ಭದ್ರಾನಾಲೆಯಲ್ಲಿ ನೀರು ನಿಲುಗಡೆ ಖಂಡಿಸಿ ಸೆ.೨೫ ಕ್ಕೆ ದಾವಣಗೆರೆ ಬಂದ್

ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೩; ಭದ್ರಾ ನಾಲೆಯಲ್ಲಿ ನೀರು ನಿಲುಗಡೆ ಮಾಡಿರುವುದನ್ನು ಖಂಡಿಸಿ ಸೆ.೨೫ ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೪ ರವರೆಗೆ ದಾವಣಗೆರೆ ಬಂದ್ ಮಾಡಲಾಗುವುದು ದಾವಣಗೆರೆ ಜನತೆ ರೈತರ ಬಂದ್ ಗೆ ಬೆಂಬಲ ನೀಡಬೇಕೆಂದು ಭಾರತೀಯ ರೈತ ಒಕ್ಕೂಟದ ಸದಸ್ಯರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ‌ಮುಖಂಡರಾದ ಶಾಮನೂರು ಲಿಂಗರಾಜ್ ಭದ್ರಾ ಜಲಾಶಯದಲ್ಲಿ ಪ್ರಸ್ತುತ ೪೩.೩೮೧ ಟಿಎಂಸಿ ನೀರಿದೆ.ಆದರೆ ರಾಜಕೀಯ ಕಾರಣಗಳಿಗಾಗಿ ದಾವಣಗೆರೆ ಜಿಲ್ಲೆಗೆ ನೀರು ಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.ದಾವಣಗೆರೆ ಜಿಲ್ಲೆಗೆ ಆಫ್ ಅಂಡ್ ಆನ್ ಪದ್ಧತಿ ಮೂಲಕ ನೀರು‌ಹರಿಸಲಾಗುತ್ತಿದೆ.ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಹಿತ ಕಾಪಾಡುತ್ತಿಲ್ಲ.ಭದ್ರಾ ಬಲದಂಡೆ ನಾಲೆಯಲ್ಲಿ ಐಸಿಸಿ ಸಮಿತಿ ತೀರ್ಮಾನದಂತೆ 100 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಸೆ.೨೫ ರಂದು ದಾವಣಗೆರೆ ಬಂದ್ ಮಾಡಲಾಗುವುದು ಈ ಬಂದ್ ಗೆ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ‌  ನೀಡಿ‌  ರೈತರ ಹಿತ ಕಾಪಾಡಬೇಕೆಂದರು.ನೂರುದಿನ‌ ಸತತ ನೀರು ಹರಿಸಲು‌ ಒತ್ತಾಯಿಸಿ‌ ಒಂದು ವಾರದಿಂದ ಹೋರಾಟ ನಡೆಸುತ್ತಿದ್ದೇವೆ ಆದರೂ ರೈತರಿಗೆ ನೆರವು ನೀಡಿಲ್ಲ ಎಂದರು.ನೂರು ದಿನ ನೀರು ಹರಿಸುವ ಬಗ್ಗೆ ಲಿಖಿತ ಆದೇಶ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.ರೈತ ಮುಖಂಡ ಬಿ.ಎಂ ಸತೀಶ್ ಮಾತನಾಡಿರೈತರು ಶಾಂತಿಯುತ ಹೋರಾಟದ ಮೂಲಕ ನಮ್ಮ ಹಕ್ಕು ಕೇಳುತ್ತೇವೆ. ನಾಲೆಯಲ್ಲಿ ನೀರು ಹರಿಸಿದ್ದರಿಂದ ಸಾವಿರ ರೂಪಾಯಿ ಖರ್ಚು ಮಾಡಿ ಭತ್ತದ ನಾಟಿ ಮಾಡಿದ್ದೇವೆ. ಈಗ ಜಲಾಶಯದಲ್ಲಿ ನೀರಿಲ್ಲ ಎಂಬ ಕಾರಣ ನೀಡಿ ಏಕಾಏಕಿ ನೀರು ನಿಲ್ಲಿಸಿರುವುದರಿಂದ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದರು.ಮತ್ತೊರ್ವ ರೈತ ಮುಖಂಡ ನಾಗೇಶ್ವರರಾವ್ ಮಾತನಾಡಿ ಭತ್ತ ಕೈಗೆ ಬರುವ ಸಮಯದಲ್ಲಿ ನೀರು ನಿಲ್ಲಿಸುವುದು ಖಂಡನೀಯ.ಸರ್ಕಾರ ರೈತರೊಂದಿಗೆ ಚೆಲ್ಲಾಟ ಮಾಡಬಾರದು. ಈಗಾಗಲೇ ೬೦% ನೀರು‌ನೀಡಿದ್ದಾರೆ.ಉಳಿದ ೪೦% ನೀರು ಬಿಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಕುಂದುವಾಡದ ಗಣೇಶಪ್ಪಕಕ್ಕಗೊಳ್ಳದ ಕಲ್ಲಿಂಗಪ್ಪ,ಬಸಪ್ಪ , ಮಂಜುನಾಥ್, ಮಹೇಶಪ್ಪ, ಎ.ಪ್ರಕಾಶ್ ,ಹನುಮಂತಪ್ಪ, ಪುನೀತ್,ವಿಜಯಕುಮಾರ್, ಉಜ್ಜಣ್ಣ,ಆರನೇಕಲ್ ಮಂಜುನಾಥ್, ಕುಂದುವಾಡ ಚಂದ್ರಪ್ಪ ಹೆಚ್.ಎನ್ ಗುರುನಾಥ್ ಉಪಸ್ಥಿತರಿದ್ದರು.