ಭರತ ನಾಟ್ಯ ಕಲಾವಿಧರಿಗೆ ಶಾಸಕರಿಂದ ಪಾರಿತೋಷಕ

ಸಿರವಾರ.ಫೆ೨೮- ತಾಲೂಕಿನ ನವಲಕಲ್ ಬೃಹನ್ಮಠದ ಲಿಂ.ಷ.ಬ್ರ.ಸೋಮಶೇಖರ ಶಿವಾಚಾರ್ಯರ ೨೬ ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಜರುಗಿದ ರಥೋತ್ಸವ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭರತ ನಾಟ್ಯವನ್ನು ಮಾಡಲಾಯಿತು. ಈ ಕಲಾವಿದರ ನೃತ್ಯ ಮೆಚ್ಚಿ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ರು ವಯಕ್ತಿಕವಾಗಿ ೧೦೦೧ ರೂ ದೇಣಿಗೆ ನೀಡಿ ಕಲೆಯನ್ನು ಪ್ರೋತ್ಸಾಹಿಸಿದರು. ಗಬ್ಬೂರಿನ ಬೂದಿ ಬಸವ ಶಿವಾಚಾರ್ಯರು, ನಿಲೋಗಲ್ ಮಠಧ ಬಾಲಯೋಗಿ ರೇಣುಕಾಶಾಂತಮಲ್ಲ ಶಿವಾಚಾರ್ಯರು, ಅಂಕಲಿಮಠಧ ಶ್ರೀಗಳು, ಬ್ರಹ್ಮಕುಮಾರಿ ಜ್ಯೋತಿ ಅಕ್ಕನವರು, ಮಾಜಿ ಶಾಸಕ ಬಸವನಗೌಡ ಬ್ಯಾಗವ್ಯಾಟ್, ಶಿವಶರಣಗೌಡ ಲಕ್ಕಂದಿನ್ನಿ, ರಾಜಾ ಆದರ್ಶನಾಯಕ, ಪರಮೇಶ ನಾಯ್ಕ್ ಮುರ್ಕಿಗುಡ, ಯಲ್ಲಪ್ಪ ದೊರೆ ಸೇರಿದಂತೆ ಇನ್ನಿತರರು ಇದರು.