ಭರತ್‌ಗೆ ಸ್ಯಾಂಟ್ರೊ ರವಿ ಜತೆ ಸಂಬಂಧವಿಲ್ಲ

ಬೆಂಗಳೂರು,ಜ.೮- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಸ್ಯಾಂಟ್ರೊ ರವಿ ಜತೆ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಾಗಲಿ, ಮುಖ್ಯಮಂತ್ರಿ ಪುತ್ರ ಭರತ್ ಬೊಮ್ಮಾಯಿರವರಿಗಾಗಲಿ ಸ್ಯಾಂಟ್ರೊ ರವಿ ಎಂಬಾತನ ಜತೆ ಯಾವುದೇ ಸಂಬಂಧವಿಲ್ಲ. ಇವೆಲ್ಲ ವಿರೋಧ ಪಕ್ಷಗಳ ಸುಳ್ಳಿನ ಕಾರ್ಖಾನೆಗಳಲ್ಲಿ ತಯಾರಾದ ಪ್ರಾಡೆಕ್ಟ್‌ಗಳು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮುಖ್ಯಮಂತ್ರಿಗಳ ಮನೆಗೆ ಅನೇಕರು ಬಂದು ಹೋಗುತ್ತಾರೆ. ಅಲ್ಲಿ ಬಂದವರು ಮುಖ್ಯಮಂತ್ರಿ ಹಾಗೂ ಕುಟುಂಬದವರ ಜತೆ ಫೋಟೊ ತೆಗೆಸಿಕೊಂಡು ಹೋಗುವುದು ಸಾಮಾನ್ಯ. ಸ್ಯಾಂಟ್ರೊ ರವಿ ಎಂಬಾತ ಕೂಡ ಅದೇ ರೀತಿ ಫೋಟೊ ತೆಗೆಸಿಕೊಂಡಿರಬಹುದು ಎಂದು ಬಿಜೆಪಿ ಹೇಳಿದೆ.