ಭರತ್ ರೆಡ್ಡಿ ಪರ ಪ್ರತಾಪ್ ರೆಡ್ಡಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04:  ಬುಡಾ ಮಾಜಿ ಅಧ್ಯಕ್ಷ,  ಕಾಂಗ್ರೆಸ್‌ ಮುಖಂಡ ನಾರಾ ಪ್ರತಾಪ್ ರೆಡ್ಡಿ ಅವರು ನಗರ  ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ನಾರಾ ಭರತ್ ರೆಡ್ಡಿ ಪರವಾಗಿ ಇಲ್ಲಿನ  ತಾಳೂರ್ ರಸ್ತೆ, ರೇಣುಕಾ ನಗರ ,ಕಾಲುವೆ ಸುತ್ತಲಿನ ಪ್ರದೇಶದಲ್ಲಿ ನಿನ್ನೆ ಸಂಜೆ ಬಿರುಸಿನ ಪ್ರಚಾರವನ್ನು ತಮ್ಮ ಬೆಂಬಲಿಗರೊಂದಿಗೆ ನಡೆಸಿದರು.
ಭರತ್ ರೆಡ್ಡಿ ಅವರು ಯುವ ನಾಯಕರಾಗಿದ್ದಾರೆ. ಭ್ರಷ್ಟಾಚಾರ ಮುಕ್ತ ಬಳ್ಳಾರಿಯ ಕನಸು ಕಂಡಿದ್ದಾರೆ. ಅವರನ್ನು ಬೆಂಬಲಿಸಿ ಆಯ್ಕೆ ಮಾಡಿದರೆ ಬಳ್ಳಾರಿಯನ್ನು ಉತ್ತಮ ನಗರವನ್ನಾಗಿ ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆಂದು ಮನವಿ ಮಾಡಿದರು.