ಭಯ ಭೀತರಾಗದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ: ಡಾ.ಜಿ.ಎ.ಪಾಟೀಲ

ಆಲಮೇಲ:ಮಾ.14:ಕೋವಿಡ್ ಲಸಿಕೆಯಿಂದ ಹಾಕಿಸಿಕೊಳ್ಳುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ, ಭಯಭೀತರಾಗದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದು ಪಟ್ಟಣದ ಹಿರಿಯ ಖ್ಯಾತ ವೈದ್ಯ ಡಾ| ಜಿ.ಎ. ಪಾಟೀಲ ಹೇಳಿದರು. ಅವರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡನೇ ಹಂತದ ಲಸಿಕೆ ಹಾಕಿಸಿಕೊಂಡ ಸುದ್ದಿಗಾರರ ಜೊತೆ ಮಾತನಾಡಿ ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆ ಇಲ್ಲ, ಅದಕ್ಕೆ ನಾವು 75 ವರ್ಷದ ವಯಸ್ಸಿನ ವೈದ್ಯನಾದ ನಾನು ಲಸಿಕೆ ಪಡೆದುಕೊಂಡಿದ್ದೇನೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ| ಪ್ರಶಾಂತ ದೊಮಗೊಂಡ ಸೇರಿದಂತೆ ಸಿಬ್ಬಂದಿಗಳು ಕೋವಿಡ್ ಲಸಿಕೆ ನೀಡಲು ಸೂಕ್ತ ವ್ಯವಸ್ಥೆಯನ್ನು ಮಾಡಿದ್ದಾರೆ. ಕೋವಿಡ್ ಲಸಿಕೆ ಬಗ್ಗೆ ಯಾವುದೇ ಗಾಳಿ ಸುದ್ದಿಗೆ ಕಿವಿಗೂಡದೇ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಪಡೆದುಕೊಳ್ಳಿ 40 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ನೀಡಲಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕೊರೊನಾ ವೈರಸ್ ಎರಡನೇಯ ಅಲೆಯ ಭೀತಿ ಮತ್ತೆ ಹೆಚ್ಚುತ್ತಿದ್ದು ಎಲ್ಲರೂ ಕಡ್ಡಾಯವಾಗಿ ಮಾಸ್ಕ, ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷಾ ಕ್ರಮಗಳು ಅಳವಡಿಸಿಕೊಂಡು ಸುರಕ್ಷತೆಯಿಂದ ಜೀವನ ನಡೆಸಬೇಕು. ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ಸರ್ಕಾರ ಕೋವಿಡ್ ಲಸಿಕೆ ಉಚಿತವಾಗಿ ನೀಡಿದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದು ವಿನಂತಿಸಿದರು. ನೇತ್ರಧಿಕಾರಿ ಡಾ.ಸುರೇಶ ಮಹಿಂದ್ರಕರ,ಸಂದೇಶ ಜೋಗೂರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.