ಭರತ್ ರೆಡ್ಡಿ:
ಜನ ಸಂಪರ್ಕ ಕಚೇರಿ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.31: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ  ಸ್ಪರ್ಧೆ ಮಾಡಲು ಬಯಸಿರುವ ನಾರಾ ಭರತ್ ರೆಡ್ಡಿ ಅವರು ಇಂದು ಗಾಂಧಿನಗರದಲ್ಲಿ ತಮ್ಮ‌ತಂದೆಯವರ ಕಚೇರಿ ಪಕ್ಕದಲ್ಲಿಯೇ ಜನ ಸಂಪರ್ಕ ಕಚೇರಿಯನ್ನು ಉದ್ಘಾಟನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಚುನಾವಣೆ ಹಿನ್ನಲೆಯಲ್ಲಿ ಇಲ್ಲಿಗೆ ಬರುವ ಜನರಿಗೆ ತಕ್ಷಣ ಸಂಪರ್ಕಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕಚೇರಿ ಆರಂಭಿಸಿದೆಂದರು.