಿಲ್ಲೆಯ ಸಚಿವರಾಗಿದ್ದಾಗ ನಗರದ ಅಭಿವೃದ್ಧಿ ಮಾಡಿದ್ದನ್ನು ಮತದಾರರಿಗೆ ತಿಳಿಸಿದರು
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕುರಿಹಟ್ಟಿ ರಾಜ, ಪ್ರವೀಣ್ ರೆಡ್ಡಿ, ಸತೀಶ್,ವಾಸು, ಕೃಷ್ಣ, ರಾಜ, ಚಂದ್ರ, ವಿಜಿ, ನರೇಶ್, ಗಂಗಾಧರ, ಹೊನ್ನೂರ, ಶಶಿ, ಶರಣ ಮೊದಲಾದವರು ಇದ್ದರು.