ಭರತ್ ರೆಡ್ಡಿಗೆ ಮತ ನೀಡುವಂತೆಆಟೋ ಚಾಲಕರಲ್ಲಿ ಪ್ರತಾಪ್ ರೆಡ್ಡಿ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ8- ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ‌ಅವರಿಗೆ ಮತ ನೀಡಿ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ನಿಸಲಿದೆಂದು ಪಕ್ಷದ ಮುಖಂಡ ನಾರಾ ಪ್ರತಾಪ್ ರೆಡ್ಡಿ ಆಟೋ ಚಾಲಕರಿಗೆ ಮನವಿ ಮಾಡಿದರು.
ಅವರು ಇಂದು ಐಎನ್ ಟಿಯುಸಿಯಿಂದ ಬುಡಾ ಕಾಂಪ್ಲೆಕ್ಸ್ ಬಳಿ  ಬಳ್ಳಾರಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು ಭರತ್ ರೆಡ್ಡಿ ಬಗ್ಗೆ ಪ್ರಚಾರ ಮಾಡಿ ಮಾತನಾಡುತ್ತಿದ್ದರು.
ಆಟೋ ಚಾಲಕರು ಮತ್ತು ಮಾಲೀಕರು ನಮಗೆ ಆಶ್ರಯ ಮನೆ ನೀಡಬೇಕು, ಪೊಲೀಸರ ವಿನಾಕಾರಣ ಕಿರಿ ಕಿರಿ ತಪ್ಪಿಸಬೇಕು, ಆಟೋ ಖರೀದಿಗೆ ಕಡಿಮೆ ಬಡ್ಡಿಯಲ್ಲಿ ಸಾಲಬೇಕು ಮೊದಲಾದ ಬೇಡಿಕೆ ಇಟ್ಟರು.
ಇದಕ್ಕೆ ಅಭ್ಯರ್ಥಿ ಭರತ್ ರೆಡ್ಡಿ ಯುವ ನಾಯಕ, ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಆಶಕ್ತಿ ಹೊಂದಿದ್ದು. ಅವರೊಂದಿಗೆ ಆಡಳಿತ ಅನುಭವ ಹೊಂದಿರುವ ನಾನು ಸಹ ಇದ್ದೇನೆ. ಜೊತೆಗೆ ಪಕ್ಷ ಇದೆ. ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್. ಆಟೋ ಚಾಲಕರ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲ‌ ಇರಲಿದೆ. ನಿಮ್ಮ ಮತ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ ಅಲ್ಲಂ ಪ್ರಶಾಂತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ತಾಯಪ್ಪ, ಮುಖಂಡರಾದ ಕಲ್ಲುಕಂಬ ಪಂಪಾಪತಿ ಮೊದಲಾದವರು ಇದ್ದರು.