ಭರವಸೆ ಈಡೇರಿಸುವ ಬಿಜೆಪಿಗೆ ಮತ ನೀಡಿ ಕ್ಷೇತ್ರದ ಸೇವೆ ಮಾಡಲು ಮತ್ತೋಮ್ಮೆ ಅವಕಾಶಮಾಡಿಕೊಡಿ ಬಿಜೆಪಿ ಅಭ್ಯರ್ಥಿ ಶಾಸಕ ಕೆ,ಶಿವನಗೌಡನಾಯಕ

ಅರಕೇರಾ,ಮೇ.೦೭- ದೇವದುರ್ಗ ವಿಧಾನಸಭಾ ಕ್ಷೇತ್ರಾದ ವ್ಯಾಪ್ತಿಯಲ್ಲಿಬರುವ ಗಲಗ ಹಾಗೂ ಪಲಕನಮರಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಗ್ರಾಮಗಳಿಗೆ ಬಿಜೆಪಿ ಅಭ್ಯರ್ಥಿ ಕೆ,ಶಿವನಗೌಡನಾಯಕ ಶನಿವಾರದಂದು ಮತಯಾಚನೆಮಾಡಿದರು.
ಊಟಿ,ಮೂಡಲಗುಂಡ,ಪಲಕನಮರಡಿ,ವಂದಲಿ,ಮದರಕಲ್, ದೇವರಗುಡ್ಡ,ಗಲಗ ಗ್ರಾಮಗಳ ವಿವಿಧವಾರ್ಡುಡುಗಳಿಗೆ ಬೇಟಿ ನೀಡಿ ಪಕ್ಷದದ ಕಾರ್ಯಕರ್ತರು,ಬೆಂಬಲಿಗರೊಂದಿಗೆ ಮನೆ ಮನೆಗೆ ಬೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.
ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳೆನ್ನದೇ ಶ್ರಮವಹಿಸಿದ್ದೇನೆ ನನ್ನ ಅಧಿಕಾರದ ಅವಧಿಯಲ್ಲಿ ಹಲವಾರು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡುವಂತೆ ಮತದಾರಲ್ಲಿಮನವಿಮಾಡಿದರು.
ಇದೇವೇಳೆ ಮತಯಾಚನೆ ಆಗಮಿಸಿದ ಶಾಸಕ ಕೆ,ಶಿವನಗೌಡನಾಯಕ ಅವರಿಗೆ ಅಭಿಮಾನಿಗಳು ಕಾರ್ಯಕರ್ತರು ಸನ್ಮಾನಿಸಿಗೌರವಿಸಿದರು ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮುಖಂಡರು ಗ್ರಾಮಪಂಚಾಯತ ಸದ್ಯಸರುಗಳು ಭಾಗವಹಿಸಿದ್ದರು.