ಭಯ ಮುಕ್ತರಾಗಿ ಧೈರ್ಯದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಿ

ಆಳಂದ :ಮಾ.17:ಪರೀಕ್ಷೆ ಸಮಯದಲ್ಲಿ ಯಾವುದೇ ದುಗುಡಕ್ಕೆ ಒಳಗಾಗದೆ ವರ್ಷವಿಡಿ ಓದಿದ ವಿಷಯಗಳ ಮನನ ಮಾಡಿಕೊಂಡಿದ್ದನ್ನೆ ಭಯ ಮುಕ್ತರಾಗಿ ಧೈರ್ಯದಿಂದ 10 ನೇ ವಾರ್ಷಿಕ ಪರೀಕ್ಷೆ ಎದುರಿಸಲು ಸನ್ನದ್ಧರಾಗಿ ಎಂದು ಸಂಸ್ಥೆ ಆಡಳಿತಾಧಿಕಾರಿ ಮಹಾದೇವಪ್ಪ ಮಾಲಿ ಪಾಟೀಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಟ್ಟಣದ ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರೌಢಶಾಲೆ, ಅಕ್ಕ ಮಹಾದೇವಿ ಕನ್ಯಾ ಪ್ರೌಢಶಾಲೆಯ 10 ನೇ ತರಗತಿಗಳ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನ ಎಂದರೆ ಬಂಗಾರವಿದ್ದಂತೆ ಅದನ್ನು ಹಾಳು ಮಾಡಿಕೊಳ್ಳದೆ ಗುರಿ ಮುಟ್ಟುವತನಕ ಶ್ರಮಿಸಿ ಬದುಕು ರೂಪಿಸಿಕೊಳ್ಳಿ ಎಂದರು.

ಶಾಲೆಯ ಮುಖ್ಯಗುರು ಎಲ್.ಎಸ್.ಬೀದಿ ಅಧ್ಯಕ್ಷತೆವಹಿಸಿ ಮಾತನಾಡಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಯಾವುದೇ ತಪ್ಪು ಉತ್ತರಕ್ಕೆ ಆಸ್ಪದ ಮಾಡಿಕೊಳ್ಳದೆ ಮೊದಲು ಪ್ರಶ್ನೆ ಓದಿ ಉತ್ತರ ಖಾತ್ರಿ ಮಾಡಿಕೊಂಡು ಬರೆಯುವಂತೆ ಮನವರಿಕೆ ಮಾಡಿಕೊಟ್ಟರು. ಧುತ್ತರಗಾಂವ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಮರೇಪ್ಪ ಬಡಿಗೇರ , ಡಾ.ಆರ್‍ಎಂಎಲ್ ಪಪೂ ಕಾಲೇಜಿನ ಉಪನ್ಯಾಸಕ ಶಿವಲಿಂಗಪ್ಪ ಮಂಟಗಿ, ವಿವೇಕವರ್ಧಿನಿ ಪಬ್ಲಿಕ ಶಾಲೆಯ ಪ್ರಾಚಾರ್ಯ ಶಿವಕುಮಾರ ದಾನಾಯಿ, ಮುಖ್ಯಗುರು ಕಲ್ಲಪ್ಪ ಮಂಠಾಳೆ, ಶಿವಪುತ್ರಪ್ಪ ಅಲ್ದಿ, ನಿವೃತ್ತ ಮುಖ್ಯಗುರು ಜೈನೋದ್ದಿನ ಮುಜಾವರ ಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಬಸವರಾಜ ಕಡಗಂಚಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ವರ್ಷಾ ನಾಗಯ್ಯ ಹಿರೇಮಠ, ಶಿಕ್ಷಕ ರಾಜಕುಮಾರ ಚಲವಾದಿ, ರಾಜಕುಮಾರ ಪವಾರ, ಬಸವರಾಜ ಚೌಧರಿ, ಸತೀಶ ಕೋಗನೂರೆ, ಶ್ರೀಶೈಲ್ ಬಿರಾದಾರ, ಡಿ.ಎಂ.ಪಾಟೀಲ್, ಪ್ರಮೋದ ಜಿಡ್ಡೆ, ತರಂಗಿಣಿ ಪಾಟೀಲ್ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳಿದ್ದರು.