
ಬೀದರ್: ಎ.11:ಪವಾಡ ಪುರುಷ ಭಕ್ತರ ಕಲ್ಪವೃಕ್ಷ ಕಲ್ಯಾಣ ಕರ್ನಾಟಕದ ಲಕ್ಷಾಂತರ ಜನರ ಮನೆಯ ಕುಲ ದೇವರಾದ ಭದ್ರೆಶ್ವರ ಸ್ವಾಮಿ ಬೀದರ್ ತಾಲುಕಿನ ಬಾವಗಿ ಶ್ರೀ ಗುರು ಭದ್ರೆಶ್ವರ ಸ್ವಾಮಿಯ ದೇವರ ಜಾತ್ರೆಯ ಮೂರನೇ ದಿನ ರಥೋತ್ಸವ ಪಲ್ಲಕ್ಕಿ ಮರೆವಣಿಗೆ ಪಾದ ಪೂಜೆ ಅಗ್ನಿ ತುಳಿಯವ ಕಾರ್ಯಕ್ರಮಗಳನ್ನು ವಿಜ್ರಂಭಣೇಯಿಂದ ಜರುಗಿದವು ರವಿವಾರ ಮಧ್ಯ ರಾತ್ರಿ ನಡೆದ ಮೆರವಣಿಗೆ ಹಾಗು ರಥೋತ್ಸವ ಕಾರ್ಯಕ್ರಮಕೆ ಸಹಸ್ರಾರು ಭಕ್ತರು ಹಾಜರಾಗಿದ್ದರು ಇದಕ್ಕೂ ಮೂದಲು ರಥೋತ್ಸವ ಕಾರ್ಯಕ್ರಮಕ್ಕೆ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ರು ಸ್ವಾಮಿಗಳು ಚಿಕ್ಕಮಠ ಹಳ್ಳಿಖೆಡ ಶ್ರೀ ಭದ್ರೇಶ್ವರ ಸಂಸ್ಥಾನದ ಮಠದ ಶಿವುಕುಮಾರ ಸ್ವಾಮಿಗಳು ಭದ್ರಯ್ಯ ಸ್ಚಾಮಿ ಮಂಗಳಾರತಿ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು
ರಥ ಸಾಗುತ್ತಿದ್ದಂತೆ ನೆರೆದ
ಲಕ್ಷಾಂತರ ಭಕ್ತರೆಲ್ಲ ಹರ ಹರ ಮಹಾದೇವ್ ಭದ್ರೇಶ್ವರ ಮಹಾರಾಜ್ ಕೀ ಜೈ ಎಂಬ ಜೈಕಾರ ಹಾಕುತ್ತಾ ರಥ ಬೀದಿಯಲ್ಲಿ ತೇರು ಎಳೆದು ಸಂಭ್ರಮಿಸಿದರು ರಥೋತ್ಸವದಲ್ಲಿ ಜಾಂಜ ಮೇಳ ಡೊಳ್ಳು ಕುಣಿತ ಹೆಜ್ಜೆ ಮೇಳ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು
ರಥೋತ್ಸವ ನೋಡಲು ಬಂದಿದ ಭಕ್ತರಲ್ಲ ರಥಕ್ಕೆ ಬಾಳೆಹಣ್ಣು ಬೆಂಡು ಬತಾಸಿ ಎಸೆದು ಭಕ್ತಿ ಭಾವಕ್ಕೆ ಸಾಕ್ಷಿಯಾದರು
ನಂತರ ಶ್ರೀ ಪಂಡಿತರಾದ ಶ್ರೀಗಳು ಭಕ್ತ ಸಮುದಾಯದ ಜೊತೆ ಹೆಜ್ಜೆ ಹಾಕುತ್ತಾ ಬಂದ ಭಕ್ತರಿಗೆ ಆಶೀರ್ವಾದ ನೀಡಿದರು
ಕಾರ್ಯಕ್ರಮ ಸ ರೆ ಗ ಮ ಪ ದ ಖ್ಯಾತ ಗಾಯಕ ಡಾ” ಪಂ ಪುಟ್ಟರಾಜ ಗುರುಗಳ ಶಿಶ್ಯರಾದ ಸೃಷ್ಟಿ ಸುರೇಶ್ ರೇವಣಸಿದ್ದ ಸಂಗೀತದ ರಸದೌತಣ ಉಣ ಬಡಿಸಿದರು ಪುರವಂತರ ಸೇವೆ ಮೈನವಿರೆಳಿಸಿತು
ಶಾಸಕ ಬಂಡೆಪ್ಪ ಕಾಶಂಪುರ್ ಡಾಕ್ಟರ್ ಶೈಲೇಂದ್ರ ಬೆಲ್ದಾಳೆ ಅಶೋಕ್ ಖೇಣಿ ಚಂದ್ರ ಸಿಂಗ್ ನಶೂಮೋದಿನ್ ಪಟೇಲ್ ವಿಜಯಕುಮಾರ್ ಪಾಟೀಲ್ ಸುರೇಶ್ ಚನಶೆಟಿ ಹಲವು ರಾಜಕೀಯ ಮುಖಂಡರು ದರ್ಶನ ಪಡೆದರು
ಗ್ರಾಮದ ಪ್ರಮುಖರಾದ ,ಚನಮಲಪ್ಪ ಹಜರಗಿ ಶಾಂತವೀರ ಹಜರಗಿ ರಾಜುಕುಮಾರ ಪಾಟೀಲ್ ಶರಣಪ್ಪ ಮುದ್ದಾ ರೇವಣಪ್ಪ ಭದ್ರಣ ಜಗನಾಥ ಚಿದ್ರಿ ಸಂಗಮೇಶ ಹಜ್ಜರಗಿ ಲೋಕೇಶ್ ಕನಶೆಟಿ ಸಿದ್ದಾರೋಡ್ ಬಾಲ್ಕೆ ರಾಜಕುಮಾರ್ ಪರಿಟ್ ಸಂತೋಷ್ ಜಗ್ಗದಾಳೆ ಸೇರಿದಂತೆ ಗ್ರಾಮಸ್ಥರು ಇದ್ದರು.