ಭರತನಾಟ್ಯ ನೃತ್ಯ ಕಾರ್ಯಕ್ರಮ

ಬೆಂಗಳೂರು, ಫೆ. ೯- ಗಿರಿನಗರದ ಶ್ರೀ ಕಲಾಗೌರಿ ನೃತ್ಯಾಲಯದ ವಾರ್ಷಿಕೊತ್ಸವದ ಅಂಗವಾಗಿ “ಶ್ರೀ ಕಲಾಗೌರಿಂ ಉಪಾಯಿಮಹೆ” ಎಂಬ ಶೀರ್ಷಿಕೆಯಡಿಯಲ್ಲಿ ನಾಳೆ ಸಂಜೆ ೪.೩೦ ಗಂಟೆಗೆ ಘನಲಿಂಗ ಶಿವಯೋಗಿ ಸಭಾಭವನ (ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ಕ್ಯಾಂಪಸ್) ಬನಶಂಕರಿ, ಇಲ್ಲಿ ಕಲಾಗೌರಿ ನೃತ್ಯಾಲಯದ ಕಲಾವಿದರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅನನ್ಯ ಕಲಾ ನಿಕೇತನದ ನಿರ್ದೇಶಕಿ, ಖ್ಯಾತ ಭರತನಾಟ್ಯ ಕಲಾವಿದೆ, ಕರ್ನಾಟಕ ಕಲಾಶ್ರೀ ಗುರು ವಿದುಷಿ ಬೃಂದಾ.ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೇಖಕಿ ಗೊರೂರು. ಆರ್. ಹಾಗೂ ಭರತನಾಟ್ಯ ಕಲಾವಿದೆ ವಿದುಷಿ ಅನನ್ಯ.ಎಂ ಭಾಗವಹಿಸಲಿದ್ದಾರೆ.