ಭದ್ರನಾಲೆ ಸ್ವಚ್ಛಗೊಳಿಸಲು ಅನುದಾನ ಬಿಡುಗಡೆ ಮಾಡಲು ಮನವಿ 

 ಸಂಜೆವಾಣಿ ವಾರ್ತೆ 

ಹರಿಹರ ಆ.೨೨: ಹೂಳು  ಎತ್ತಲು ಅನುದಾನ  ಮಂಜೂರು ಮಾಡಿಕೊಡಬೇಕೆಂದು ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್ಎಚ್ ಶ್ರೀನಿವಾಸ್   ಉಪಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಗೆ ಮನವಿ ಸಲ್ಲಿಸಿದರು.ಕ ನಿ ನೀ ಭದ್ರಾ ನಾಲಾ ವಿಭಾಗ ಮಲೆಬೆನ್ನೂರಿನಲ್ಲಿ ಸಹಾಯಕ ಅಭಿಯಂತರ 1 ಹುದ್ದೆ ಸಹಾಯಕ ಕಾರ್ಯಪಲಕರ ಅಭಿಯಂತರರ 2 ಹುದ್ದೆ  ಸಹಾಯಕ ಇಂಜಿನಿಯರ್ 6 ಹುದ್ದೆ  ಹಾಗೂ ಕಿರಿಯ ಇಂಜಿನಿಯರ್ 4 ಹುದ್ದೆಗಳು ಖಾಲಿ ಇದ್ದು    ಸದರಿ ಹುದ್ದೆಗಳಿಗೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿಕೊಳ್ಳಲು ಇಲಾಖೆ ವ್ಯಾಪ್ತಿಯ ನಾಲೆಗಳಲ್ಲಿ ಸಾಕಷ್ಟು ಹೂಳು  ತುಂಬಿದ್ದು ಎತ್ತಲು ಅನುದಾನ ಬಿಡುಗಡೆ ಭದ್ರಾ ನಾಲೆಯ  ದಿನಗೂಲಿ ನೌಕರರ  ಸುಮಾರ ಆರು ತಿಂಗಳ ವೇತನ ಬಾಕಿ ಇದ್ದು ಕೂಡಲೇ ಬಿಡುಗಡೆ ಮಾಡಿಕೊಡಬೇಕು ಹರಿಹರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಗಮನವಹಿಸಬೇಕೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು