ಭಯ ಮತ್ತು ಅಜ್ಞಾನದಲ್ಲಿರುವವರು ಮೂಢ ನಂಬಿಕೆಗೆ ಬಲಿ

ಭಾಲ್ಕಿ:ಮಾ.15: 59ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ಸುಗಂಧಭಾಯಿ ಗೋವಿಂದ ಹಡಪದ ಚನ್ನಬಸವ ನಿಲಯ ಹಿರೇಮಠಗಲ್ಲಿ ಹಳೇ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ವಹಿಸಿದ್ದರು. ಪೂಜ್ಯಶ್ರೀ ಗುರುಬಸವ ಪಟ್ಟದ್ದೇವರು
ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಸಮ್ಮುಖದಲ್ಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.
ನಂಬಿಕೆ ದೊಡ್ಡ ಪರ್ವತದಂತೆ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಈ ಮೂಡನಂಬಿಕೆ ಎಲ್ಲವನ್ನೂ ನಾಶಪಡಿಸುತ್ತಿದೆ. ಬಸವಣ್ಣ ನವರು ಹೇಳಿದಂತೆ ಮೂಢನಂಬಿಕೆ ವಿರೋಧಿಸಿ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೆಲಸವಾಗಬೇಕು, ದಾಸೋಹವನ್ನು ಮಾಡಿ, ಗುಡಿ ಗುಂಡರಗಳಲ್ಲಿ ದೇವರಿಲ್ಲ ದೇಹವೇ ದೇವಾಲಯ ಆತ್ಮವೇ ಪರಮಾತ್ಮ ದೇಹ ಪರಿಶುದ್ಧವಾಗಿದ್ದರೆ ಅಲ್ಲಿ ದೇವರು ಇರುವನು. ವಿಶ್ವ ಸಂಸ್ಥೆ ಕೂಡ ಬಸವಣ್ಣ ನವರ ವಿಚಾರಗಳನ್ನು ಒಪ್ಪಿದೆ. ಸಕಲ ಜೀವಾತ್ಮರಿಗೆ ಲೇಸನೇ ಬಯಸಬೇಕು ಬರಿ ಮಾನವ ಧರ್ಮ ಒಂದೇ ಅಲ್ಲ. ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರು. ಎಲ್ಲಿ ದಯೆ ಕರುಣೆ ಸೌಹಾರ್ದತೆ ಇರುವುದು ಅಲ್ಲಿ ದೇವರು ಇರುವನು ಅದುವೇ ನಿಜವಾದ ಧರ್ಮ ಎಂದು ಹೇಳಿದರು. ವಿಜಯಲಕ್ಷ್ಮಿ ಸಂತೋಷ ಹಡಪದ ಗುರು ಬಸವ ಪೂಜೆ ನೆರವೇರಿಸಿದರು. ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂತೋಷ್ ಹಡಪದ ಸ್ವಾಗತಿಸಿದರು. ಶ್ರೀದೇವಿ ಸ್ವಾಮಿ ಭಕ್ತಿ ಗೀತೆ ಹಾಡಿದರು. ಶ್ರೀ ಶಂಭುಲಿಂಗ ಕಾಮಣ್ಣ ಜಿಲ್ಲಾಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ಭಾಲ್ಕಿ ಮೂಡನಂಬಿಕೆ ಅಳಿಸಲು ಶರಣರ ಪ್ರಯತ್ನದ ಪಾತ್ರ ಎನ್ನುವ ವಿಷಯದ ಕುರಿತು ಅನುಭಾವ ಹೇಳಿದರು.
ಭಯ ಮತ್ತು ಅಜ್ಞಾನ ದಲ್ಲಿರುವವರು ಮೂಢ ನಂಬಿಕೆಗೆ ಬಲಿಯಾಗುತ್ತಾರೆ. ಇಷ್ಟೊಂದು ತಾಂತ್ರಿಕತೆಯಲ್ಲಿ ಮುಂದುವರೆದರು ಈ ಮೂಢನಂಬಿಕೆ ಹೋಗುತ್ತಿಲ್ಲ ಇದಕ್ಕೆ ಕಾರಣ ಭಯ ಎಂದು ಹೇಳಿದರು. ಬಸವ ಪ್ರಾರ್ಥನೆಯನ್ನು ಇಂದುಮತಿ ಗುಂಡಪ್ಪ ಸಂಗಮಕರ ಭಾಲ್ಕಿ ನೆರವೇರಿಸಿದರು. ವೇದಿಕೆಯ ಮೇಲೆ ವಿರೂಪಾಕ್ಷ ಸ್ವಾಮಿಗಳು, ಗೋವಿಂದ ಹಡಪದ, ಬಸವರಾಜ್ ಮರೆ, ಗುಂಡಪ್ಪ ಸಂಗಮಕರ್ , ಶಾಲಿವಾನ ವಳಸಂಗೆ ದಾಡಗಿ ಉಪಸ್ಥಿತರಿದ್ದರು. ಅನೇಕ ಶರಣ ಶರಣೆಯರು ಭಾಗವಹಿಸಿದ್ದರು. ಶ್ರೀ ನಾಗಶೆಟ್ಟಿ ಚೋಳ ಡಾಡಗಿ ಭಾಲ್ಕಿ ನಿರೂಪಿಸಿದರು. ವೇದಿಕೆಯ ಮೇಲಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಧನರಾಜ ವಾಲೆ, ಸೂರ್ಯಕಾಂತ್ ಮದ್ನೂರ್, ವೈಜಿನಾಥ ಕುಂಬಾರ, ಜಯಪ್ರಕಾಶ ಕುಂಬಾರ, ಮಲ್ಲಿಕಾರ್ಜುನ ಪವಾಡಷೆಟ್ಟೆ, ವೀರಣ್ಣ ಕುಂಬಾರ, ಶಿವಮೂರ್ತಿ ಪಟನೆ, ಪ್ರಭಾವತಿ ಮರೆ, ರೇಖಾ ಪಾಟೀಲ್, ಪ್ರೇಮಲ ತೊಂಡಾರೆ, ಬಂಡೆಪ್ಪ ಪನಷೆಟ್ಟೆ, ಸವಿತಾ ಕಲ್ಯಾಣೆ, ನಾಗಮ್ಮ ಕೋಡಗೆ, ಸಂಜೀವಕುಮಾರ ಹಡಪದ, ಬಂಡೆಪ್ಪ ಶರಣರು, ನಿರ್ಮಲಾ ತೆಂಕಾಳೆ, ಪ್ರಭಾಕರ ಬೇಳಕೇರೆ,ರವೀಂದ್ರ ಮಠದ, ಶರಣಪ್ಪಾ ಬಿರಾದಾರ, ಕೃಷ್ಣ ದೊಂಡಿಬಾ, ಓಂಕಾರ ಶರಣರು ಹಾಗೂ ಇತರರು ಉಪಸ್ಥಿತರಿದ್ದರು. ಮಂಗಲ ಹಾಗೂ ಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.