
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,3- ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಪರ 11ನೇ ವಾರ್ಡಿನ ಸಣ್ಣ ಮಾರ್ಕೆಟ್ ಪ್ರದೇಶದಲ್ಲಿ ಇಂದು ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿ ಸಂಯೋಜಕ ಅಲ್ಲಂ ಪ್ರಶಾಂತ್,
ಪ್ರಧಾನ ಕಾರ್ಯದರ್ಶಿ ಜೆ.ಎಸ್. ಆಂಜನೇಯಲು, 11ನೇ ವಾರ್ಡಿನ ಮುಖಂಡ ಟಿ.ವಿ. ಲೋಕೇಶ್ ಮೊದಲಾದವು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಭರತ್ ರೆಡ್ಡಿ ಅವರು ಯುವಕರಾಗಿದ್ದಾರೆ. ಭ್ರಷ್ಟಾಚಾರ ರಹಿತ ಬಳ್ಳಾರಿಯ ಕನಸು ಅವರದು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವದ ವ್ಯಕ್ತಿ. ಅಲ್ಲದೆ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರೆ ಪ್ರತಿಕುಟುಂಬದ ಮಹಿಳೆಯ ಖಾತೆಗೆ ಮಾಸಿಕ ಎರೆಡು ಸಾವಿರ ರೂ ಸೇರಿದಂತೆ ಐದು ಗ್ಯಾರೆಂಟಿಗಳಬಗ್ಗೆ ತಿಳಿಸಿದರು.
ಪ್ರಚಾರದಲ್ಲಿ ಬ್ರೂಸ್ಪೇಟ್ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸ್, ಡಿಸಿಸಿ ಕಾರ್ಯದರ್ಶಿ ಶೋಭಾ ಕಾಳಿಂಗ, ಮಾಜಿ ಮಹಿಳಾ ಉಪಾಧ್ಯಕ್ಷೆ ಶಶಿಕಲಾ, ಕಾರ್ಯಾಧ್ಯಕ್ಷ ವಿಷ್ಟು ಬೋಯಪಾಟಿ, ಕಾಂಗ್ರೆಸ್ ಮುಖಂಡರಾದ ಲೋಕೇಶ್, ಗುರುಸಿದ್ದ, ಮೊಹಮ್ಮದ್ ರಫೀಕ್, ಇಸ್ಮಾಯಿಲ್,ಶ್ರೀಕಾಂತ್, ಚಂದ್ರಶೇಖರ್, ಲಿಖಿತ್, ಅಲಿ, ಮೈನು, ದಾದು, ಇಮಾಮ್ ಮತ್ತು ದೀಪಕ್, ನರೇಶ್ ಮೊದಲಾದವರು ಪಾಲ್ಗೊಂಡಿದ್ದರು