ಭರತ್ ಪರ ಗಾದೆಪ್ಪ ಭರ್ಜರಿ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.28: ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ನಾರಾ ಭಾರತ್ ರೆಡ್ಡಿ ಪರ ನಗರದ 23ನೇ ವಾರ್ಡಿನ  ಕಾರ್ಪೊರೇಟರ್ , ಪಾಲಿಕೆಯ ಸಭಾ ನಾಯಕ  ಪಿ.ಗಾದೆಪ್ಪನವರು ದುರ್ಗಮ್ಮ ದೇವಸ್ಥಾನದ ಬಳಿಯ ಮ್ಯಾಕ್ಸ್ ಬಿಲ್ಡಿಂಗ್ ಬಳಿಯಿಂದ ಕಪ್ಪಗಲ್ ರಸ್ತೆಯ 5ನೇ ಕ್ರಾಸ್ ವರೆಗೂ  ಇಂದು  ಪ್ರಚಾರ ಮಾಡಿದರು.
ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷ ವಿಷ್ಣು ಬೋಯಪಾಟಿ, 23ನೇ ವಾರ್ಡಿನ ನೂರಾರು ಜನ  ಕಾಂಗ್ರೆಸ್ ಕಾರ್ಯಕರ್ತರು  ಹಾಗೂ ಅಭಿಮಾನಿಗಳು  ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಗಾದೆಪ್ಪ‌ಅವರ ಕಚೇರಿಯಲ್ಲಿ  ಪೋಟ್ ಪಾರ್ ಕಾಂಗ್ರೆಸ್ ಎಂಬ   ಕೇಕ್ ಕಟ್ ಮಾಡಿ ಎಲ್ಲರಿಗೆ ಹಂಚಲಾಯ್ತು‌.
ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ವಿಷ್ಣು  ಹಾಗೂ ಗಾದೆಪ್ಪ ಅವರ ಸಮಕ್ಷಮದಲ್ಲಿ ಬೀಚಿನಗರ ಸೆಕೆಂಡ್ ಕ್ರಾಸಿನ ನಾಗಪ್ಪ ಯಾದವ್,  ಆಮ್ ಆದ್ಮಿ ಪಕ್ಷದಿಂದ  ಕಾಂಗ್ರೆಸ್ ಪಕ್ಷಕ್ಕೆ   ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.