ಭರವಸೆ ಬೆಳಕು ಫೌಂಡೇಶನ್ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಮಾ.11: ಯಾರು ಮನಸ್ಸು ಪ್ರಾಂಜಲವಾಗಿರುತ್ತದೆಯೋ, ಯಾರ ಮನಸ್ಸು ನಿಷ್ಕಲ್ಮಶವಾಗಿರುತ್ತದೆಯೋ, ಯಾವುದೇ ಸ್ವಾರ್ಥದ ಭಾವನೆ ಇಲ್ಲದೆ ನಿಸ್ವಾರ್ಥವಾಗಿ ಕಾರ್ಯಗಳನ್ನ ಮಾಡಿ ಸಮಾಜಕ್ಕಾಗಿ ಸಮರ್ಪಣೆ ಮಾಡಿರುತ್ತಾರೆ ಅಂತವರಿಗೆ ಯಾವುದೇ ತೊಂದರೆಗಳು ಬರುವುದಿಲ್ಲ. ಅಂತಹ ಒಳ್ಳೆಯ ಭಾವನೆಗಳನ್ನು ಇಟ್ಟುಕೊಂಡು ಕಾರ್ಯವನ್ನು ಮಾಡಬೇಕು. ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು
ಅವರು ಪಟ್ಟಣದ ಸುಕ್ಷೇತ್ರ ಗಚ್ಚಿನಮಠದ ಆವರಣದಲ್ಲಿ ಭರವಸೆ ಬೆಳಕು ಫೌಂಡೇಶನ್ ಉದ್ಘಾಟನೆ ಪ್ರಯುಕ್ತ ಮಹಿಳಾ ದಿನಾಚರಣೆ. ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾರಲ್ಲಿ ಸ್ಥಿರತೆ ಇರುತ್ತದೆಯೋ, ಯಾರಲ್ಲಿ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಬದ್ಧತೆ ಇರುತ್ತದೆಯೋ. ಯಾರಲ್ಲಿ ಸಮಾಜಕ್ಕೆ ಏನಾದರೂ ಒಳ್ಳೆಯದನ್ನ ಮಾಡಿ ಹೌದು ಹೌದು ಎನಿಸಿಕೊಳ್ಳುವ ಭಾವ ಇರುತ್ತದೆ ಅಂತಹವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.
ಮಹಿಳೆಯರನ್ನು ಸಶಕ್ತರನ್ನಾಗಿಸುವ ಸಲುವಾಗಿ ಕೇಂದ್ರ. ರಾಜ್ಯ ಸರಕಾರಗಳು ಹಾಗೂ ನಬಾರ್ಡ್ ಬ್ಯಾಂಕಿನಿಂದ ಅನೇಕ ಸಾಲ ಸೌಲಭ್ಯಗಳು ಇದ್ದು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡಿಸಿಕೊಂಡು ತಮ್ಮ ಫೌಂಡೇಶನ್ ಮುಖಾಂತರ ಮಹಿಳೆಯರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ರೂಪಾ ಕಾಂಬಳೆಯವರು ಸ್ಥಾಪಿಸಿರುವ ಭರವಸೆ ಬೆಳಕು ಫೌಂಡೇಶನ್ ಹೆಸರಿಗೆ ತಕ್ಕಂತೆ ಸಮಾಜದಲ್ಲಿ ಭರವಸೆ ಬೆಳಕಾಗಿ ಕಾರ್ಯ ಮಾಡಲಿ. ಬಡವರು, ಹಿಂದುಳಿದವರ ಧ್ವನಿಯಾಗಿ, ಅವರಿಗೆ ಆಸರೆಯಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ ಯಾರು ಜೀವನದಲ್ಲಿ ಹತಾಶೆಗೊಂಡಿರುತ್ತಾರೂ ಅಂತಹವರಿಗೆ ಭರವಸೆ ಬೆಳಕು ಫೌಂಡೇಶನ್ ಬದುಕಿನ ಆಶೆ ಚಿಗುರಿಸುತ್ತದೆ ಹಾಗೂ ಅವರ ಜೀವನವು ಪವಿತ್ರವಾದ ಬೆಳಕಿನಿಂದ ಕಂಗೊಳಿಸುತ್ತದೆ. ಒಬ್ಬ ಮಹಿಳೆ ಮನೆ ಬಿಟ್ಟು ಹೊರ ಬರಬೇಕಾದರೆ ಸಾವಿರಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರಿಗೆ ಅನುಕಂಪ ಬೇಡ ಅವಕಾಶ ಕೊಡಿ ಅವರಿಗೆ ಅವಕಾಶ ಕೊಟ್ಟರೆ ಅಸಾಧ್ಯವಾದುದ್ದನ್ನು ಸಾಧಿಸುವ ಶಕ್ತಿ ಮಹಿಳೆಯರಿಗಿದೆ. ಮಹಿಳೆ ಒಂದು ಸಾರಿ ಗಟ್ಟಿ ನಿರ್ಧಾರ ತೆಗೆದುಕೊಂಡರೆ ಆ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಿರ್ಧಾರ ಮಾಡಿದ್ದನ್ನ ಸಾಧಿಸಿ ತೋರಿಸುತ್ತಾಳೆ.
ಮಹಿಳೆ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ ಮಹಿಳೆಯರಿಗೆ ಉನ್ನತ ಸಮಾಜ ಕಟ್ಟುವಂತಹ ಅಪ್ರತಿಮ ಬುದ್ಧಿಮತ್ತೆ, ಚಾಣಾಕ್ಷತೆ, ಮುಂದಾಲೋಚನೆ, ಶಕ್ತಿ ಇದೆ. ತಾವು ಬೆಳೆಯುವುದರ ಜೆuಟಿಜeಜಿiಟಿeಜತೆಗೆ ಮುಂದಿನ ದಿನಮಾನಗಳಲ್ಲಿ ತಮ್ಮ ಭರವಸೆ ಬೆಳಕು ಫೌಂಡೇಶನ್ ಮೂಲಕ ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸಹಾಯ ಸಹಕಾರ ಮಾಡುವಂತಹ ಕಾರ್ಯ ಮಾಡಬೇಕು ಎಂದು ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಭರವಸೆ ಬೆಳಕು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ರೂಪಾ ಕಾಂಬಳೆ ವಹಿಸಿದ್ದರು.
ಈ ವೇಳೆ ಬೆಳಗಾವಿಯ ಜಯಶ್ರೀ ಸೂರ್ಯವಂಶಿ. ಮುಖಂಡ ರಾಮನಗೌಡ ಪಾಟೀಲ. ಎ ವಾಯ್ ತಳವಾರ. ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರನ್ನು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮುಖಂಡರಾದ ಫರೀದ ಅವಟಿ, ದುಂಡಪ್ಪಾ ಪಡಸಲಗಿ, ಸವಿತಾ ಕಾಂಬಳೆ. ದಲಿತ ಪ್ಯಾಂಥರ್ಸ್ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ರಮೇಶ ಹರಿಜನ, ಮಹಾದೇವ ಮಕ್ಕಳಗೇರಿ. ಭೀಮಶಿ ದೊಡಮನಿ. ಅಶೋಕ ಕಾಂಬಳೆ. ಸುಶಾಂತ ಪಟ್ಟಣ, ವೇದಾ ಪಟ್ಟಣ. ರಾವಸಾಬ ಕಾಂಬಳೆ. ಉಮೇಶಕುಮಾರ ಕೆ ಕೆ. ಶಂಕರ ಸಿಂಗೆ. ದಿಲೀಪ ಕಾಂಬಳೆ. ಮಹಾದೇವ ಕಾಂಬಳೆ. ಸಂಗೀತಾ ಚನಗೌಡರ, ಭಾರತಿ ಖೋತ. ರೇಖಾ ಪಾಟೀಲ. ವಿದ್ಯಾ ಹಿರೇಮಠ, ಕಲಾವತಿ ಕಿತ್ತೂರ. ಆಶಾ ಪಾಟೀಲ. ಮಹಾದೇವಿ ಹೊಳಿಕಟ್ಟಿ. ಸುವರ್ಣಾ ಬಡಿಗೇರ. ವಂದನಾ ಗೋಟಖಿಂಡಿ. ಕಲ್ಯಾಣಿ ತೇರದಾಳ. ಪ್ರಶಾಂತ ಕುರಪೆ. ಅಮೂಲ ಕುರಪೆ. ರಸೂಲ್ ಮುಲ್ಲಾ. ರಾಜಶ್ರೀ ಈಟಿ. ಸಂಗೀತಾ ವಗ್ಗಿ. ಸುನೀತಾ ಕಾಂಬಳೆ. ಸೇರಿದಂತೆ ಹಲವರು ಗಣ್ಯಮಾನ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿಜಯ ಹುದ್ದಾರ. ನಿರೂಪಿಸಿ ವಂದಿಸಿದರು.


12ನೇ ಶತಮಾನದಲ್ಲಿ ಮಹಾನ್ ದಾರ್ಶನಿಕ ಬಸವಣ್ಣನವರು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯಾಕ್ಕಾಗಿ ಶ್ರಮಿಸಿದರು. ಮಹಿಳೆ ಸಮಾಜದ ಬಹುದೊಡ್ಡ ಶಕ್ತಿ ನಮ್ಮ ಸಮಾಜವನ್ನು ತಿದ್ದುವ ಶಕ್ತಿ ಮಹಿಳೆಯರಿಗಿದೆ ಈ ನಿಟ್ಟಿನಲ್ಲಿ ನಿಮ್ಮ ಭರವಸೆ ಬೆಳಕು ಫೌಂಡೇಶನ್ ಮುಖಾಂತರ. ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಜೊತೆಗೆ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕು

                ಲಕ್ಷ್ಮಣ ಸವದಿ. ಶಾಸಕರು