ಭಯೋತ್ಪಾದಕ ದಾಳಿ; 12 ಮಂದಿ ಮೃತ್ಯು

ಪಾಲ್ಮಾ, ಮಾ.೨೯- ಉತ್ತರ ಮೋಝಂಬಿಕೆಯ ಪಾಲ್ಮಾದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಗುಂಪು ನಡೆಸಿದ ಪೈಶಾಚಿಕ ಕೃತ್ಯದಲ್ಲಿ ೧೨ಕ್ಕೂ ಮಂದಿ ನಾಗರಿಕರು ಮೃತಪಟ್ಟ ಘಟನೆ ನಡೆದಿದೆ. ಮೋಝಂಬಿಕೆಯ ರಕ್ಷಣಾ ಸಚಿವಾಲಯದ ವಕ್ತಾರರು ಈ ಬಗ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಬುಧವಾರದಿಂದ ಈ ಪ್ರದೇಶದಲ್ಲಿ ಭಯೋತ್ಪಾದಕರು ದಾಳಿ ನಡೆಸುತ್ತಲೇ ಇದ್ದು, ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವು ಹಲವು ನಾಗರಿಕರು ಹೊಟೇಲ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ವೇಳೆ ನಾಗರಿಕರನ್ನು ಅಲ್ಲಿಂದ ರಕ್ಷಿಸುವ ಕಾರ್ಯದ ವೇಳೆ ಹಲವು ನಾಗರಿಕರು ಭಯೋತ್ಪಾದಕರ ಗುಂಡಿನ ದಾಳಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ೧೦೦ಕ್ಕೂ ನಾಗರಿಕರನ್ನು ಸ್ಥಳದಿಂದ ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಇನ್ನೂ ಮುಂದುವರೆದಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಕಳೆದ ಬುಧವಾರ ಗ್ಯಾಸ್ ಸಂಪತ್ ಭರಿತ ಪ್ರದೇಶವಾದ ಕ್ಯಾಬೋ ಡೆಲ್‌ಕಾಡೋಗೆ ನುಗ್ಗಿದ ಭಯೋತ್ಪಾದಕರು ಪೈಶಾಚಿಕ ಕೃತ್ಯ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹಲವು ನಾಗರಿಕರು ಇಲ್ಲಿನ ಅಮ್ರುಲಾ ಹೊಟೇಲ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದರು.