ಭರಚುಕ್ಕಿ ನೋಡಲು ಬಂದವರಿಗೆ ಭಸ್ಕಿ ಹೊಡೆಸಿದ ಪಿಎಸ್‍ಐ

ಚಾಮರಾಜನಗರ, ಜು.19:- ಕಾವೇರಿ ಹೊರಹರಿವು ಹೆಚ್ಚಾಗುತ್ತಿದ್ದಂತೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿಬರ್ಂಧ ಹೇರಲಾಗಿದೆ.
ಈಗಾಗಲೇ ರಾಜ್ಯದ ಅನೇಕ ಕಡೆ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿ ಅನೇಕರು ನೀರಿನಲ್ಲಿ ಹುಚ್ಚಾಟ ನಡೆಸಿ ನೀರು ಪಾಲಾಗಿರುವುದನ್ನು ಮನಗಂಡು ಭರಚುಕ್ಕಿಯಲ್ಲಿಯೂ ಸಹ ಪ್ರವಾಸಿಗರಿಗೆ ಮುನ್ನೆಚ್ಚರಿಕೆಯಾಗಿ ನಿರ್ಬಂಧ ಹೇರಲಾಗಿತ್ತು.
ಆದರೆನಿರ್ಬಂಧ ಹೇರಿದ್ದರೂ ಸಹ ಕಾವೇರಿ ರುದ್ರ ರಮಣೀಯತೆ ಕಾಣಲು ಕಳ್ಳದಾರಿ ಹಿಡಿದು ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಅನೇಕರು ಭರಚುಕ್ಕಿಗೆ ಆಗಮಿಸಿ ಸೆಲ್ಫಿ ಹುಚ್ಚಾಟದಲ್ಲಿ ತೊಡಗಿದ್ದವರಿಗೆ ಕೊಳ್ಳೇಗಾಲ ಗ್ರಾಮಾಂತರ ಪಿಎಸ್‍ಐ ಮಂಜುನಾಥ್ ಕ್ಲಾಸ್ ತೆಗೆದುಕೊಂಡು 30ಕ್ಕೂ ಹೆಚ್ಚು ಮಂದಿಗೆ ಬುದ್ಧಿವಾದ ಹೇಳಿ ವಾಪಾಸ್ ಕಳುಹಿಸಿದ್ದಾರೆ.
ಇನ್ನು, ಪುಂಡರಂತೆ ಕಂಡ 7-8 ಮಂದಿಗೆ ಭಸ್ಕಿ ಹೊಡೆಸಿ ಕಾನೂನು ಉಲ್ಲಂಘಿಸಿದಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭರಚುಕ್ಕಿಯಲ್ಲಿ ಸೆಲ್ಫಿ ತೆಗೆಯಲು ಬಂದವರು ಭಸ್ಕಿ ಹೊಡೆದು ವಾಪಸ್ ಆಗಿದ್ದಾರೆ.