ಭದ್ರಾ ಮೇಲ್ದಂಡೆ ಯೋಜನೆಗೆ ಶೀರ್ಘದಲ್ಲೇ ಭೂಮಿಪೂಜೆ

ಜಗಳೂರು.ನ.೫;  ಬಿಜೆಪಿ ಸರ್ಕಾರ ಅಧಿಕಾರ ಬಂದ ನಂತರ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಯಡಿ 48 ಸಾವಿರ ಹೆಕ್ಟರ್ ಪ್ರದೇಶಕ್ಕೆ ಹನಿ ನೀರಾವರಿ ಪದ್ದತಿ ಅಳವಡಿಕೆಯಾಗಲಿದ್ದು, ಶೀರ್ಘದಲ್ಲೇ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ತಾಲೂಕಿನ ಜಮ್ಮಾಪುರ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿ, ಸದಾ ಬರಗಾಲಕ್ಕೆ ತುತ್ತಾಗುತ್ತಿದ್ದ ಜಗಳೂರು ತಾಲೂಕು ಈ ಬಾರಿ ಉತ್ತಮ ಮಳೆಯಿಂದ ಕೆರೆ-ಕಟ್ಟೆಗಳು ತುಂಬಿ ಜೀವ ಕಳೆದ ಬಂದಿದೆ. ಆದರೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ 160ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆ, ಜಲ ಮೀಷನ್ ಯೋಜನೆಯಿಂದ ಮನೆ ಮನೆಗೂ ನಲ್ಲಿ ಅಳವಡಿಸಿ ಕುಡಿಯುವ ನೀರು ಪೂರೈಕೆ ಸೇರಿದಂತೆ ಸುಮಾರು 4 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಪಡಿಸಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಜಗಳೂರು ಸಂಪೂರ್ಣ ನೀರಾವರಿ ಪ್ರದೇಶವಾಗಿ ಅರೆ ಮಲೆನಾಡಾಗಿ ಹಸಿರಿನಿಂದ ತುಂಬಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಮ್ಮಾಪುರ ಗೊಲ್ಲರಹಟ್ಟಿ ಪ್ರಮುಖ ಬೀದಿಗಳನ್ನು ಸಿಸಿ ರಸ್ತೆಗಳನ್ನಾಗಿ ಮಾಡಿ ಅಭಿವೃದ್ದಿ ಪಡಿಸಲಾಗುವುದು, ಜಮ್ಮಾಪುರ ಎಸ್ಸಿ ಕಾಲನಿಯ ಕೊಲ್ಲಾರಮ್ಮ ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ದುರುಗಮ್ಮ ವೆಂಕಟೇಶ್, ಉಪಾಧ್ಯಕ್ಷ ಓಬಳೇಶ್, ಸದಸ್ಯರಾದ ಬಿ. ಬಾಲಪ್ಪ, ಜಿ.ಬಸವರಾಜಪ್ಪ, ಟಿ.ಜಿ ಬಾಲಪ್ಪ, ಬಾಕಕೃಷ್ಣ, ಕಟ್ಟಿಗೆಹಳ್ಳಿ ಭಾರತಮ್ಮ, ವೀರಣ್ಣ, ಪಾಂಡುರAಗಪ್ಪ, ಪಟೇಲ್‌ಗೌಡ್ರು ಚಂದ್ರಪ್ಪ, ಮುಖಂಡರಾದ ಕಟ್ಟಿಗೆಹಳ್ಳಿ ಮಂಜಣ್ಣ, ಬಿದರಕೆರೆ ರವಿ, ಪಟೇಲ್ ಚಂದ್ರಪ್ಪ, ಮಾಜಿ ಚೇರ್ಮನ್ ನಿಂಗಪ್ಪ, ಬಸವರಾಜಯ್ಯ, ಶರಣಪ್ಪ, ಚಿಕ್ಕಣ್ಣ, ಬಾಲರಾಜು ಸೇರಿದಂತೆ ಇತರರು ಇದ್ದರು. ಜಮ್ಮಾಪುರ ಕೆರೆಗೆ ಶಾಸಕ ಎಸ್.ವಿ.ರಾಮಚಂದ್ರ ಶುಕ್ರವಾರ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳೊAದಿಗೆ ಮಹಿಳೆಯರು ಭಾಗವಹಿಸಿದ್ದರು.