ಭರದಿಂದ ನಡೆಯುತ್ತಿದೆಹೆಚ್.ಎಲ್.ಸಿ.  ಕಾಲುವೆಯ ದುರಸ್ಥಿ ಕಾರ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04: ಮತ್ತೆ ನಿನ್ನೆ ತಾಲೂಕಿನ ಕೊಳಗಲ್ಲು ಬಳಿ ಹೆಚ್.ಎಲ್.ಸಿ.ಕಾಲುವೆಗೆ ಬೊಂಗಾ ಬಿದ್ದಿದ್ದು. ಅದನ್ನು ದುರಸ್ಥಿ ಮಾಡುವ ಕಾರ್ಯ ಇಂದು ಭರದಿಂದ ಸಾಗಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಅಂದರೆ ಆ.25 ರಂದು ಒಂದು ಬೊಂಗಾ ಬಿದ್ದು ಅದರ ದುರಸ್ಥಿಕಾರ್ಯ ಮಾಡಿ ನಾಲ್ಕೈದು ದಿನಗಳ ನಂತರ ನೀರು ಬಿಡಲಾಗಿತ್ತು.
ಈಗ ನಿನ್ನೆ ಮಧ್ಯಾಹ್ನ ಅದೇ ಸ್ಥಳದ ಅನತಿ ದೂರದಲ್ಲಿ ಮತ್ತೊಂದು ಬೊಂಗಾ ಬಿದ್ದಿದೆ. ಅದನ್ನು ಸ್ಥಳೀಯ ರೈತರು ಮಣ್ಣಾಕಿ ಮುಚ್ಚುವ ಪ್ರಯತ್ನದ ಮಧ್ಯೆ ತುಂಗಭದ್ರ ಮಂಡಳಿ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ರಾತ್ರಿ ವೇಳೆಗೆಲ್ಲ ಸಚಿವ ನಾಗೇಂದ್ರ ಸಹ ಸ್ಥಳಕ್ಕೆ ಭೇಟಿ ನೀಡಿ. ತಾಂತ್ರಿಕವಾಗಿಯೇ  ಕಾಲುವೆ ದುರಸ್ಥಿಗೊಳಿಸಿ. ಪದೇ ಪದೇ ಈ ರೀತಿ ಆಗುವುದನ್ನು ತಪ್ಪಿಸಿ ಎಂದು ಸೂಚನೆ ನೀಡಿದ್ದು. ಇಂದು ತಾಂತ್ರಿಕವಾಗಿ  ದುರಸ್ಥಿ ಮಾಡುವ ಕಾರ್ಯನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಕಿಸಾನ್ ಸೆಲ್ ಜಿಲ್ಲಾ ಅಧ್ಯಕ್ಷ ಮಾನ್ಯಂ ಶ್ರೀಧರ್  ತಿಳಿಸಿದ್ದಾರೆ.