
ಭರಮಸಾಗರ.ಜ.೮; ಕೆನರಾ ಬ್ಯಾಂಕ್ ಶಾಖೆ ಆರಂಭಗೊಂಡು 50 ವರ್ಷ ಆಯಿತು ಈ ಬ್ಯಾಂಕ್ ಒಟ್ಟು 126 ಕೋಟಿ ರೂ ವ್ಯವಹಾರ ನಡೆಸುವ ಬ್ಯಾಂಕ್ ಆಗಿದೆ ಎಂದು ಕೆನರಾ ಬ್ಯಾಂಕ್ ಪ್ರಬಂಧಕ ಕಿರಣ್ ಕುಮಾರ್ ಹೇಳಿದ್ದಾರೆ. ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ಶಾಖೆ ಆರಂಭಗೊಂಡ 50ನೇ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು ಬ್ಯಾಂಕ್ ನಲ್ಲಿ 60 ಸಾವಿರಕ್ಕೂ ಹೆಚ್ಚು ಉಳಿತಾಯ ಖಾತೆ ಸೇರಿದಂತೆ ವಿವಿದ ಖಾತೆಗಳಲ್ಲಿ ಗ್ರಾಹಕರು ವ್ಯವಹಾರ ನಡೆಸುತ್ತಿದ್ದಾರೆ. ಇದರಲ್ಲಿ 30 ಸಾವಿರ ಉಳಿತಾಯ ಖಾತೆಗಳು ಚಾಲ್ತಿಯಲ್ಲಿವೆ ರೂ 48 ಕೋಟಿ ಠೇವಣಿ ಹಣ ಇದೆ ರೂ 80ಕೋಟಿಗಳನ್ನು ಸಾಲದ ರೂಪದಲ್ಲಿ ರೈತರು, ಗ್ರಾಹಕರಿಗೆ ಸಾಲ ನೀಡಲಾಗಿದೆ ರೂ 126 ಕೋಟಿ ವ್ಯವಹಾರವನ್ನು ನಡೆಸುತ್ತಲಿರುವ ವಿಶ್ವಾಸನೀಯ ಬ್ಯಾಂಕ್ ಆಗಿದೆ ಎಂದರು. ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಸಿಹಿ ವಿತರಿಸಲಾಯಿತು. ಈ ವೇಳೆ ಕಟ್ಟಡ ಮಾಲಿಕ ಬಸವರಾಜ್, ಸಿಬ್ಬಂದಿಗಳಾದ ಪ್ರೇಮ್ ಸಿಂಗ್, ಶಾಯಿನಾ, ಚೇತನಾ, ರೋಜಾ, ಮಾಧುರಿ, ಶ್ವೇತಾ, ಇತರರು ಇದ್ದರು.