ಭದ್ರತೆಯ ವಿಶ್ವಾಸ ಮೂಡಿಸಿದ ಸಶಸ್ತ್ರ ಸೀಮಾ ಬಲ ಪಡೆ

ಗದಗ, ಏ.8: ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅವರಲ್ಲಿ ಭದ್ರತೆಯ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಸಶಸ್ತ್ರ ಸೀಮಾ ಬಲ (ಎಸ್.ಎಸ್.ಬಿ) ಪಡೆಯ ಯೋಧರು ಗದಗ ನಗರದ ವಿವಿಧ ಪ್ರದೇಶಗಳಲ್ಲಿ ಅಭಯ ಪಥ ಸಂಚಲನ ನಡೆಸಿ ಸಾರ್ವಜನಿಕ ವಲಯದಲ್ಲಿ ಸಂಚಲನವನ್ನುಂಟು ಮಾಡಿದರು.
ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ನಿರ್ಭೀತಿಯಿಂದ ಮತ ಚಲಾವಣೆ ಮಾಡಬೇಕು ಪುಂಡ ಪೆÇೀಕರಿಗಳು ತಮ್ಮ ಯಾವುದೇ ದುಷ್ಕøತ್ಯ ನಡೆಸಲು ಸಾಧ್ಯವಿಲ್ಲ, ಸಾರ್ವಜನಿಕರ ರಕ್ಷಣೆಗೆ ನಾವಿದ್ದೇವೆ ಎನ್ನುವಂತೆ ಸಶಸ್ತ್ರ ಸೀಮಾ ಬಲ (ಎಸ್.ಎಸ್.ಬಿ) ತಂಡವು ಗದಗ ಶಹರ ಪೆÇೀಲಿಸ್ ಠಾಣೆಯಿಂದ ನಗರದ ಕೆ.ಎಚ್.ಪಾಟೀಲ ವೃತ್ತ, ಬಸವೇಶ್ವರ ವೃತ್ತ, ವೀರನಾರಾಯಣ ದೇವಸ್ಥಾನ ರಸ್ತೆ, ಗಂಗಾಪೂರ ಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಸಿತು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪವಿಭಾಗಾಧಿಕಾರಿ ಅನ್ನಪೂರ್ಣ ಅವರು ಪಥ ಸಂಚಲನಕ್ಕೆ ಚಾಲನೆ ನೀಡಿದರು. ಖುದ್ದು ಅಧಿಕಾರಿಗಳು ಪಥಸಂಚಲನದಲ್ಲಿ ಭಾಗವಹಿಸಿ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವುದರ ಜೊತೆಗೆ ಭದ್ರತೆಯ ಭಾವನೆ ಮೂಡುವಂತೆ ಮಾಡಿದರು.
ವಿಧಾನಸಭಾ ಚುನಾವಣೆಯ ಬಂದೋಬಸ್ತಗಾಗಿ ಹಾಗೂ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯ ಪಾಲನೆ ದೃಷ್ಟಿಯಿಂದ ಜನರಲ್ಲಿ ಭದ್ರತೆಯ ಭಾವ ಮೂಡಿಸಲು, ಚುನಾವಣೆ ಕುರಿತು ಅರಿವು ಮೂಡಿಸಲು ಈ ತಂಡಗಳು ನೆರವಾಗಲಿವೆ. ಜಿಲ್ಲೆಗೆ ಎಸ್.ಎಸ್.ಬಿ.ಯ 3 ತಂಡಗಳು ಆಗಮಿಸಿದ್ದು ಪ್ರತಿ ತಂಡದಲ್ಲೂ ಅಂದಾಜು 80 ರಿಂದ 90 ಯೋಧರಿದ್ದು ಎರಡನೇ ಹಂತದಲ್ಲಿ ಇನ್ನೂ 4 ತಂಡಗಳು ಆಗಮಿಸಲಿದ್ದು ಪ್ರತಿ ಕ್ಷೇತ್ರಕ್ಕೂ ಅಗತ್ಯ ತಂಡಗಳ ನೀಯೋಜನೆಗೆ ಒಳಪಡಲಿವೆ.
ಪಥ ಸಂಚಲನದಲ್ಲಿ ಎಸ್.ಎಸ್.ಬಿ.ತಂಡದ ಅಸಿಸ್ಟಂಟ್ ಕಮಾಂಡೆಟ್ಸಗಳು, ಡಿ.ವೈ.ಎಸ್.ಪಿ ಗಳಾದ ಎಂ.ಬಿ.ಸಂಕದ, ವಾಯ್.ಎಸ್.ಎಗನಗೌಡರ ಸೇರಿದಂತೆ ಪೆÇೀಲಿಸ್ ಅಧಿಕಾರಿಗಳು ಭಾಗವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಅತ್ಯಂತ ಶಿಸ್ತು ಬದ್ಧವಾಗಿ ಕೈಯಲ್ಲಿ ಶಸ್ತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದ ಯೋಧರನ್ನು ಸಾರ್ವಜನಿಕರು ಆಶ್ಚರ್ಯ ಚಕಿತರಾಗಿ ವೀಕ್ಷಿಸಿದರು.