ಭಯದಿಂದ ಇಂಧನ ದರ ಇಳಿಕೆ : ಪ್ರಿಯಾಂಕ

ನವದೆಹಲಿ, ನ. ೪- ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ವ್ಯಂಗ್ಯವಾಡಿದ್ದಾರೆ.
ಕೇಂದ್ರದ ವಿರುದ್ಧ ಜನ ಸಿಡಿದೇಳುವ ಭಯದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. “ಇದು ಭಯದಿಂದ ನಿರ್ಧಾರವಾಗಿದೆ, ಹೃದಯದಿಂದ ಅಲ್ಲ. ಮುಂಬರುವ ಚುನಾವಣೆಯಲ್ಲಿ ವಸೂಲಿ ಸರ್ಕಾರವು ಲೂಟಿಗೆ ಉತ್ತರವನ್ನು ಪಡೆಯುತ್ತದೆ” ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇಳಿಕೆಯ ನಂತರ, ದೆಹಲಿಯಲ್ಲಿ ಪೆಟ್ರೋಲ್ ದರವು ಪ್ರಸ್ತುತ ? ೧೧೦ ಕ್ಕಿಂತ ಹೆಚ್ಚು ? ೧೦೫ ಕ್ಕೆ ಇಳಿಯುತ್ತದೆ. ಡೀಸೆಲ್ ದರ ಲೀಟರ್‌ಗೆ ?೯೮ ರಿಂದ ಸುಮಾರು ?೮೮ ಕ್ಕೆ ಇಳಿಕೆಯಾಗಲಿದೆ.ದರವನ್ನು ಮತ್ತಷ್ಟು ಇಳಿಸುವಂತೆ ಕೇಂದ್ರವು ರಾಜ್ಯಗಳನ್ನು ಒತ್ತಾಯಿಸಿತು, ಅದರ ನಂತರ ಹಲವಾರು ರಾಜ್ಯ ಸರ್ಕಾರಗಳು ಇಂಧನ ದರಗಳಲ್ಲಿ ಕಡಿತವನ್ನು ಘೋಷಿಸಿದವು.