ಭರತ ಹುಣ್ಣಿಮೆಗೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಒದಗಿಸಿ: ಟಿ.ವಿ.ಪ್ರಕಾಶ್

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಫೆ7.; ಭರತ ಹುಣ್ಣಿಮೆ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಫೆ.22 ರಿಂದ 25 ರವರೆಗೆ ಐತಿಹಾಸಿಕ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿಯ ಜಾತ್ರೆ ಜರುಗಲಿದ್ದು ಬರುವ ಭಕ್ತರಿಗೆ ಮೂಲಸೌಕರ್ಯವನ್ನು ಒದಗಿಸಲು ಮುಂದಾಗಬೇಕು ಎಂದು ಗ್ರಾಪಂ ಆಡಳಿತಾಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ತಿಳಿಸಿದರು.ತಾಲೂಕಿನ ಉಚ್ಚಂಗಿದರ್ಗದ ಗ್ರಾಮದ ಉಚ್ಚೆಂಗೆಮ್ಮ ದೇವಿ ಯಾತ್ರೆ ನಿವಾಸದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಟಿವಿ ಅಳವಡಿಸುವಂತೆ, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ಬೀದಿ ದೀಪ, ಅಂಬುಲೆನ್ಸ್, ಅಗ್ನಿಶಾಮಕ, ಸಾರಿಗೆ ವ್ಯವಸ್ಥೆ, ಮತ್ತು ಹೆಚ್ಚುವರಿಯಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹೆಚ್.ಗಂಗಾಧರ, ತಹಶೀಲ್ದಾರ್ ಗಿರೀಶ್ ಬಾಬು, ತಾ.ಪಂ ಇಒ ಕೆ.ಆರ್.ಪ್ರಕಾಶ್, ದೇವಸ್ಥಾನದ ಕಾರ್ಯನಿರ್ವಾಹಕಾಧಿಕಾರಿ ಮಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಉಮೇಶ್ ನಾಯ್ಕ್, ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಪಿಎಸ್‌ಐ ಕೆ.ರಂಗಯ್ಯ, ದೇವಸ್ಥಾನ ಸಮಿತಿ ಅಧ್ಯಕ್ಷ ಕಟಿಗಿ ಪರುಶುರಾಮಪ್ಪ, ಪಿಡಿಒ ಪರಮೇಶ್ವರಪ್ಪ, ಸಾರಿಗೆ ಇಲಾಖೆ ವೆಂಕಟೇಶ್, ಪಕ್ರುದ್ದೀನ್, ಮಂಜಳ, ಸೇರಿದಂತೆ ಇತರರು ಇದ್ದರು.