ಭದ್ರಾ ಜಲಾಶಯದಿಂದ ನೀರು ಬಿಡುಗಡೆ; ರೈತರ ಸಂತಸ

ಶಿವಮೊಗ್ಗ, ಸೆ. ೧೪: ಶಿವಮೊಗ್ಗ – ದಾವಣಗೆರೆ ರೈತರ ಜೀವನಾಡಿ ಎಂದೇ ಕರೆಯಲಾಗುವ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಡ್ಯಾಂನಿAದ ನೀರನ್ನು ಹೊರಬಿಡಲಾಗುತ್ತಿದೆ.
ಡ್ಯಾಂನ ನೀರಿನ ಮಟ್ಟ ೧೮೫ ಅಡಿ ೭ ಇಂಚು (ಗರಿಷ್ಠ ಮಟ್ಟ : ೧೮೬) ತಲುಪುತ್ತಿದ್ದಂತೆ ಡ್ಯಾಂನ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಹರಿಸಲಾಯಿತು. ಇಂದು ಬೆಳಿಗ್ಗೆ ೮ ಗಂಟೆ ಮಾಹಿತಿ ಅನುಸಾರ ಡ್ಯಾಂ ನ ಒಳಹರಿವು ೮೬೫೩ ಕ್ಯೂಸೆಕ್ ಇದ್ದು ೨೨೮೮ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.ಡ್ಯಾಂನಿAದ ನೀರು ಹೊರ ಬಿಟ್ಟಿದ್ದರಿಂದ ಭದ್ರಾವತಿ ಮೂಲಕ ಹಾದು ಹೋಗಿರುವ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಈಗಾಗಲೇ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ನಿವಾಸಿಗಳಿಗೆ ಎಚ್ಚರದಿಂದಿರುವAತೆ ಸೂಚಿಸಲಾಗಿದೆ. ೧೦ ಅಡಿ ಬಾಕಿ: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಗರಿಷ್ಠ ಮಟ್ಟ ತಲುಪಲು ಇನ್ನೂ ಕೇವಲ ೧೦ ಅಡಿ ನೀರು ಮಾತ್ರ ಬೇಕಾಗಿದೆ. ಪ್ರಸ್ತುತ ಡ್ಯಾಂ ನ ನೀರಿನ ಮಟ್ಟ ೧೮೦೯.೨೫ ( ಗರಿಷ್ಠ ಮಟ್ಟ ೧೮೧೯) ಅಡಿಯಿದೆ. ೧೨,೨೫೪ ಕ್ಯೂಸೆಕ್ ಒಳಹರಿವಿದೆ. ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಮಳೆ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ಕಳೆದ ವರ್ಷ ಆಗಸ್ಟ್ ಮಾಸಾಂತ್ಯದ ವೇಳೆಗೆ ಡ್ಯಾಂ ಗರಿಷ್ಠ ಮಟ್ಟ ತಲುಪಿತ್ತು.
ತುಂಗಾ ಜಲಾಶಯದ ಒಳಹರಿವು ೧೧,೩೨೪ ಕ್ಯೂಸೆಕ್ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟವಾದ ೫೮೮.೨೪ ಅಡಿ ತಲುಪಿದೆ. ಇಂದು ಬೆಳಿಗ್ಗೆ ೮.೩೦ ಕ್ಕೆ ಕೊನೆಗೊಂಡತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ೭ ತಾಲೂಕು ವ್ಯಾಪ್ತಿಯಲ್ಲಿ ಬಿದ್ದ ಮಳೆ ವಿವರ ಈ ಮುಂದಿನAತಿದೆ. ಶಿವಮೊಗ್ಗ ೧೦.೬೦ ಮಿಲಿ ಮೀಟರ್ (ಮಿ.ಮೀ), ಭದ್ರಾವತಿ ೨.೪೦ ಮಿ.ಮೀ., ತೀರ್ಥಹಳ್ಳಿ ೧೯.೨೦ ಮಿ.ಮೀ., ಸಾಗರ ೪.೨೦ ಮಿ.ಮೀ., ಶಿಕಾರಿಪುರ ೭ ಮಿ.ಮೀ., ಸೊರಬ ೬.೨೦, ಹೊಸನಗರದಲ್ಲಿ ೯.೪೦ ಮಿ.ಮೀ.ವರ್ಷಧಾರೆಯಾಗಿದೆ.