ಭರತನಾಟ್ಯವೆಂಬುದು ಆದಿಕಾಲದ ಕಲೆಯಾಗಿದೆ:ಗದ್ದನಕೇರಿ ಶ್ರೀ

ತಾಳಿಕೋಟೆ:ಎ.10:ಆಧ್ಯಾತ್ಮಿಕ ಜಾಗೃತಿಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಭಾರತಿಯ ಸಂಸ್ಕøತಿಯಲ್ಲಿ ಆದಿಕಾಲದಿಂದಲೂ ಸ್ಥಾಪಿತಗೊಂಡು ಮುನ್ನಡೆಯುತ್ತಾ ಜಾತ್ರೆ ಹಬ್ಬ ಆಚರಣೆಗಳಿಗಷ್ಟೆ ಅಲ್ಲದೇ ಪೂಜೆ ಪುರಸ್ಕಾರ ಸೀಮಿತವಾಗಿರದೇ ಸಾಂಸ್ಕøತಿಕ, ಸಾಹಿತ್ಯಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳು ಸೇರಿದಂತೆ ನಾಡಿನ ಸರ್ವತೋಮುಖ ಶ್ರೇಯೋಭಿವೃದ್ಧಿಯ ನಿಟ್ಟಿನಲ್ಲಿ ಮುನ್ನಡೆದಂತ ಕೀರ್ತಿ ತಾಳಿಕೋಟೆಯ ಶ್ರೀ ವೀರಕ್ತೆಶ್ವರ ಭರತನಾಟ್ಯ ತರಬೇತಿ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರೇ ತಪ್ಪಾಗಲಾರದೆಂದು ಗದ್ದನಕೇರಿ ಶ್ರೀ ಕಸ್ತೂರಿ ಮಠದ ಓಹಿಲಾಶ್ರಮ ಪಟ್ಟಾದೀಶರಾದ ಶ್ರೀ ಕರಬಸವೇಶ್ವರ ಶಿವಯೋಗಿ ಮಹಾಸ್ವಾಮಿಗಳು ನುಡಿದರು.

   ರವಿವಾರಂದು ಸ್ಥಳೀಯ ಶ್ರೀ ವೀರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ 4ನೇ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಪ್ರಶಸ್ತಿ ಪಧಾನ ಹಾಗೂ ಸಾಂಸ್ಕøತಿಕ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪರಿಶ್ರಮ ವ್ಯಕ್ತಿಗೆ ಭಕ್ತಿ ಮತ್ತು ಧರ್ಮವಿಲ್ಲದಿದ್ದರೆ ಮಾನವ ಜೀವನ ವ್ಯವಸ್ಥಿತವಾಗಲಾರದೆಂದು ತಿಳಿದಿದ್ದರೆ ಆತ ಪರಮಾತ್ಮನಲ್ಲಿ ಭಕ್ತಿ ಇಡುತ್ತಿದ್ದ ಶ್ರದ್ಧೆ ಭಕ್ತಿಯಿಂದ ಇರುವವರೆಗೆ ಮಠಮಾನ್ಯಗಳಲ್ಲಿ ದಯೆ ಮತ್ತು ಧರ್ಮದ ಪಾಠವನ್ನು ಹೇಳಿ ಕೊಡಲಾಗುತ್ತದೆ ಎಂದು ಹೇಳಿದ ಶ್ರೀಗಳು ತಾಳಿಕೋಟೆಯಲ್ಲಿ ಭರತನಾಟ್ಯ ಸಂಸ್ಥೆಯನ್ನು ಹುಟ್ಟು ಹಾಕಿದ ವಿನೋದ ಕುಮಾರ ಚಿಕಮಠ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದ ಶ್ರೀಗಳು ಈ ಸಂಸ್ಥೆಯಲ್ಲಿ ಕುಮಾರಿ ಪೃಥ್ವಿ ಹೆಗಡೆ ಎಂಬುವವಳು ತರಬೇತಿ ಪಡೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಸಾಮಾನ್ಯವಲ್ಲ ಅಂತಹ ಬಾಲಕಿಯರಿಗೆ ತರಬೇತಿ ನೀಡುವುದರೊಂದಿಗೆ ಭರತನಾಟ್ಯ ಕಲೆ ಎಂಬುದನ್ನು ಬೆಳೆಸಿ ಉಳಿಸುವ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿ ಎಂದರಲ್ಲದೇ ಈ ನಾಟ್ಯ ಕಲೆ ಪುರಾತನ ಕಾಲದಿಂದಬಂದಂತಹದ್ದಾಗಿದ್ದು ಜಗತ್À್ತ ಪ್ರಸಿದ್ದತೆ ಪಡೆದಿದೆ ಎಂದರು.
  ಇನ್ನೋರ್ವ ಇದೇ ಸಂಸ್ಥೆಯ ವತಿಯಿಂದ 'ಸಾಹಿತ್ಯ ಸಿರಿ' ಪ್ರಶಸ್ತಿ ಪಡೆದ ಶಿಕ್ಷಕಿ ಶ್ರೀಮತಿ ಸುಮಂಗಲಾ ಕೋಳೂರ ಅವರು ಮಾತನಾಡಿ ಇಂದು ನನಗೆ ಭರತನಾಟ್ಯ ತರಬೇತಿ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪಡೆದಿರುವುದು ಸಂತಸದ ಸಂಗತಿಯಾಗಿದೆ ಇದರಿಂದ ನಾನು ಇನ್ನಷ್ಟು ಸಾಧನೆ ಮಾಡಬೇಕೆಂಬುದನ್ನು ನಿರ್ಧರಿಸಿದಂತಾಗಿದೆ ಕುಮಾರಿ ಪೃಥ್ವಿ ಹೆಗಡೆ ಈ ಸಂಸ್ಥೆಯಲ್ಲಿ ಕಲಿತು ಬೆಳೆದು ರಾಷ್ಟ್ರಮಟ್ಟದಲ್ಲಿ ಮಿಂಚಿರುವುದು ಸಂತಸದಾಯಕವಾಗಿದೆ ಎಂದು ಚಿಕ್ಕವಯಸ್ಸಿನಲ್ಲಿಯೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡುತ್ತ ಮುನ್ನುಗ್ಗಿದ ವಿದ್ಯಾರ್ಥಿನೀಯರ ಹೆಸರುಗಳನ್ನು ಪ್ರಸ್ಥಾಪಿಸಿದ ಅವರು ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ನಮ್ಮ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕೆಂದ ಹೇಳಿದ ಶ್ರಿಮತಿ ಸುಮಂಗಲಾ ಅವರು ಈಗಾಗಲೇ ತಾವು ಹೊರತರಲು ಸಿದ್ಧವಾಗಿದ್ದ ಕೇಲವು ಕೃತಿಗಳ ಹೆಸರುಗಳನ್ನು ಪ್ರಸ್ಥಾಪಿಸಿ ಭಾವಗೀತೆ ಭಕ್ತಿ ಗೀತೆ ಬರೆದ ಕೃತಿಗಳನ್ನು ಸಹ ಮುಂದಿನ ವರ್ಷದಲ್ಲಿ ಹೊರ ತರುವುದಾಗಿ ಹೇಳಿದರು.
  ಇನ್ನೋರ್ವ ಇದೇ ಸಂಸ್ಥೆಯ ವತಿಯಿಂದ 'ಸಮಾಜ ಸಿರಿ' ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆಯವರು ಮಾತನಾಡಿ ಭರತನಾಟ್ಯ ವೆಂಬುದು ದೇವಾದಿ ದೇವತೆಗಳ ಕಾಲದಿಂದಲೂ ಬಂದಂತಾಗಿದೆ. ತಾಳಿಕೋಟೆಯ ಶ್ರೀ ಖಾಸ್ಗತ ಮಹಾ ಶಿವಯೋಗಿಗಳು ಸಹ ಭರತನಾಟ್ಯ ಕಲೆ ಎಂಬುದು ಅವರಲ್ಲಿತ್ತು ಅವರು ಕೂಡ ನಾಟ್ಯವನ್ನು ಮಾಡಿ ಭಕ್ತ ಸಮೂಹಕ್ಕೆ ತೋರಿಸುವ ಕಾರ್ಯ ಮಾಡುತ್ತಿದ್ದರೆಂಬುದು ಅವರ ಇತಿಹಾಸದಿಂದ ಗೋತ್ತಾಗುತ್ತದೆ. ಆ ಕಲೆಯನ್ನು ಮುಂದುವರಿಸಿಕೊಂಡು ಸಾಗಿದ ಶ್ರೀ ಸಂಗಯ್ಯ ವೀರÀಕ್ತಮಠ ಹಾಗೂ ಭರತನಾಟ್ಯ ತರಬೇತಿ ಸಂಸ್ಥೆಯ ಸಂಸ್ಥಾಪಕ ವಿನೋದಕುಮಾರ ಚಿಕ್ಕಮಠ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ ಘೋರ್ಪಡೆಯವರು ವಿನೋದಕುಮಾರ ಚಿಕ್ಕಮಠ ಅವರ ಸಂಸ್ಥೆಯಲ್ಲಿ ಪರಣಿತತೆಯನ್ನು ಪಡೆದ ಕುಮಾರಿ ಪೃಥ್ವಿ ಹೆಗಡೆ ತಾಳಿಕೋಟೆಗೆ ಕೀರ್ತಿತಂದಿದ್ದಾರೆ ತಾಳಿಕೋಟೆ ಪಟ್ಟಣ ಆಧ್ಯಾತ್ಮಿಕ ಕೇತ್ರದಲ್ಲಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿಯುತ್ತಾ ಯಾವುದರಲ್ಲಿಯೂ ಕಡಿಮೆ ಇಲ್ಲವೆಂಬಂತೆ ಒಳ್ಳೆಯ ಸೇವಾ ಕಾರ್ಯದಲ್ಲಿ ಈ ಊರಿನ ಜನತೆ ಮುಂದುವರೆದಿರುವುದು ಸಂತಸದ ಸಂಗತಿಯಾಗಿದೆ ಎಂದರು.
    ಇನ್ನೋರ್ವ 'ವಾದನ ಸಿರಿ' ಪ್ರಶಸ್ತಿ ಪಡೆದ ಈಶ್ವರಪ್ಪ ಬಡಿಗೇರ ಅವರು ತಮ್ಮ ವಾದನ ಕಲೆಯಲ್ಲಿ ಸಾಗಿ ಬಂದಿದ್ದರ ಕುರಿತು ಹಾಗೂ ತಮಗೆ ದೊರೆತ ಹಾಗೂ ನೀಡಿದ ಪ್ರಶಸ್ತಿಗಳ ಕುರಿತು ವಿವರಿಸಿದರು.
    ಸಾನಿಧ್ಯ ವಹಿಸಿದ ತೊರವಿಯ ಶ್ರೀ ಪ.ಪೂ.ಶ್ರೀ ಅಭಿನವ ಮುರುಘೇಂದ್ರ ದೇವರು ಹಿರೇಮಠ ಅವರು ಮಾತನಾಡಿ ತಾಳಿಕೋಟೆ ಪಟ್ಟಣ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಸಿದ್ದತೆ ಪಡೆದಿದೆ ಇದರಿಂದ ಸೂಕ್ಷೇತ್ರವಾಗಿ ಪರಿಣಮಿಸಿದೆ. ಅಂತಹ ಸೂಕ್ಷೇತ್ರದಲ್ಲಿ ಭರತನಾಟ್ಯ ಕಲೆಯನ್ನು ಅಳವಡಿಸಿಕೊಳ್ಳಲು ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯಕ್ಕೆ ಮುಂದಾಗಿರುವ ಸಂಸ್ಥೆಯ ಅಧ್ಯಕ್ಷ ವಿನೋದ ಕುಮಾರ ಅವರ ಹಾಗೂ ಅವರ ಸಂಘಟಿಕರ ಸೇವಾ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಸಂಸ್ಥೆಯ ಬೆಳವಣಿಗೆಗೆ ಶುಭ ಕೋರಿದರು.
    ಸಮಾಜಸೇವಕರಾದ ವಿಜಯಸಿಂಗ ಹಜೇರಿ ಅವರು ಸಂಸ್ಥೆಯ ಬೆಳವಣಿಗೆ ಹಾಗೂ ಮೆಲ್ಮಟ್ಟಕ್ಕೇತ್ತುವ ಕಾರ್ಯ ಸಂಘಟಿಕರು ಮಾಡಲು ಮುಂದಾಗಿದ್ದಾರೆ ಅದಕ್ಕೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಾವು ಶ್ರಮಿಸುತ್ತೇವೆಂದರು.
     ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಕೆಂಭಾವಿಯ ಗವಾಯಿ ಬಸವರಾಜ ಬಂಟನೂರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಇದೇ ಸಮಯದಲ್ಲಿ ರಾಷ್ಟ್ರಮಟ್ಟದ ಭರತನಾಟ್ಯ ಕಲಾವಿದೆ ಕುಮಾರಿ ಪೃಥ್ವಿ ಹೆಗಡೆ ಇವರಿಗೆ ಸಂಸ್ಥೆಯ ವಾರ್ಷೀಕೊತ್ಸವ ಅಂಗವಾಗಿ ಸವಿನೆನಪಿನ ಕಾಣಿಕೆ ನೀಡಿ ಶ್ರೀಗಳು ಗೌರವಿಸಲಾಯಿತಲ್ಲದೇ ಅಥಿತಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
   ವೇಧಿಕೆಯ ಮೇಲೆ ಗದ್ದಕೇರಿ ಶ್ರೀ ಕಸ್ತೂರಿಮಠ ಓಹಿಲಾಶ್ರಮದ ಬಾಲ ಶಿವಯೋಗಿ, ಸಂಸ್ಥೆಯ ಸಂಸ್ಥಾಪಕ ವಿನೋದಕುಮಾರ ಚಿಕ್ಕಮಠ, ಕಾಆರ್ಯದರ್ಶಿ ಮಂಜುನಾಥ ಹೆಗಡೆ, ಗಣ್ಯರಾದ ಬಸವರಾಜ ಕುಂಬಾರ, ಪ್ರದೀಪಸಿಂಗ ವಿಜಾಪೂರ, ವಿಕ್ರಮ ಅಗರವಾಲ, ಪ್ರಕಾಶ ಸಜ್ಜನ, ಸಂಬಾಜಿ ವಾಡ್ಕರ, ಗೋವಿಂದಸಿಂಗ ಮೂಲಿನಮನಿ, ಮಲ್ಲನಗೌಡ ರೆಬಿನಾಳ ಹಾಗೂ ಸಂಸ್ಥೆಯ ಕಾರ್ಯದರ್ಶಿ, ಶಿಕ್ಷಕರಾದ ಎಸ್.ಎಸ್.ಗಡೇದ ಹಾಗೂ ಶ್ರೀ ಸಾಯಿಬಾಬಾ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಸದಸ್ಯರು, ಗುರುರಾಜ ಬಡಿಗೇರ, ಸಾಯಿಮೆಲೋಡಿ ಆರ್ಕೆಸ್ಟ್ರಾದ ಸಂಘಟಿಕರು ಕಾಶೀನಾಥ ಕಾರಗನೂರ ಕುಮಾರಿ ಭಾಗ್ಯ ಇಲಕಲ, ಮೊದಲಾದವರು ಉಪಸ್ಥಿತರಿದ್ದು ತಮ್ಮ ಕಲೆಯನ್ನು ಬಿತ್ತರಿಸಿದರು.
  ಡಾ.ಸೋಮಶೇಕರಯ್ಯ ಹಿರೇಮಠ ಸ್ವಾಗಿತಿಸಿದರು. ಕುಮಾರಿ ಶ್ವೆತಾ ಎರಗಲ್ ನಿರೂಪಿಸಿ ವಂದಿಸಿದರು.
  ನಂತರ ಮನರಂಜನಾ ಕಾರ್ಯಕ್ರಮಗಳು ಸಂಸ್ಥೆಯ ವಿದ್ಯಾರ್ಥೀನಿಯರಿಂದ ಜರುಗಿದವು.