ಭರ್ಜರಿ ದಾಳಿ :ಅಪಾರ ಪ್ರಮಾಣದ ಚಿನ್ನ ಹಾಗೂ ಹಣ ವಶ, ಓರ್ವನ ಬಂಧನ

ಚಡಚಣ :ಮಾ.31:ಸಮೀಪದ ದೇವರ ನಿಂಬರಗಿ ಕ್ರಾಸ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಕಾರಿನ ಮೇಲೆ ಚಡಚಣ ಪೆÇಲೀಸರು ದಾಳಿ ಮಾಡಿ ಯಾವುದೇ ದಾಖಲಾತಿ ಇಲ್ಲದ ಸುಮಾರು 27 ಲಕ್ಷ ರೂ. ಮೌಲ್ಯದ 480 ಗ್ರಾಮ ಚಿನ್ನ ಹಾಗೂ 6 ಲಕ್ಷ ರೂ. ನಗದು ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ಬಂಧಿತ ಆರೋಪಿಯನ್ನು ಸೋಲಾಪುರ ನಿವಾಸಿ ವಿಜಯ ಪಡಕೊಳ್ಕರ್ ಎಂದು ಗುರಿತಿಸಲಾಗಿದೆ. ಇಂಡಿ ಡಿ ವೈ ಎಸ್ ಪಿ ಚಂದ್ರಕಾಂತ ನಂದರೆಡ್ಡಿ, ಚಡಚಣ ಸಿ ಪಿ ಐ ಸಾಹೇಬಗೌಡ ಪಾಟೀಲ, ಚಡಚಣ ಪಿ ಎಸ್ ಐ ಸಂಜಯ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಚಿನ್ನಭಾರಣ ಹಾಗೂ ನಗದು ಮೂಲದ ಕುರಿತು ಹಾಗೂ ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಚಡಚಣ ಸಿ ಪಿ ಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.