ಭರತನಾಟ್ಯದಲ್ಲಿ ಇಂದ್ರಾಸಿಂಗ್ ಪ್ರಥಮ

ತಾಳಿಕೋಟೆ:ಏ.23: ಇತ್ತೀಚಗೆ ಬ.ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜರುಗಿದ ಶ್ರೀ ರುದ್ರಸ್ವಾಮಿ ಜಾತ್ರಾ ಮಹೋತ್ಸವದ ಸಂದರ್ಬದಲ್ಲಿ ಉದ್ಘಾಟನೆಗೊಂಡ ಶ್ರೀ ರುದ್ರಸ್ವಾಮಿಜಿ ಯುಥ್ ಪೌಂಡೇಶನ್ ಕಾರ್ಯಕ್ರಮದಲ್ಲಿ ನಡೆದ ಗಾಯನ ಹಾಗೂ ಬರತನಾಟ್ಯ ಸ್ಪರ್ದೆಯಲ್ಲಿ ಗ್ರ್ಯಾಂಡಪಿ ನಾಲೆಯಲ್ಲಿ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಬರತನಾಟ್ಯ ಸಂಸ್ಥೆಯಲ್ಲಿ ತರಬೇತಿ ಪಡೆದ ಕುಮಾರಿ ಇಂದ್ರಾಸಿಂಗ್ ಹಜೇರಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಬಹುಮಾನ ಪಡೆದಿದ್ದಾಳೆ ಇವಳೊಂದಿಗೆ ನಾಟ್ಯ ಪ್ರದರ್ಶಿಸಿದ ಕುಮಾರಿ ಅಚಿಜಲಿ ವಿ ಹಜೇರಿ ಹಾಗೂ ಕುಮಾರಿ ವೈಷ್ಣವಿ ಬ ದೊಡಮನಿ ಇವರು ಟಾಫ್ 5 ಪೈನಾಲಿಸ್ಟಗಳಾಗಿ ಆಯ್ಕೆಯಾಗ ಪ್ರಶಸ್ತಿ ಹಾಗೂ ಬಹುಮಾನ ಪಡೆದಿದ್ದಾರೆ.
ಇವರಿಗೆ ತರಬೇತಿ ನೀಡಿದ ಶ್ರೀ ಖಾಸ್ಗತೇಶ್ವರ ಬರತ ನಾಟ್ಯ ಸಂಸ್ಥೆಯ ಲಿಂ.ಸಂಗಯ್ಯ ವಿರಕ್ತಮಠ ಅವರ ಶಿಷ್ಯ ಶಿಕ್ಷಕಿಯಾದ ಮನಿಷಾ ಮಹಿಂದ್ರಕರ ಅವರು ತರಬೇತಿ ನೀಡುತ್ತಾ ಸಾಗಿದ್ದಾರೆ.