ಭಯ, ಭೀತಿ, ಆಮಿಷ ಇಲ್ಲದೆ  ಪ್ರಾಮಾಣಿಕವಾಗಿ ಮತದಾನ ಮಾಡಲು ಸಲಹೆ

ದಾವಣಗೆರೆ. ಏ.೨೮: ಮೇ ಹತ್ತರಂದು ನಡೆಯುವ ವಿಧಾನಸಭೆಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಅಲ್ಲದೆ ಯಾವುದೇ ಭಯ ಭೀತಿ ಆಮಿಷ ಇಲ್ಲದೆ  ಪ್ರಾಮಾಣಿಕವಾಗಿ ನೈತಿಕ ಮತದಾನ ಮಾಡುವಂತೆ ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿ ಶಿವಾನಂದ ಕಾಪಾಶಿ ಕರೆ ನೀಡಿದರು.ಜಿಲ್ಲಾ ನ್ಯಾಯಾಂಗ ಇಲಾಖೆ ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಾವಣಗೆರೆ ಹಾಗೂ ಜಿಲ್ಲಾ ವಕೀಲರ ಸಂಘ ದಾವಣಗೆರೆ ಇವರ ಸಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಮತದಾರರ ಜಾಗೃತಿ ಸಂಘ ಹಾಗೂ ಮತದಾನ ಜಾಗೃತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮತದಾನದ ದಿನದಂದು ಯಾರು ಸಾರ್ವಜನಿಕರು ವಿನಾಕಾರಣ ರಜೆಗಳನ್ನು ಹಾಕದೆ ನಿಮ್ಮ ನಿಮ್ಮ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ತರಬೇಕಾಗಿದೆ. ಈ ಹಿಂದೆ ಚುನಾವಣೆ ಎಂದರೆ ಕೇವಲ ಜಿಲ್ಲಾಡಳಿತ, ಚುನಾವಣಾ ಆಯೋಗ ಮಾತ್ರ ಕೆಲಸ ಮಾಡಬೇಕಾಗಿತ್ತು, ಆದರೆ ಈಗ ವಿವಿಧ ಸಂಘ-ಸಂಸ್ಥೆಗಳು ಮುಂದೆ ಬಂದಿವೆ. ಅದರಲ್ಲೂ ನ್ಯಾಯಾಂಗ ಇಲಾಖೆ ಇಂತಹ ಮತದಾನ ಜಾಗೃತಿ ಕಾರ್ಯಕ್ಕೆ ಮುಂದಾಗಿರುವುದು ನಮಗೆ ಬಲತಂದಿದೆ ಎಂದರು.ವೇದಿಕೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ, ಜಿಎ ವಿಜಯಾನಂದ್, ನಿವೇದಿತಾ ನಾಮದೇವ ಕಾಗದಕಾರ, ಜಿಕೆ ಬಸವರಾಜ್ ಬಸವರಾಜ್ ಎಸ್.‌ಇತರರು ಇದ್ದರು