ಭದ್ರಾವತಿ ಪೌರಕಾರ್ಮಿಕ ಕೆ.ಸುನೀಲ ಹತ್ಯೆ ಖಂಡಿಸಿ ಪ್ರತಿಭಟನೆ

ವಿಜಯಪುರ, ಮೇ.29-ಶಿವಮೋಗ ಜಿಲ್ಲೆ ಭದ್ರಾವತಿ ನಗರಸಭೆಯ ಪೌರಕಾರ್ಮಿಕ ಕೆ.ಸುನೀಲ ಅವರ ಕೋಲೆ ಮಾಡಿದ ದುಷ್ಕರ್ಮಿಗಳನ್ನ ಕೂಡಲೆ ಬಂಧಿಸುವಂತೆ ಮತ್ತು ಕಾನೂನು ಕ್ರಮ ಜರುಗಿಸುವಂತೆ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲೇ ಪ್ರತಿಭಟಿಸಲಾಯಿತು.
ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಸುನೀಲ ಅವರು ಅನ್ವರ್ ಕಾಲನಿಯಲ್ಲಿ ಮಾಸ್ಕ್ ಧರಿಸುವಂತೆ ನಾಗರಿಕರಿಗೆ ತಿಳಿ ಹೇಳುತ್ತಿದ್ದ ಸಂದರ್ಭದಲ್ಲಿ ಅವರು ಮೇಲೆ ದುಷ್ಕರ್ಮಿಗಳು ಪೌರಕಾರ್ಮಿಕ ಕೆ.ಸುನೀಲ ಮತ್ತು ಸಹೋದ್ಯೋಗಿ ಶ್ರೀಕಂಠನ ಮೇಲೆ ರ್ಬಬರವಾಗಿ ಹಲ್ಲೆ ಮಾಡಿದ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸುನೀಲ್ ಅವರು ಸಾವನ್ನಪ್ಪಿದ್ದು ರಾಜ್ಯದಲ್ಲಿ ಕರ್ತವ್ಯ ನಿರತ ಪೌರಕಾರ್ಮಿಕರ ನ್ನ ಪ್ರಂಟ್ ಲಾಯ್ಯನ್ ವಾರಿಯರ್ ಎಂದು ಘೋಷಿಸಿದರೂ ಕೂಡ ಜೀವನ ಭದ್ರತೆ ಇಲ್ಲದಂತೆಯಾಗಿದೆ. ಕಾರ್ಮಿಕನ ಹತ್ಯೆ ಹಿಂದಿನ ಕಾಣದ ಕೈಗಳನ್ನು ಕಾನೂನು ಮೂಲಕ ಕ್ರಮ ಜರುಗಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಮತ್ತು ಹತ್ಯೆಯಾದ ಪೌರಕಾರ್ಮಿಕನನ್ನು ಕೊರೋನಾ ವಾರಿಯರ್ ಎಂದು ಗೌರವಿಸಿ ಅವರ ಕುಟುಂಬಕ್ಕೆ ಕೂಡಲೆ 25 ಲಕ್ಷ ರೂಪಾಯಿ ಪರಿಹಾರ ಮತ್ತು ಅನುಕಂಪ ಆಧಾರದ ಮೇಲೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸದ ನೇಮಕಾತಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಲಕ್ಷ್ಮಣ ಹಂದ್ರಾಳ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ದಯಾನಂದ ಅಲಿಯಾಬಾದ. ಶಿವಶಂಕರ ಕಟಕೆ.ಗೋವಿಂದ ಕನ್ನೂರ.ಶೇಟ್ಟೇವ ಲಂಬು.ನೀಲಮ್ಮ ಮೂಲಿಮನಿ.ಯಲ್ಲವ್ವ ಅಕ್ಕಲಕೋಟ.ಹನಮಂತ ಗೊಲ್ಲರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.