ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್ ಮುಂದಾಗಲಿ

ಕೋಲಾರ,ಮೇ,೧೫- ವಿಧಾನ ಸಭಾ ಚುನಾವಣೆ ಮುಗಿಯಿತು, ಕಾಂಗ್ರೇಸ್ ಪಕ್ಷಕ್ಕೆ ಮತದಾರರ ಪ್ರಭುಗಳು ಅಧಿಕಾರ ನೀಡಿದ್ದಾರೆ, ಈಗಾ ಚುನಾವಣೆಯ ಹುಮ್ಮಸ್ಸಿನಲ್ಲಿ ನೀಡಿದಂತ ಭರವಸೆಗಳು ಈಡೇರಿಸುವಂತ ಬಹು ದೊಡ್ಡ ಜವಾಬ್ದಾರಿ ಕಾಂಗ್ರೇಸ್ ಪಕ್ಷದ ಮೇಲಿದೆ. ಮತದಾರರ ಪ್ರಭುಗಳು ಬಿಜೆಪಿಯ ಬೆಲೆ ಏರಿಕ,ಭ್ರಷ್ಟಚಾರದಿಂದ ಬೇಸತ್ತು ಸರ್ಕಾರದ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಸಮರ್ಪಕವಾದ ಆಡಳಿತ ನೀಡಿದಲ್ಲಿ ಮುಂಬರುವ ವರ್ಷದಲ್ಲೂ ಕಾಂಗ್ರೇಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ನೀಡುವ ಸಾಧ್ಯತೆ ಇದೆ. ಅದರೆ ಭರವಸೆ ಈಡೇರಿಸುವಲ್ಲಿ ಇಲ್ಲಸಲ್ಲದ ಸಬೂಬುಗಳು ಹೇಳಿಕೊಂಡು ಕಾಲಹರಣ ಮಾಡಿದರೆ ಬಿಜೆಪಿಗೆ ಕಲಿಸಿದ ಪಾಠ ಕಾಂಗ್ರೇಸ್ ಪಕ್ಷವು ಕಲಿಸುವ ಸಾಧ್ಯತೆ ಇದೆ ಅದಕ್ಕೆ ಅವಕಾಶ ನೀಡದೆ ಎಚ್ಚರಿಕೆಯಿಂದ ಚುನಾವಣೆಗೆ ಮುನ್ನ ನೀಡಿದಂತ ಭರವಸೆಗಳು ಈಡೇರಿಸಲು ಮುಂದಾಗ ಬೇಕಾಗಿದೆ.
ಕಾಂಗೇಸ್ ಪಕ್ಷವು ಪ್ರಥಮವಾಗಿ ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೆ ಪ್ರತಿ ತಿಂಗಳು ೨೦೦ ಯೊನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬದ ಮಹಿಳೆಗೆ ರೂ೨೦೦೦, ಪ್ರತಿ ವ್ಯಕ್ತಿಗೆ ಬಿಪಿಎಲ್ ಕಾರ್ಡಿನವರಿಗೆ ೧೦ ಕೆ.ಜಿ ಅಕ್ಕಿಯನ್ನು ನೀಡಲಾಗುವುದು, ಇದರ ಜೂತೆಗೆ ಗ್ಯಾಸ್ ಸಿಲಿಂಡರ್‌ಗೆ ರೂ,೫೦೦,ಜಿ.ಎಸ್.ಟಿ. ಪರಿಹಾರಕ್ಕೆ ರೂ ೫೦೦ ಹಾಗೂ ಬೆಲೆ ಏರಿಕೆಯ ಪರಿಹಾರಕ್ಕೆ ಒಂದು ಸಾವಿರ ರೂ ನೀಡುವುದಾಗಿ ಗ್ಯಾರೆಂಟಿ ಕಾರ್ಡ್‌ನಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿ.ಎಲ್.ಪಿ. ಮುಖಂಡ ಸಿದ್ದರಾಮಯ್ಯ ಅವರು ಸಹಿ ಹಾಕಿದ್ದಾರೆ. ಪ್ರತಿ,ಮನೆ,ಮನೆಗೆ ಹಂಚಿಕೆ ಮಾಡಿರುವ ಹಿನ್ನಲೆಯಲ್ಲಿ ಮತದಾರರು ಪ್ರಭುಗಳು ಕಾಂಗ್ರೇಸ್ ಪಕ್ಷದ ವಿಶ್ವಾಸ ಇರಿಸಿ ಬಹು ಮತಗಳಿಂದ ಸರ್ಕಾರ ರಚಿಸಲು ಅಧಿಕಾರ ನೀಡಿದ್ದಾರೆ.
ನುಡಿದಂತೆ ನಡೆಯುವ ಸರ್ಕಾರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೇಸ್ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ನೀಡಿರುವಂತ ಭರವಸೆಗಳನ್ನು ಈಡೇರಿಸ ಬೇಕಾಗಿರುವುದು ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂಬುವುದನ್ನು ನೆನಪಿನಲ್ಲಿಡ ಬೇಕಾಗಿದೆ. ಸರ್ಕಾರ ರಚನೆ ಮಾಡಿದ ಕೊಡಲೇ ಭರವಸೆ ನೀಡಿರುವುದನ್ನು ಈಡೇರಿಸಲು ಅಗತ್ಯವಾದ ಕ್ರಮಗಳನ್ನು ಜಾರಿ ಮಾಡ ಬೇಕಾಗಿದೆ. ಅದು, ಇದೂ ಸಬೂಬುಗಳು ಹೇಳಿ ಕೊಂಡು ಕಾಲಹರಣ ಮಾಡಿದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಳು ಹಾಗೂ ಪಂಚಾಯತ್ ಚುನಾವಣೆಯಲ್ಲಿ ಮತದಾರರ ಪ್ರಭುಗಳಿಂದ ತಕ್ಕ ಪಾಠ ಕಲಿಯ ಬೇಕಾಗುತ್ತದೆ ಎಂಬ ಎಚ್ಚರಿಕೆಯ ಅರಿವು ಇರಲಿ ಎಂಬುವುದು ಮತದಾರರ ಪ್ರಭುಗಳು ನೊತನ ಸರ್ಕಾರಕ್ಕೆ ನೀಡುವಂತ ಸಂದೇಶವಾಗಿದೆ.
ಒಂದು ವೇಳೆ ಸರ್ಕಾರವು ಮತದಾರರ ಪ್ರಭುಗಳಿಗೆ ನೀಡಿರುವಂತ ಭರವಸೆಗಳನ್ನು ಈಡೇರಿಸದೆ ಕಾಲಹರಣ ಮಾಡಲು ಮುಂದಾಗುವುದು, ಭರವಸೆಗಳನ್ನು ಪಡೆಯಲು ಇಲ್ಲದ,ಸಲ್ಲದ ಕರಾರುಗಳು ಹಾಕುವ ಮೂಲಕ ಭರವಸೆಗೆ ಅಡೆ ತಡೆಗಳ ತಂತ್ರವನ್ನು ಪ್ರಯೋಗಿಸಿದರೆ ಚುನಾವಣೆಯಲ್ಲಿ ಮತದಾರರ ಪ್ರಭುಗಳು ಸರಿಯಾದ ಬುದ್ದಿ ಕಲಿಯ ಬೇಕಾಗುತ್ತದೆ ಎಂಬ ಪರಿಜ್ಞಾನವು ಇರ ಬೇಕು, ಮತದಾರರ ಪ್ರಭುಗಳು ಅಧಿಕಾರ ನೀಡಿರುವುದು ಪ್ರಜಾ ಸೇವೆಗಾಗಿ ಹೊರತು ನೀನು ದೌಲತ್ತು, ದುರಾಂಕರ ಪಡೆಯಲು ಎಂಬ ಅರಿವು ಇರಬೇಕು, ಮತದಾರರ ಪ್ರಭುಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೊಡಲೆ ಮುಂದಾಗಿ ಪರಿಹಾg ಕಲ್ಲಿಸಿದಾಗ ಮಾತ್ರ ಜನತ ಮನದಲ್ಲಿ ಮಾಸದಂತೆ ಉಳಿಯಲು ಸಾಧ್ಯವಿದೆ ಎಂಬ ಹಿತನುಡಿಗಳು ಕಾಂಗ್ರೇಸ್ ಸರ್ಕಾರಕ್ಕೆ ೩೫ ವರ್ಷಗಳ ನಂತರ ಬಹುಮತ ನೀಡಿದ ಮತದಾರ ಪ್ರಭುಗಳದ್ದಾಗಿದೆ.