ಮಾನ್ವಿ,ಜೂ.೨೦-
ಕಳೆದ ೧೮೩ ದಿನಗಳಿಂದಲೂ ನಿತ್ಯನಿರಂತರ ಹೋರಾಟಕ್ಕೆ ಮಣೆಯಾಕದ ಹಿನ್ನೆಲೆಯಲ್ಲಿ ಸೋಮುವಾರ ಬೆಂಕಿಯ ಮಧ್ಯ ಉಪವಾಸದ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲಾಗಿದ್ದು ಇನ್ನೂ ಒಂದು ವಾರದೊಳಗೆ ನಿಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಬೆಂಕಿಯ ಉಪವಾಸದ ಹೋರಾಟವನ್ನು ಹಿಂಪಡೆಯಲಾಗಿದ್ದು ನಿತ್ಯವೂ ಕೂಡ ಧರಣಿಯನ್ನು ಮುಂದುವರೆಸಲಾಗುತ್ತದೆ ದಲಿತ ಪರ ಸಂಘಟನೆಯ ಮುಖಂಡ ಪ್ರಭುರಾಜ್ ಕೊಡ್ಲಿ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರುವ ಡಾ ಬಿ ಆರ್ ಅಂಬೇಡ್ಕರ್ ನಿಗಮ ಮಂಡಳಿಯಿಂದ ಹಂಚಿಕೆಯಾದ ಬಡವರ ಭೂಮಿಯನ್ನು ಖರೀಸಿದಿ ಮಯೂರನ ವಿರುದ್ಧ ಕ್ರಮ ಹಾಗೂ ಪುರಸಭಾ ವಾಣಿಜ್ಯ ಮಳಿಗೆಯನ್ನು ಕೂಡ ಹಸ್ತಾಂತರ ಮಾಡುವಂತೆ ನಿರಂತರ ೧೮೩ ದಿನಗಳಿಂದ ನಡೆಯುತ್ತಿರುವ ಹೋರಾಟ ಮುಂದುವರೆಸಲಾಗುತ್ತದೆ ಹಾಗೂ ಇದಕ್ಕೆ ವಾರ ಸಮಯವನ್ನು ತೆಗೆದುಕೊಂಡು ಜಿಲ್ಲಾ ಉಸ್ತುವಾರಿ ಸೂಚನೆಯ ಮೇರಿಗೆ ಜಿಲ್ಲಾಧಿಕಾರಿಗೂ ಕೂಡಲೇ ಕ್ರಮ ಕೈಗೊಳ್ಳವಂತೆ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಎಸ್.ಎಂ ಶಹನವಾಜ್, ಮೌನೇಶ ನಾಯಕ, ಗಿರಿನಾಯಕ, ಪಂಪಾಪತಿ ಹಡಪದ, ರಮೇಶ ನಾಯಕ, ಇಲಿಯಾಸ್, ಸೇರಿದಂತೆ ಅನೇಕರು ಇದ್ದರು.