ಭರವಸೆ ಮೇರೆಗೆ ಧರಣಿ ವಾಪಸ್

ಕುರುಗೋಡು. ಜ.07 : ಸಮೀಪದ ಕುಡುತಿನಿ ಕಾರ್ಖಾನೆಗಳ ಪ್ರದೇಶಗಳಲ್ಲಿ ಧೂಳುನಿಯಂತ್ರಣಕ್ಕಾಗಿ ಕುಡಿತಿನಿ ಪ.ಪಂ.ಸದಸ್ಯರು, ಸಂಘ-ಸಂಸ್ಥೆ, ಮತ್ತು ಊರಿನ ನಾಗರಿಕರು ನಡೆಸುವ ಪ್ರತಿಭಟನಾಸ್ಥಳಕ್ಕೆ ಬುಧವಾರ 5 ನೇದಿನದ ರಾತ್ರಿ ಸಹಾಯಕ ಆಯುಕ್ತರು, ಮತ್ತು ಪರಿಸರ ವಾಯುಮಾಲಿನ್ಯ ಸಹಾಯಕ ಅಧಿಕಾರಿಗಳು ಭೇಟಿ ನೀಡಿ ಧೂಳು ಹೆಚ್ಚಾಗಿ ಬರುವ ಕಾರ್ಖಾನೆಗಳ ವಿರುದ್ದ ಕ್ರಮ ಜರುಗಿಸುತ್ತೇವೆ ಎಂಬ ಭರವಸೆ ಮೇರೆಗೆ ಪ್ರತಿಭಟನಾಕಾರರು ಧರಣಿಯನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಪರಿಸರವಾಯುಮಾಲಿನ್ಯ ನಿಯಂತ್ರಣ ಸಹಾಯಕ ಅಧಿಕಾರಿ ಪವನ್ ಮಾತನಾಡಿ, ಕಳೆದ 15ದಿನಗಳ ಹಿಂದೆ ಕುಡುತಿನಿಪ್ರದೇಶದಲ್ಲಿ ಯಾವ-ಯಾವ ಕಾರ್ಖಾನೆಗಳಿಂದ ಧೂಳು ಹೆಚ್ಚಾಗಿ ಬರುತ್ತಿದೆ ಎಂದು ಕಾರ್ಖಾನೆಗಳ ಕಪ್ಪುಧೂಳು ಪರೀಕ್ಷೆಗಾಗಿ ಕೇಂದ್ರಕಛೇರಿಗೆ ವರದಿ ಕಳುಹಿಸಲಾಗಿತ್ತು. ಇಂದು ಕೇಂದ್ರಕಛೇರಿಯಿಂದ ಬಂದ ವರಿದಿಯಲ್ಲಿ ಅಗರ್‍ವಾಲ್ ಕಾರ್ಖಾನೆಯಿಂದ ಹೆಚ್ಚಾಗಿ ಧೂಳು ಬರುತ್ತಿರುವುದು ದೃಢಪಟ್ಟಿದೆ. ಈ ಕಾರ್ಖಾನೆಯ ಬಂದ್‍ಗಾಗಿ ಇಲಾಖೆಯಿಂದ ನೋಟೀಸ್ ನೀಡಲಾಗಿದೆ ಎಂದರು. ಉಳಿದ 6 ಕಾರ್ಖಾನೆಗಳಿಂದ ಸಹ ಧೂಳು ಬರುತ್ತಿದ್ದು, ಧೂಳು ನಿಯಂತ್ರಣಕ್ಕಾಗಿ ಮುಂಜಾಗ್ರತಕ್ರಮವಾಗಿ ಅವರಿಗೆ ಸಹ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಸಹಾಯಕ ಆಯುಕ್ತ ರಮೇಶ್‍ಕೋನರೆಡ್ಡಿ ಮಾತನಾಡಿ, ಕುಡುತಿನಿಯಲ್ಲಿ ಕಾರ್ಯನಿರ್ವಹಿಸುವ ಯಾವ-ಯಾವ ಕಾರ್ಖಾನೆಗಳಿಂದ ಧೂಳು ಹೆಚ್ಚಾಗಿ ಬರುತ್ತಿದಿಯೋ ಅಂಥಹ ಕಾರ್ಖಾನೆಗಳ ವಿರುದ್ದ ಕ್ರಮ ಜರುಗಿಸಲಾಗುತ್ತಿದೆ. ಇಂದಿನಿಂದ ಕುಡುತಿನಿಯಲ್ಲಿ ಧೂಳು ಕಡಿಮೆಯಾಗುತ್ತಿದೆ. ಆದ್ದರಿಂದ ಎಲ್ಲರೂ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಡುತಿನಿ ಪ.ಪಂ.ಅಧ್ಯಕ್ಷ ವಿ.ರಾಜಶೇಖರ್ ಮಾತನಾಡಿ, ಅಧಿಕಾರಿಗಳ ಭರವಸೆ ಮತ್ತು ಶಾಸಕರ ಭರವಸೆ ಮೇರೆಗೆ ಧರಣಿ ಹಿಂಪಡೆಯುತ್ತೇವೆ. ಆದರೆ ಒಂದು ವೇಳೆ ಮತ್ತೇ ಧೂಳು ಬಂದರೆ ಕುಡುತಿನಿ ಎನ್‍ಹೆಚ್3 ರಸ್ತೆತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ನುಡಿದರು.
ಪ.ಪಂ.ಸದಸ್ಯ ವೆಂಕಟರಮಣಬಾಬು, ಕನಿಕೇರಿಪೊಂಪಾಪತಿ, ಸುನಿಲ್, ಲೆನಿನ್, ಮುಖಂಡ ಚಂದ್ರಾಯಿದೊಡ್ಡಬಸಪ್ಪ, ಚಂದ್ರಪ್ಪ,ದೊಡ್ಡಪ್ಪ, ಬೀಸಣ್ಣ, ಆರ್.ಸತ್ಯಪ್ಪ, ರಾಜೇಂದ್ರಪ್ರಸಾದ್, ವಿ.ರಾಮು, ಜಂಗ್ಲಿಸಾಬ್,ಶಿವುಕುಮಾರ್, ಎ.ರಾಜ, ಪ್ರತಾಪ್, ಮೋಟಾತಿಮ್ಮಪ್ಪ,ಶ್ರೀಧರ್, ಅಶೋಕ್,ಬಲಿಜಸಂಘದ ರಾಮಾಂಜಿನಿ, ಕುಡುತಿನಿಶ್ರೀನಿವಾಸ್, ಕೋನಂಕಿತಿಲಕ್,ಪ್ರಭಂಜನ್‍ಕುಮಾರ್, ಮಲ್ಲಂಗೀನಂದೀಶ್, ಬಿ.ಸಂಪತ್, ಗಂಗಾಧರ್, ಡಿಎಸ್‍ಎಸ್.ವೆಂಕಟೇಶ್, ಕೆಂಚಪ್ಪ, ಕಿರಣ್,ಗೋವಿಂದ ಸೇರಿದಂತೆ ಊರಿನ ಮುಖಂಡರು, ಇದ್ದರು. 5ದಿನಗಳ ಕಾಲ ಧರಣಿಗೆ ಸಹಕಾರನೀಡಿದ ಪ್ರತಿಭಟನಾಕಾರರಿಗೆ, ಪೋಲೀಸ್‍ಅಧಿಕಾರಿಗಳಿಗೆ, ಸಿಬ್ಬಂದಿವರ್ಗ, ಮುಖಂಡರುಗಳಿಗೆ ಪ.ಪಂ.ಅದ್ಯಕ್ಷ ವಿ.ರಾಜಶೇಖರ್ ಕೃತಜ್ನತೆ ಅರ್ಪಿಸಿದರು.